ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಎಂದೇ ಕ್ಯಾತಿ ಪಡೆದಿರುವ ನಟ ಶಿವರಾಜ್ ಕುಮಾರ್. ಶಿವಣ್ಣ ಅವರು ಕನ್ನಡ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇಂದಿಗೂ ಸಹ ಶಿವಣ್ಣ ಅವರ ಕ್ರೇಜ್ ಚಿತ್ರರಂಗದಲ್ಲಿ ಒಂದು ಚೂರೂ ಸಹ ಕಡಿಮೆಯಾಗಿಲ್ಲ.
ಅವರ ಸಿನಿಮಾಗಳು ಬಿಡುಗಡೆಯಾಗುತ್ತದೆ ಎಂದರೆ ಅವರ ಅಭಿಮಾನಿಗಳು ಇಂದಿಗೂ ಸಹ ಆ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಶಿವಣ್ಣ ಅವರ ಓಂ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಆಗಿನ ಕಾಲದ ಬ್ಲಾಕ್ ಬಾಷ್ಟರ್ ಹಿಟ್ ಸಿನಿಮಾ ಎಂದರೆ ಅದು ಓಂ. ಓಂ ಸಿನಿಮಾದಲ್ಲಿ ಶಿವಣ್ಣ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಆಗಿನ ಕಾಲದಲ್ಲಿ ಶಿವಣ್ಣ ಅವರ ಓಂ ಸಿನಿಮಾ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಯಾವ ಕನ್ನಡ ಸಿನಿಮಾ ಕೂಡ ಮಾಡಿರದ ದಾಖಲೆ ಬರೆದಿತ್ತು. ಇನ್ನು ಶಿವಣ್ಣ ಅವರಿಗೆ ಸುಮಾರು 60 ವರ್ಷ ವಯಸ್ಸಾಗಿದೆ, ಆದರೂ ಸಹ ಇಂದಿಗೂ ಅವರು ಯಾವ ಯಂಗ್ ಹಿರೋಗು ಸಹ ಕಡಿಮೆ ಇಲ್ಲದಂತೆ, ಅಭಿನಯಿಸುತ್ತಾರೆ.
ಸದ್ಯ ಶಿವಣ್ಣ ಅವರ ವೇದ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ವೇದ ಸಿನಿಮಾದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಓಂ ಸಿನಿಮಾದ ರೀತಿಯೆ ವೇದ ಸಿನಿಮಾ ಕೂಡ ಇದ್ದು, ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಸಾಧಿಸುತ್ತದೆ ಎನ್ನಲಾಗುತ್ತಿದೆ.
ಇನ್ನು ವೇದ ಸಿನಿಮಾವನ್ನು ನಿರ್ದೇಶಕ ಹರ್ಷ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾ ಇದೆ ಡಿಸೆಂಬರ್ 23 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಇತ್ತೀಚೆಗೆ ವೇದ ಸಿನಿಮಾದ ಪ್ರಚಾರ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು. ಇನ್ನು ವೇದಿಕೆ ಮೇಲೆ ನಿರ್ದೇಶಕ ಹರ್ಷ ಅವರು ಕೆಲವು ಮಾತುಗಳನ್ನು ಹೇಳಿದ್ದರು. ಸದ್ಯ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.
ಇತ್ತೀಚೆಗೆ ಸಿನಿಮಾಗಳು ಹೆಚ್ಚಾಗಿ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಕರ್ನಾಟಕದ ಸಿನಿಮಾಗಳು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಬೇಕು. ಇದಕ್ಕೆ ಸರ್ಕಾರ ಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ಚಿತ್ರಮಂದಿರಗಳನ್ನು ಕಟ್ಟಿಸಬೇಕು ಎಂದಿದ್ದಾರೆ.
ಇನ್ನು ಶಿವಣ್ಣ, ಯಶ್, ಸುದೀಪ್, ಹಾಗೂ ದರ್ಶನ್ ನೀವೆಲ್ಲಾ ನಮ್ಮ ಕರ್ನಾಟಕ ರಾಜ್ಯದ ರಾಯಭಾರಿಗಳು, ನೀವೆಲ್ಲರೂ ಸರ್ಕಾರಕ್ಕೆ ಪ್ರತಿಯೊಂದು ಗ್ರಾಮದಲ್ಲಿ ಒಂದು ಥಿಯೇಟರ್ ಅನ್ನು ಕಟ್ಟಿಸುವಂತೆ ಮಾಡಬೇಕು ಎಂದಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.