ನಮ್ಮ ಜನರು ಸಾಮಾನ್ಯವಾಗಿ ಏನೇ ಆದರೂ ಮೊದಲು ದೇವರ ಮೊರೆ ಹೋಗುತ್ತಾರೆ. ಹಾಗೆ ಕೆಲವರು ಜೋತಿಷ್ಯ ಶಾಸ್ತ್ರವನ್ನು ಬಹಳ ನಂಬುತ್ತಾರೆ. ತಮ್ಮ ರಾಶಿ, ತಮ್ಮ ಅಸ್ತ ರೇಖೆ ಹಾಗೆ ಇನ್ನಿತರಗಳಿಂದ ಜೋತಿಷ್ಯ ಕೇಳಿ ಏನಾದರೂ ಶಾಂತಿ ಹೋಮ ಮಾಡಿಸಬೇಕಾದರೆ ಅದನ್ನು ಮಾಡಿಸಿ ತಮ್ಮ ಮನೆಗೆ ಹಾಗೂ ತಮಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ.
ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸದಾ ಹೇಗಿರಬೇಕು, ಆಗಿರಬೇಕು ಎಂದು ಕೆಲವು ನಿಯಮಗಳು ಇರುತ್ತದೆ. ಏಕೆಂದರೆ ಹೆಣ್ಣು ಮಕ್ಕಳು ಮನೆಯ ಮಹಾಲಕ್ಷ್ಮಿಗೆ ಸಮಾನ. ಮನೆಯಲ್ಲಿ ಸದಾ ಮಹಾಲಕ್ಷ್ಮಿ ನೆಲಸಿರಬೇಕು ಎಂದರೆ, ಸದಾ ಸುಖ ಶಾಂತಿ ನೆಮ್ಮದಿ ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಲೇಬೇಕು.
ಹೌದು ಹೀಗೆಂದು ನಮ್ಮ ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಮನೆಯಲ್ಲಿನ ಹೆಣ್ಣು ಮಕ್ಕಳು ಮನೆಯವರ ಜೊತೆಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಎಲ್ಲರ ಜೊತೆಗೆ ಖುಷಿಯಾಗಿ ಇದ್ದರೆ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಅದೇ ಮನೆ ಹೆಣ್ಣು ಮಕ್ಕಳು ಸದಾ ಜಗಳವಾಡುತ್ತಾ, ಮನೆಯಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದರೆ,
ಆ ಮನೆ ನಾಶವಾಗುವುದರಲ್ಲಿ ಯಾವುದೇ ಒಂದು ಮಾತಿಲ್ಲ. ನಾನು ಅದೇ ರೀತಿ ಮನೆಯ ಹೆಣ್ಣು ಮಕ್ಕಳು ಯಾವ ಸಮಯಕ್ಕೆ ನಿದ್ದೆ ಮಾಡಬೇಕು ಹಾಗೂ ಯಾವ ಸಮಯದಲ್ಲಿ ಮಲಗಬಾರದು ಎನ್ನುವ ಕೆಲವು ನಿಯಮಗಳನ್ನು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೆಣ್ಣು ಮಕ್ಕಳು ದಿನವಿಡೀ ಮನೆಯಲ್ಲಿ ಕೆಲಸ ಮಾಡಿ ದಣಿದಿರುತ್ತಾರೆ ಈ ಕಾರಣದಿಂದ ಅವರು ತಡವಾಗಿ ಮಲಗುವುದು ಸಹಜ ಆದರೆ ತಡವಾಗಿ ಮಲಗಿದರೆ ತಲೆಯಲ್ಲಿ ಕೆಟ್ಟ ಯೋಚನೆಗಳು ತುಂಬಿಕೊಳ್ಳುತ್ತದೆ. ಅಲ್ಲದೆ ಅವರ ಮೇಲೆ ರಾಹು ಕೇತುವಿನ ಪ್ರಭಾವ ಜಾಸ್ತಿ ಇರುತ್ತದೆ ಎನ್ನಲಾಗುತ್ತದೆ.
ಅಲ್ಲದೆ ಮನೆಯ ಹೆಣ್ಣು ಮಕ್ಕಳು ಮನೆಯಲ್ಲಿ ಸಂಜೆಯ ಸಮಯದಲ್ಲಿ ಮಲಗುವುದರಿಂದ ಮನೆಗೆ ದಾರಿದ್ರ್ಯ ಬರುತ್ತದೆ ಎಂದು ಸಹ ನಮ್ಮ ಹಿರಿಯರು ಹೇಳಿದ್ದಾರೆ. ಇನ್ನು ಮನೆಯ ಹೆಣ್ಣು ಮಕ್ಕಳು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮಲಗಿದರೆ ಅವರಿಗೆ ಎಲ್ಲಾ ಶುಭವಾಗುತ್ತದಂತೆ,
ಅದನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ಮಲಗುವುದರಿಂದ ಮನೆಗೆ ಹಾಗೂ ಅವರಿಗೆ ಶ್ರೇಯಸ್ಸು ತರುವುದಿಲ್ಲ ಎನ್ನಲಾಗುತ್ತಿದೆ. ಇನ್ನು ಈ ನಿಯಮಗಳನ್ನು ನೀವು ಸಹ ಪಾಲಿಸಿ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿಯಿಂದಿರಿ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..