ನಟಿ ಮೇಘನಾ ರಾಜ್ ಯಾರಿಗಾದರೂ ಸ್ಫೂರ್ತಿಯಾಗಬಹುದಂತಃ ವ್ಯಕ್ತಿ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ನಂತರ ನಟಿ ಮೇಘನಾ ರಾಜ್ ಮತ್ತೆ ತಮ್ಮದೇ ಬದುಕು ಕಟ್ಟಿಕೊಳ್ಳುವ ದಿಟ್ಟ ಹೆಜ್ಜೆಗಳನ್ನು ನಟಿ ಇಟ್ಟಿದ್ದಾರೆ. ಮೇಘನಾ ರಾಜ್ ಕೆಟ್ಟ ದಿನಗಳನ್ನು ನೋಡಿದ್ದಾರೆ.
ಆದರೆ ಅದು ಅವರಿಗೆ ಹೊಸದೇನೂ ಅಲ್ಲ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಸೌಂದರ್ಯ ಹಾಗೂ ದೇಹ ತೂಕದ ಬಗ್ಗೆ ಯಾವುದೇ ಮಾತುಗಳು ಕೇಳದ ಮೇಘನಾ ಅವರಿಗೆ ಚಿತ್ರರಂಗಕ್ಕೆ ಬಂದ ನಂತರ ಈ ರೀತಿಯ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತಂತೆ.
ಆಕೆಯ ತೂಕ ದಪ್ಪ, ಆಕೆಯ ತ್ವಚೆ ಸರಿ ಇಲ್ಲ. ಆಕೆಯ ಬಣ್ಣ ಹಾಗೂ ಕೂದಲು ಸರಿ ಇಲ್ಲ. ಹೀಗೆ ಹಲವಾರು ಟೀಕೆಗಳನ್ನು ನಟಿ ಮೇಘನಾ ರಾಜ್ ಎದುರಿಸಿದರಂತೆ. ಈ ವೇಳೆ ಮಾಧ್ಯಮದವರು ನನಗೆ ಬೆಂಬಲ ನೀಡಿದ್ದರು ಕೂಡ ನನ್ನ ಚಿತ್ರರಂಗದವರೆ ನನ್ನನ್ನು ಕೆಳಗೆ ಎಳೆದು ಬಿಟ್ಟಿದ್ದರು ಎಂದಿದ್ದಾರೆ ನಟಿ ಮೇಘನಾ ರಾಜ್.
ನಾನು ನನ್ನ ಸಿನಿ ಜರ್ನಿ ಆರಂಭಿಸಿದ್ದು, ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ, ಈ ವೇಳೆ ನಾನು ಅದೆಷ್ಟೋ ಮಾತುಗಳನ್ನು ಕೆಳಬೇಕಾಯಿತು. ಈಕೆಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹಾಗೂ ಗೌರವ ಇಲ್ಲ, ಈ ಕಾರಣದಿಂದ ಈಕೆ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಳೆ.
ಇನ್ನು ಚಿತ್ರರಂಗದಲ್ಲಿ ನನಗೆ ಬಾಡಿ ಶೇಮಿಂಗ್ ಅಂತೂ ನಡೆಯುತ್ತಲೇ ಇತ್ತು. ಇನ್ನು ನನ್ನ ಮೊದಲ ಫೋಟೋ ಶೂಟ್ ನ ವೇಳೆ ಅದೆಷ್ಟೋ ಜನರು ನನ್ನ ತ್ವಚೆ ಹಾಗೂ ನನ್ನ ಕೂದಲಿನ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡಿಯೇ ಬಿಟ್ಟಿದ್ದಾರೆ ಇವೆಲ್ಲಾ ನೆನಪಿಸಿಕೊಂಡರೆ ನಿಜಕ್ಕೂ ಬೇಸರವಾಗುತ್ತದೆ ಎಂದಿದ್ದಾರೆ ನಟಿ ಮೇಘನಾ ರಾಜ್.
ಕೆಲವು ಮೇಕಪ್ ಮಾಡುವವರಂತೂ ನಿಮ್ಮ ಬಗ್ಗೆ ನಿಮಗೆ ಅನುಮಾನ ಬರುವಂತೆ ಮಾಡಿಬಿಡುತ್ತಾರೆ. ನನಗಂತೂ ಅಂತಹ ಅನುಭವ ಸಾಕಷ್ಟು ಆಗಿದೆ. ನಾನು ಅದೆಷ್ಟೋ ಬಾರಿ ಶೂ,ಟಿಂಗ್ ಲೊಕೇಶನ್ ಗೆ ಹೋಗುವುದಕ್ಕೆ ಹೆದರುತ್ತಿದೆ. ದಿನಗಳು ಕಳೆದಂತೆ ನನಗೂ ಇವೆಲ್ಲಾ ಅಭ್ಯಾಸವಾಗಿಬಿಟ್ಟಿತ್ತು.
ಇನ್ನು ನಾನು ಸಹ ಕಷ್ಟ ಪಟ್ಟು ಒಳ್ಳೆಯ ಶಿಪ್ ಗೆ ಬಂದೆ. ನಂತರ ಪೋಸ್ಟ್ ಪ್ರೆಗ್ನೆಂಸಿಯ ನಂತರ ಮತ್ತೆ ನನ್ನ ದೇಹದ ತೂಕ ಹೆಚ್ಚಾಯಿತು. ಇದೀಗ ಜನರು ಕೊಂಚ ದಯಾಳು ಆಗಿದ್ದಾರೆ. ಇದೀಗ ಮೊದಲಿಗಿಂತಲೂ ಕೊಂಚ ಕಡಿಮೆ ಟೀಕೆಗಳನ್ನು ಎದುರಿಸುತ್ತಿದ್ದೇನೆ ಎಂದಿದ್ದಾರೆ ನಟಿ ಮೇಘನಾ ರಾಜ್. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..