ಬಿಗ್ ಬಾಸ್ ಸೀಸನ್ 9 ಶುರುವಾಗಿ ಇದೀಗ ಅರ್ಧ ಸೀಸನ್ ಮುಗಿಸಿದೆ. ಇನ್ನು ಬಿಗ್ ಬಾಸ್ ಸೀಸನ್ 9 ನ ಸ್ಪರ್ಧಿಗಳು ಈಗಾಗಲೇ ಅಭಿಮಾನಿಗಳ ಮನಸ್ಸನ್ನು ತಮ್ಮ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಕಾಂಪಿಟೇಶನ್ ಹೆಜ್ಜಾಗುತ್ತಲೆ ಇದೆ.
ಇನ್ನು ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಎಂದೇ ಕ್ಯಾತಿ ಪಡೆದಿರುವ ಸ್ಪರ್ಧಿಗಳು ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ. ಈ ಇಬ್ಬರೂ ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿಯಿಂದ ಸಹ ಒಬ್ಬರ ಜೊತೆಗೆ ಇನ್ನೊಬ್ಬರು ಬಹಳ ಆತ್ಮೀಯವಾಗಿದ್ದರು. ಇನ್ನು ಬಿಗ್ ಬಾಸ್ ಓಟಿಟಿಯಿಂದಲೂ ಸಹ ಸಾನಿಯಾ ಹಾಗೂ ರೂಪೇಶ್ ಎಲ್ಲರಿಗೂ ಬಹಳ ಇಷ್ಟ.
ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇಬ್ಬರೂ ಸಹ ಬಿಗ್ ಬಾಸ್ ಸೀಸನ್ 9 ರಲ್ಲಿ ಸಹ ಒಟ್ಟಾಗಿ ಆಟವಾಡುತ್ತಿದ್ದರು. ಆದರೆ ಸಾನಿಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಬಿಗ್ ಬಾಸ್ ಮನೆಯಲ್ಲಿ 6 ನೆ ವಾರಕ್ಕೆ ತಮ್ಮ ಆಟ ಮುಗಿಸಿದರು.
ಸಾನಿಯಾ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುತ್ತಿದ್ದಾರೆ ಎನ್ನುವ ವಿಷಯ ತಿಳಿದ ತಕ್ಷಣ ರೂಪೇಶ್ ಶೆಟ್ಟಿ ಬಹಳ ಬೇಸರ ಮಾಡಿಕೊಂಡು ಕಣ್ಣೀರು ಹಾಕಿದ್ದರು. ಸಾನಿಯಾ ಅಯ್ಯರ್ ಮನೆಯಿಂದ ಎಲಿಮಿನೇಟ್ ಆದ ನಂತರ ರೂಪೇಶ್ ಶೆಟ್ಟಿ ಒಂದು ವಾರದ ಕಾಲ ಅವರ ನೆನಪಿನಲ್ಲಿ ಬೇಸರ ಮಾಡಿಕೊಂಡಿದ್ದರು.
ಕೆಲವು ದಿನಗಳ ನಂತರ ಅವರ ನೋವನ್ನು ಮರೆತು ಮತ್ತೆ ಬಿಗ್ ಬಾಸ್ ಆಟದ ಕಡೆಗೆ ಘಮನ ಹರಿಸಲು ಮುಂದಾದರು. ಇನ್ನು ಇದೀಗ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ. ಇನ್ನು ಇದೀಗ ಬಿಗ್ ಬಾಸ್ ಮನೆಯವರಿಗೆಲ್ಲಾ ಒಂದು ಟಾಸ್ಕ್ ನೀಡಿದ್ದಾರೆ.
ಇದರ ಅನುಸಾರ ಬಿಗ್ ಬಾಸ್ ಹಾಡಿನ ಮ್ಯೂಸಿಕ್ ಅನ್ನು ಪ್ಲೆ ಮಾಡುತ್ತಾರೆ, ಅದನ್ನು ಕೇಳಿಸಿಕೊಂಡ ಮನೆಯ ಸ್ಪರ್ಧಿಗಳು ಆ ಹಾಡು ಯಾವುದು ಎಂದು ಪತ್ತೆ ಹಚ್ಚಿ ಅದರ ಸಾಲನ್ನು ಹಾಡಬೇಕು. ಇನ್ನು ಈ ಟಾಸ್ಕ್ ನ ವೇಳೆ ಬಿಟೋಗ್ಬೇಡ ನನ್ನ ಹಾಡನ್ನು ಪ್ಲೆ ಮಾಡಲಾಗಿತ್ತು.
ಈ ಹಾಡನ್ನು ಕೇಳಿಸಿಕೊಂಡು ರೂಪೇಶ್ ಶೆಟ್ಟಿ ಅವರು ಬಾವುಕರಾಗಿದ್ದಾರೆ. ಮತ್ತೆ ಈ ಹಾಡನ್ನು ಪ್ಲೆ ಮಾಡುವಂತೆ ಬಿಗ್ ಬಾಸ್ ಬಳಿ ಕೇಳಿದ ರೂಪೇಶ್ ಮತ್ತೆ ಅವರೇ ಹಾಡನ್ನು ಹಾಡುತ್ತಾ, ಸಾನಿಯಾ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…