ನಮ್ಮ ಕರುನಾಡ ಮುತ್ತು ಅಪ್ಪು ಇಂದು ನಮ್ಮ ಜೊತೆಗಿಲ್ಲ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ತಿಳಿದೇ ಇದೆ. ಅಪ್ಪು ಅವರ ನಮ್ಮನ್ನು ಬಿಟ್ಟು ಹೋದ ನಂತರ ಅವರ ಸ್ಥಾನದಲ್ಲಿ ಇದೀಗ ಅಶ್ವಿನಿ ಪುನೀತ್ ಅವರು ಮನೆಯ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಅಪ್ಪು ಅವರಿಗೂ ಸಹ ಸಾಕಷ್ಟು ಬಾರಿ ರಾಜಕೀಯಕ್ಕೆ ಬರುವಂತೆ ಸಾಕಷ್ಟು ಕರೆ ಬಂದಿತ್ತು. ಆದರೆ ಅಪ್ಪು ಅವರು ನಾನು ರಾಜಕೀಯಕ್ಕೆ ಬಂದು ಏನು ಮಾಡಲಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ. ನಾನು ನನ್ನ ಅಭಿಮಾನಿಗಳನ್ನು ಸಿನಿಮಾಗಳಲ್ಲಿ ಅಭಿನಯಿಸುತ್ತಾ ರಂಜಿಸುತ್ತೇನೆ ಎಂದಿದ್ದರು.
ಇನ್ನು ಅಪ್ಪು ಅವರ ನಿ*ಧ*ನ*ದ ನಂತರ ಮನೆಯ ಎಲ್ಲಾ ಜವಬ್ದಾರಿಯನ್ನು ಹಾಗೂ ಪಿ ಆರ್ ಕೆ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಅವರೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಅಶ್ವಿನಿ ಅವರಿಗೆ ರಾಜಕೀಯಕ್ಕೆ ಬನ್ನಿ ಎಂದು ಸಾಕಷ್ಟು ಶಾಸಕರು ಒತ್ತಾಯ ಮಾಡುತ್ತಿದ್ದಾರೆ.
ಹಾಗಾದರೆ ಅಶ್ವಿನಿ ಪುನೀತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ರಾಜಕಾರಣಿಗಳ ಒತ್ತಾಯಕೆ ಅಶ್ವಿನಿ ಪುನೀತ್ ಅವರು ಕೊಟ್ಟ ಉತ್ತರ ಏನು ಗೊತ್ತಾ? ಈ ರೀತಿಯ ಹಲವಾರು ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿದೆ, ಇದಕ್ಕೆಲ್ಲಾ ಉತ್ತರ ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ಓದಿ..
ಅಶ್ವಿನಿ ಪುನೀತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಷಯ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೆಷ್ಟೋ ಪಕ್ಷಗಳು ರಾಜಕೀಯಕ್ಕೆ ಬರುವಂತೆ ಅಶ್ವಿನಿ ಪುನೀತ್ ಅವರ ಮನೆಗೆ ಹೋಗಿ ಒತ್ತಾಯ ಮಾಡುತ್ತಿದ್ದಾರೆ.
ಇದಕ್ಕೆ ಅಶ್ವಿನಿ ಪುನೀತ್ ಅವರು ನಮ್ಮ ಮನೆ ಕಲಾವಿದರ ಮನೆ, ನಮ್ಮ ಮಾನವರಿಗೆ, ಶಿವಣ್ಣ ಹಾಗೂ ರಾಘಣ್ಣ ಹಾಗೂ ನನ್ನ ಪತಿ ಪುನೀತ್ ರಾಜ್ ಕುಮಾರ್ ಅವರಿಗೂ ಸಹ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿದ್ದರೂ, ಆದರೆ ಅವರ್ಯಾರೂ ರಾಜಕೀಯಕ್ಕೆ ಬಂದಿಲ್ಲ.
ನನ್ನನು ಕ್ಷಮಿಸಿ ನನಗೂ ಸಹ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ನಾವೆಲ್ಲರೂ ರಾಜಕೀಯದಿಂದ ಒಂದು ಹೆಜ್ಜೆ ದೂರ ಇರುತ್ತೇವೆ ಎಂದು ಕದಾಕಂದಿತವಾಗಿ ಅಶ್ವಿನಿ ಹೇಳಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.