ಕದ್ದು ಮುಚ್ಚಿ ಶಿವಣ್ಣನ ಬಳಿ ರವಿಚಂದ್ರನ್ ಹಣ ಪಡೆದಿದ್ದೇಕೆ ? ಶಿವಣ್ಣ ಕೊಟ್ಟಿದ್ದೆಷ್ಟು ? ನೋಡಿ

ಸ್ಯಾಂಡಲವುಡ್

ನಟ ರವಿಚಂದ್ರನ್, ಅವರು ಆಗರ್ಭ ಶ್ರೀಮಂತರು, ಅವರ ತಂದೆ ಕೂಡ ಕನ್ನಡ ಸಿನಿಮಾರಂಗದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಅವರು ತಮ್ಮ ಇಡೀ ಪೀಳಿಗೆಗೆ ಸಾಕಾಗುವಷ್ಟು ಆಸ್ತಿಯನ್ನು ಸಂಪಾದಿಸಿದ್ದರು. ಇನ್ನು ಅವರ ಮಗ ರವಿಚಂದ್ರನ್ ಅವರು ಕೂಡ ನಟ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ. ಅವರ ಸಿನಿಮಾಗಳನ್ನು ಅಷ್ಟರ ಮಟ್ಟಿಗೆ ನಿರ್ದೇಶನ ಮಾಡುತ್ತಾರೆ. ಇನ್ನು ನಟ ರವಿಚಂದ್ರನ್ ಅವರು ಇಂದಿಗೂ ಸಹ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ನಟ ರವಿಚಂದ್ರನ್ ಅವರು ಸಿನಿಮಾಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅವರು ತಮ್ಮ ಸಿನಿಮಾಗಳ ನಿರ್ದೇಶನ ಮಾಡಲು ಸಾಕಷ್ಟು ವಿಭಿನ್ನ ಶೈಲಿಯನ್ನು ಹಾಗೆ ಸಾಕಷ್ಟು ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇನ್ನು ನಟ ರವಿಚಂದ್ರನ್ ಅವರಿಗೆ ಇದೀಗ ಇರಲು ಸಹ ಮನೆ ಇಲ್ಲದಂತಾಗಿದೆ. ಹೌದು ನಟ ರವಿಚಂದ್ರನ್ ಅವರಿಗೆ ಯಾವುದೇ ಕೆಟ್ಟ ಚಟ ಇಲ್ಲ. ಆದರೆ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ತಮ್ಮ ಸಿನಿಮಾಗಳ ಮೇಲೆ ಬಂಡವಾಳ ಹಾಕಿ ಎಲ್ಲವನ್ನೂ ಇದೀಗ ಕಳೆದುಕೊಂಡಿದ್ದಾರೆ.

ನಟ ರವಿಚಂದ್ರನ್ ಅವರು ಇತ್ತೀಚೆಗೆ ತಮ್ಮ ಮನೆಯನ್ನು ಸಹ ಮಾರಿದ್ದಾರೆ ಎನ್ನುವ ವಿಷಯವನ್ನು ಸ್ವತಃ ಅವರೇ ವೇದಿಕೆ ಮೇಲೆ ತಿಳಿಸಿದ್ದರು. ಇನ್ನು ಇದೀಗ ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ನಟ ರವಿಚಂದ್ರನ್ ಹಾಗೂ ನಟ ಶಿವಣ್ಣ ಇದೀಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ.

ಸದ್ಯ ಈ ಸಿನಿಮಾದ ಮುಹೂರ್ತಕ್ಕಾಗಿ ರವಿಚಂದ್ರನ್ ಶಿವಣ್ಣ ಸೇರಿದಂತೆ ಇಡೀ ಚಿತ್ರತಂಡ ದೇವಸ್ಥಾನಕ್ಕೆ ಭೇಟಿ ನೀಡಿದೆ. ಇನ್ನು ಇದೆ ವೇಳೆ ದೇವಸ್ಥಾನದಲ್ಲಿ ಅರ್ಚಕರು ಮಂಗಳಾರತಿ ತಟ್ಟೆ ತೆಗೆದುಕೊಂಡು ಬಂದಾಗ ಆಗ ರವಿಚಂದ್ರನ್ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸ್ವತಃ ಶಿವಣ್ಣ ತಮ್ಮ ಜೋಬಿನಿಂದ 500 ರೂಪಾಯಿಗಳನ್ನು ತೆಗೆದುಕೊಟ್ಟಿದ್ದಾರೆ.

ನಂತರ ಶಿವಣ್ಣ ಅವರ ಬಳಿ ಹಣ ಹೆಗೆದುಕೊಂದು ದೇವರಿಗೆ ಹಾಕಿದ ನಂತರ ಮೊದಲು ನಿಮ್ಮ ಅಪ್ಪ ನಂಗೆ ಹಣ ಕೊಡುತ್ತಿದ್ದರು, ಇದೀಗ ನೀನು ಕೊಡುತ್ತಿದ್ದಿಯಾ ಎಂದಿದ್ದಾರೆ. ಇದಕ್ಕೆ ಶಿವಣ್ಣ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *