ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟರಾಜ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರು ತಾನು ಪ್ರೀತಿಸುತ್ತಿದ್ದ ಹುಡುಗಿ ಅವಿವಾ ಅವರಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ತಮ್ಮಿಬ್ಬರ ಸಂಬಂಧವನ್ನು ಅಫೀಷಿಯಲ್ ಆಗಿ ಎಲ್ಲರದುರು ಅನೌನ್ಸ್ ಮಾಡಿದ್ದಾರೆ.
ಇನ್ನು ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಫೋಟೋಗಳು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಇನ್ನು ಅವಿವಾ ಅವರು ಫ್ಯಾಶನ್ ಡಿಸೈನರ್ ಆಗಿದ್ದು, ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಇದೀಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ.
ಇನ್ನು ಅವಿವಾ ಅವರ ಪೂರ್ತಿ ಹೆಸರು ಅವಿವಾ ಬಿದ್ದಪ್ಪ, ಅವಿವಾ ಅವರ ತಂದೆ ಕೂಡ ಖ್ಯಾತ ಫ್ಯಾಶನ್ ಡಿಸೈನರ್. ಹೌದು ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಹೆಸರನ್ನು ನೀವು ಕೇಳಿರುತ್ತೀರಾ. ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಸಹ ಪ್ರಸಾದ್ ಬಿದ್ದಪ್ಪ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಬಾಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ ಅನುಷ್ಕಾ ಶರ್ಮ ನಂತಹ ನಟಿಯರಿಗೆ ಪ್ರಸಾದ್ ಬಿದ್ದಪ್ಪ ಡಿಸೈನರ್ ಆಗಿದ್ದಾರೆ. ಇಡೀ ಭಾರತ ದೇಶದಲ್ಲಿ ಪ್ರಸಾದ್ ಬಿದ್ದಪ್ಪ ಅವರು ಇದೀಗ ಖ್ಯಾತ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಪ್ರಸಾದ್ ಬಿದ್ದಪ್ಪ ಅವರು ಮೂಲತಃ ಕೊಡಗಿನವರು.
ಇನ್ನು ಇದೀಗ ಪ್ರಸಾದ್ ಬಿದ್ದಪ್ಪ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಇನ್ನು ಪ್ರಸಾದ್ ಬಿದ್ದಪ್ಪ ಅವರು, ಪ್ರಸಾದ್ ಬಿದ್ದಪ್ಪ ಅಸೋಸಿಯೇಷನ್ ಎಂಬ ಫ್ಯಾಷನ್ ಕಂಪನಿಯ ಮಾಲೀಕರು ಸಹ ಆಗಿದ್ದು, ಇದೀಗ ಅವರ ಮಗಳು ಅವಿವಾ ಬಿದ್ದಪ್ಪ ತಂದೆಯ ಎಲ್ಲಾ ಬಿಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನು ಅವಿವಾ ಬಿದ್ದಪ್ಪ ಹಾಗೂ ನಟ ಅಭಿಷೇಕ್ ಅಂಬರೀಶ್ ನಡುವೆ 5 ವರ್ಷಗಳ ಪರಿಚಯ ಇದ್ದು, ಆ ಸ್ನೇಹ ಇದೀಗ ಪ್ರೀತಿಗೆ ತಿರುಗಿ ಇಬ್ಬರೂ ಇದೀಗ ಅಸೆಮಣೆ ಹೇರಲು ಸಜ್ಜಾಗಿದ್ದಾರೆ. ಇನ್ನು ಅಂಬರೀಶ್ ಅವರು ಸಹ ಸುಮಲತಾ ಅವರನ್ನು ಪ್ರೇಮ ವಿವಾಹ ಆಗಿದ್ದರು.
ಇನ್ನು ಇದೀಗ ಅಭಿಷೇಕ್ ಅಂಬರೀಶ್ ಕೂಡ ಅವಿವಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಸದ್ಯ ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು, 29 ವರ್ಷದ ಅಭಿಷೇಕ್ ಅಂಬರೀಶ್ ಅವರು ತನಗಿಂತ ವಯಸ್ಸಿನಲ್ಲಿ ಮೂರು ವರ್ಷ ಹಿರಿಯವರಾದ 32 ವರ್ಷದ ಅವಿವಾ ಅವರನ್ನು ಮದುವೆಯಾಗುತ್ತಿದ್ದಾರೆ. ಇನ್ನು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.