ಕಾಂತಾರ ಸಿನಿಮಾ ಯಾವ ಮಟ್ಟದಲ್ಲಿ ಹಿಟ್ ಆಗಿದೆ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ನಮ್ಮ ರಾಜ್ಯದ, ನಮ್ಮ ಹಿಂದೂ ಸಂಸ್ಕೃತಿಯ ಸೊಬಗನ್ನು ತೋರಿದ ಸಿನಿಮಾ ಎಂದರೆ ಅದು ಕಾಂತಾರ ಎಂದರೆ ತಪ್ಪಾಗುವುದಿಲ್ಲ. ಭೂತಕೋಲ ಹಾಗೂ ದೈವಾರಾಧನೆ ಕುರಿತ ಸಿನಿಮಾ ಕಾಂತಾರ,
ಕೇವಲ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಸಹ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇನ್ನು ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬ ಕಲಾವಿದ ಸಹ ನಟ ರಿಷಬ್ ಶೆಟ್ಟಿ ಅವರ ಅಭಿನಯ ಹಾಗೂ ಅವರ ನಿರ್ದೇಶನಕ್ಕೆ ಸಾಕಷ್ಟು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕಾಂತಾರ ಸಿನಿಮಾವನ್ನು ತೆಗೆಯುವಾಗ ಸಾಕಷ್ಟು ಅಡೆತಡೆಗಳು ಎದುರಾದವಂತೆ ಆದರೆ ಅದನೆಲ್ಲಾ ಅದುರಿಸಿ ಕೊನೆಗೂ ಸಿನಿಮಾ ಪೂರ್ತಿ ಮಾಡಿದ್ದಾರೆ. ಇನ್ನು 16 ಕೋಟಿ ಬಡ್ಜೆಟ್ ನಲ್ಲಿ ಮಾಡಲಾದ ಕಾಂತಾರ ಸಿನಿಮಾ ಇದೀಗ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಕನ್ನಡ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಇನ್ನು ಕಾಂತಾರ ಮೊದಲನೇ ಭಾಗ ಸಿನಿಮಾ ತೆಗೆಯುವುದಕ್ಕು ಮುನ್ನ ಪಂಜುರ್ಲಿ ದೈವದ ಅಪ್ಪಣೆ ಪಡೆದು ನಂತರ ಸಿನಿಮಾ ಶೂ-ಟಿಂಗ್ ಪ್ರಾರಂಭ ಮಾಡಲಾಯಿತು. ಇನ್ನು ಇದೀಗ ಕಾಂತಾರ ಭಾಗ 2 ತೆಗೆಯುವ ನಿರ್ಧಾರ ಮಾಡಿರುವ ರಿಷಬ್ ಶೆಟ್ಟಿ ಇದೀಗ ಮತ್ತೊಮ್ಮೆ ಪಂಜುರ್ಲಿ ದೈವದ ಅಪ್ಪಣೆ ಪಡೆದಿದ್ದಾರೆ.
ದೈವದ ಅಪ್ಪಣೆ ಪಡೆಯಲು ಹೋದ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ದೈವ ಹೇಳಿದ ಮಾತುಗಳನ್ನು ಕೇಳಿ ಶಾಕ್ ಆಗಿದ್ದಾರೆ. ಹಾಗಾದರೆ ಪಂಜುರ್ಲಿ ದೈವ ಹೇಳಿದ್ದಾದರೂ ಏನು? ಕಾಂತಾರ 2 ಸಿನಿಮಾ ಬರುತ್ತಾ? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಕಾಂತಾರ ಮೊದಲ ಭಾಗ ತೆಗೆಯಬೇಳ ಕಾದರೆ ಎಲ್ಲಾ ನಿಯಮ ನಿಷ್ಟೆಗಳಿಂದ ಮಾಡಿದ್ದೀರಾ, ಇದೀಗ ಎರಡನೇ ಭಾಗ ತೆಗೆಯುವ ಮುನ್ನ ಎಲ್ಲವನ್ನೂ ಒಂದಲ್ಲಾ ಹತ್ತು ಬಾರಿ ಯೋಚಿಸಿ ನಂತರ ಯಾವುದೇ ಕೆಲಸಕ್ಕೆ ಬೇಕಾದರೂ ಕೈ ಹಾಕಿ. ಎಲ್ಲಾ ನಿಯಮ ನಿಷ್ಟೆಗಳನ್ನು ಪಾಲಿಸುತ್ತಾ, ಅದೇ ಚಿತ್ರತಂಡದ ಜೊತೆಗೆ ಸಿನಿಮಾ
ತೆಗೆಯಿರಿ ನಾನು ನಿಮ್ಮ ಜೊತೆಗಿರುತ್ತೇನೆ, ನಿಮ್ಮ ಸಿನಿಮಾವನ್ನು ಗೆಲ್ಲಿಸಿಕೊಡುತ್ತೇನೆ ಎಂದು ಪಂಜುರ್ಲಿ ದೈವ ಅಪ್ಪಣೆ ನೀಡಿದೆ ಎನ್ನಲಾಗುತ್ತಿದೆ. ಇನ್ನು ಈ ಮಾತುಗಳನ್ನು ಕೇಳಿ ರಿಷಬ್ ಶೆಟ್ಟಿ ಅವರು ಭಾವುಕರಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.