ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕನ್ನಡದ ಹೆಮ್ಮೆಯ ಸಿನಿಮಾ ಕ್ರಾಂತಿಗಾಗಿ ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಕ್ರಾಂತಿ ಸಿನಿಮಾ ಡಿ ಬಾಸ್ ಅವರ ಮೊದಲ ಪಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಬಗ್ಗೆ ಎಲ್ಲರಲ್ಲೂ ಸಹ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದೆ. ಇನ್ನು ವರ್ಷಗಳ ನಂತರ ಡಿ ಬಾಸ್ ಹಾಗೂ ನಟಿ ರಚಿತಾ ರಾಮ್ ಈ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಹಾಗೂ ಡಿ ಬಾಸ್ ದರ್ಶನ್ ಅವರ ಕೆಮಿಸ್ಟ್ರಿ ಬುಲ್ ಬುಲ್ ಸಿನಿಮಾದಲ್ಲಿ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ನಂತರ ಈ ಇಬ್ಬರು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ನಟಿ ರಚಿತಾರಾಮ್ ಹಾಗೂ ಡಿ ಬಾಸ್ ದರ್ಶನ್ ಅಭಿಮಾನಿಗಳನ್ನೂ ರಂಜಿಸಲು ಮುಂದಾಗಿದ್ದಾರೆ.
ಇನ್ನೂ ಕ್ರಾಂತಿ ಸಿನಿಮಾವನ್ನು ಯಾವುದೇ ಮಾಧ್ಯಮದವರು ಪ್ರಚಾರ ಮಾಡುತ್ತಿಲ್ಲ. ಆಂಟಿ ಸಿನಿಮಾ ವನ್ನು ಮಾಧ್ಯಮದವರು ಬ್ಯಾನ್ ಮಾಡಿದ್ದಾರೆ. ಇದೀಗ ಯೂಟ್ಯೂಬ್ ಮಾಧ್ಯಮದವರು ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದು ಈ ಪ್ರಚಾರ ಕಾರ್ಯಕ್ರಮಗಳಿಗೆ ಡಿ ಬಾಸ್ ದರ್ಶನ್ ಹಾಗೂ ಚಿತ್ರ ತಂಡ ಆಗಮಿಸುತ್ತಿದ್ದಾರೆ.
ಇನ್ನು ಇದೀಗ ಪ್ರಚಾರದ ವೇಳೆ ಡಿ ಬಾಸ್ ದರ್ಶನ್ ಅವರಿಗೆ ಮಾಧ್ಯಮದವರ ಜೊತೆಗಿರುವ ಸಂಘರ್ಷದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಇದೀಗ ಡಿ ಬಾಸ್ ದರ್ಶನ್ ನೇರವಾಗಿ ಉತ್ತರಿಸಿದ್ದಾರೆ. ಹಾಗಾದರೆ ಡಿ ಬಾಸ್ ದರ್ಶನ್ ಹೇಳಿದ್ದೇನು ನೋಡೋಣ ಬನ್ನಿ..
ಮಾಧ್ಯಮದವರು ಯಾವುದನ್ನು ಸಹ ಸರಿಯಾಗಿ ತೋರಿಸುವುದಿಲ್ಲ. ಒಂದೇ ವಿಷಯವನ್ನು ನಾಲ್ಕು ದಿನಗಳ ಕಾಲ ತೋರಿಸುತ್ತಾರೆ. ಅಲ್ಲದೆ ಯಾವುದೇ ವಿಷಯಕ್ಕೂ ಸಹ ಕನ್ಕ್ಲೂಷನ್ ಕೊಡುವುದಿಲ್ಲ.ನಾವು ಸಿನಿಮಾ ಮಾಡಿ ಅದಕ್ಕೆ ಎಂಡಿಂಗ್ ಕೊಡದೇ ಇದ್ದರೆ ಅದು ಯಾವ ರೀತಿ ಕಾಣುತ್ತದೆ.
ಅದೇ ರೀತಿ ಮಾಧ್ಯಮದವರ ಸಹ ಯಾವತ್ತೂ ಯಾವುದೇ ವಿಷಯಕ್ಕೂ ಸಂಪೂರ್ಣವಾಗಿ ಉತ್ತರ ಕೊಡುವುದಿಲ್ಲ. ಈ ಕಾರಣದಿಂದ ನನ್ನ ಹಾಗೂ ಮಾಧ್ಯಮದವರ ನಡುವೆ ಸಂಘರ್ಷ ನಡೆಯುತ್ತಿರುತ್ತದೆ ಎಂದಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲಾಗುತ್ತಿದೆ ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…