ಕನ್ನಡ ಸಿನಿಮಾರಂಗದಲ್ಲಿ ಸದ್ಯ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ವಿಷಯ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥದ ವಿಷಯ. ಹೌದು ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ನಟ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ವಿಷಯ ಬಹಳ ಸುದ್ದಿಯಾಗುತ್ತಿದೆ.
ನಟ ಅಭಿಷೇಕ್ ಅಂಬರೀಶ್ ಅವರು ಇತ್ತೀಚೆಗೆ ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಯಾರಿಗೂ ತಿಳಿಯದೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಈ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಮ್ಟ್ರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.
ನಟ ಅಭಿಷೇಕ್ ಅಂಬರೀಶ್ ಹಾಗೂ ಅವೀವಾ ಅವರು ವಿದೇಶದಲ್ಲಿ ಓದುವ ಸಮಯದಲ್ಲಿ ಒಬ್ಬರನೊಬ್ಬರು ಭೇಟಿ ಮಾಡಿದರು. ಸ್ನೇಹಿತರಾಗಿದ್ದರು ಇವರ ನಡುವೆ ಪ್ರೀತಿ ಚಿಗುರಿ ನಂತರ ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿ ತಮ್ಮ ಪೋಷಕರನ್ನು ಒಪ್ಪಿಸಿ ಇತ್ತೀಚೆಗೆ ಎಲ್ಲರ ಸಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡಿದ್ದಾರೆ.
ಇಷ್ಟು ದಿನ ಅಭಿಷೇಕ್ ಅಂಬರೀಶ್ ಹಾಗೂ ಅವಿವಾಹಿ ಕುರಿತು ಅದೆಷ್ಟೋ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದರು ಸಹ ಇದ್ಯಾವುದಕ್ಕೂ ಆವಿವಾ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಅವೀವಾ ತಮ್ಮ ಭಾವಿ ಪತಿಯ ಕುರಿತು ಮಾತನಾಡಿದ್ದಾರೆ.
ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಫೋಟೋಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಈ ಫೋಟೋಗಳಿಗೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇನ್ನು ಇದೀಗ ಅವಿವಾ ಅವರು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ,
ತಮ್ಮ ಭಾವಿ ಪತಿ ಅಭಿಷೇಕ್ ಅಂಬರೀಶ್ ಅವರ ಫೋಟೋ ಹಂಚಿಕೊಂಡು ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ನಿಶ್ಚಿತಾರ್ಥಕ್ಕೆ ಶುಭ ಹಾರೈಸಿದ್ದ ಪ್ರತಿಯೊಬ್ಬರಿಗೂ ಅವಿವಾ ಅವರು ಧನ್ಯವಾದ ತಿಳಿಸಿದ್ದಾರೆ. ಇನ್ನು ನಾನು ತುಂಬಾ ಅದೃಷ್ಟವಂತೆ ಅಂಬರೀಶ್ ಅವರ ಮನೆಗೆ ಸೊಸೆಯಾಗಿ ಹೋಗುತ್ತಿದ್ದೇನೆ.
ತಾಯಿಯಂತೆ ಪ್ರೀತಿಸುವ ಅತ್ತೆ ನನಗೆ ಸಿಕ್ಕಿದ್ದಾರೆ. ಅಭಿಷೇಕ್ ಹಾಗೂ ನನ್ನದು ಸುಮಾರು ವರ್ಷಗಳ ಕಾಲ ಒಳ್ಳೆಯ ಸ್ನೇಹಿತರಾಗಿದ್ದರು ನಾವು ಇದೀಗ ಪತಿ ಪತ್ನಿಯರಾಗುತ್ತಿದ್ದೇವೆ. ಇನ್ನು ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರುರುಣಿ ಎಂದಿದ್ದಾರೆ ಅವಿವಾ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…