ಸಿನಿಮಾ ರಂಗದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಸಾಮಾನ್ಯವಾಗಿ ಕಲಾವಿದರು ರಾಜಕೀಯಕ್ಕೆ ಪ್ರವೇಶಿಸಿರುವುದನ್ನು ನಾವು ನೋಡಿದ್ದೇವೆ. ಅದೆಷ್ಟು ನಟರು ಸಿನಿಮಾರಂಗದ ಜೊತೆಗೆ ರಾಜಕೀಯದಲ್ಲಿ ಸಹ ಸಕ್ರಿಯರಾಗಿದ್ದಾರೆ ,ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ದೊಡ್ಮನೆಯ ಕುಟುಂಬದವರು ಮಾತ್ರ ಕೇವಲ ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜಕೀಯದಿಂದ ಸಂಪೂರ್ಣ ದೂರ ಉಳಿದುಬಿಟ್ಟಿದ್ದಾರೆ. ಅಣ್ಣಾವ್ರು ಇದ್ದಾಗ ಅವರನ್ನು ರಾಜಕೀಯಕ್ಕೆ ಕರೆದಿರುವ ಪ್ರಯತ್ನ ಮಾಡಲಾಗಿತ್ತು ಆದರೆ ಅಣ್ಣಾವ್ರು ಮಾತ್ರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಅಣ್ಣಾವ್ರ ನಂತರ ಅವರ ಮಕ್ಕಳಾದ ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಸಹ ತಮ್ಮ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ಸಹ ಕೇವಲ ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದ್ದಾರೆ.
ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಹೋದ ನಂತರ, ದೊಡ್ಮನೆಯಾ ಸಂಪೂರ್ಣ ಜವಾಬ್ದಾರಿ ಇದೀಗ ಅಶ್ವಿನಿ ಪುನೀತ್ ಅವರ ಹೆಗಲ ಮೇಲಿದೆ. ಪಿ ಆರ್ ಕೆ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು, ಅಪ್ಪು ಅವರ ಕನಸುಗಳನ್ನು ನನಸು ಮಾಡಲು ಅಶ್ವಿನಿ ಅವರು ಮುಂದಾಗಿದ್ದಾರೆ.
ಇದೀಗ ಅಶ್ವಿನಿ ಪುನೀತ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಹೌದು ಅದೆಷ್ಟು ರಾಜಕೀಯ ನಾಯಕರು ಅಶ್ವಿನಿ ಅವರನ್ನು ಭೇಟಿ ಮಾಡಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ, ಎನ್ನುವ ಮಾತುಗಳು ಸದ್ಯ ಕೇಳಿ ಬರುತ್ತಿದೆ.
ಅದೆಷ್ಟು ದೊಡ್ಡ ದೊಡ್ಡ ರಾಜಕೀಯ ನಾಯಕರು ಅಶ್ವಿನಿ ಅವರಿಗೆ ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಅವರ ಮನೆಗೆ ಭೇಟಿ ನೀಡಿ ಒತ್ತಾಯ ಮಾಡಿದ್ದಾರೆ. ಅಶ್ವಿನಿ ಪುನೀತ್ ಅವರು ತಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಕಡ ಖಂಡಿತವಾಗಿ ಹೇಳಿದ್ದಾರೆ. ದೊಡ್ಮನೆಯವರು ಕೇವಲ ಸಿನಿಮಾರಂಗದಲ್ಲಿ ಅಭಿನಯಿಸಿ ಜನರನ್ನು ರಂಜಿಸುತ್ತಾರೆ,
ಯಾವುದೇ ಕಾರಣಕ್ಕೂ ರಾಜಕೀಯದ ಕಡೆಗೆ ಮುಖ ಮಾಡುವುದಿಲ್ಲ ಎಂದು ಅಶ್ವಿನಿ ಪುನೀತ್ ಅವರು ಹೇಳಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…