ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತಿ ಪಡೆದಿರುವ ನಟ ಎಂದರೆ ಅದು ನಮ್ಮ ಶಿವ ರಾಜ್ ಕುಮಾರ್. ನಟ ಶಿವ ರಾಜ್ ಕುಮಾರ್ ಅವರ ಸಿನಿಮಾಗಳು ಎಂದರೆ ಸಾಕು ಅವರ ಅಭಿಮಾನಿಗಳು ಕಾತುರದಿಂದ ಆ ದಿನಕ್ಕಾಗಿ ಕಾದು ಕುಳಿತಿರುತ್ತಾರೆ. ಇನ್ನು ಶಿವಣ್ಣ ಇದೀಗ ತಮ್ಮ ಅಭಿಮಾನಿಗಳನ್ನು ರಂಜಿಸಲು,
ಮತ್ತೊಂದು ಸಿನಿಮಾದ ಮೂಲಕ ತೆರೆ ಮೇಲೆ ಬಂದಿದ್ದಾರೆ. ಹೌದು ನಟ ಶಿವ ರಾಜ್ ಕುಮಾರ್ ಇದೀಗ ತಮ್ಮ 125ನೆ ಸಿನಿಮಾದಲ್ಲಿ ಅಭಿನಯಿಸಿದ್ದು, ಹೌದು ಶಿವಣ್ಣ ಅವರ ಬಹು ನಿರೀಕ್ಷಿತ ಸಿನಿಮಾ ವೇದ ಇದೆ ಡಿಸೆಂಬರ್ 23 ರಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾಗಾಗಿ ಶಿವಣ್ಣ ಅಭಿಮಾನಿಗಳು ಬಹಳ ಕಾತುರದಿಂದ ಕಾದಿದ್ದಾರೆ.
ಶಿವಣ್ಣ ಅವರ ಓಂ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು, ವರ್ಷಗಳ ನಂತರ ಇದೀಗ ಓಂ ಸಿನಿಮಾದ ರೀತಿಯೇ ವೇದ ಸಿನಿಮಾ ಕೂಡ ತಯಾರಾಗಿದೆ. ಇನ್ನು ವೇದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಇನ್ನು ವೇದ ಸಿನಿಮಾ ಶಿವಣ್ಣ ಅವರ ಪತ್ನಿ ಗೀತಾ ಅವರ ಗೀತಾ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. ಹೌದು ಇದೇ ಮೊದಲ ಬಾರಿಗೆ ಗೀತಾ ಅವರು ಗೀತಾ ಪಿಕ್ಚರ್ ಎನ್ನುವ ಪ್ರೊಡಕ್ಷನ್ ಹೌಸ್ ತೆರೆದಿದ್ದು, ಗೀತಕ್ಕ ಅವರು ಶಿವಣ್ಣ ಅವರ ವೇದಾ ಸಿನಿಮಾಗಾಗಿ ಬಂಡವಾಳ ಹೂಡಿದ್ದಾರೆ.
ಇನ್ನು ಇತ್ತೀಚಿಗೆ ಶಿವರಾಜಕುಮಾರ್ ನಟನೆಯ ವೇದ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಟ್ರೈಲರ್ ನೋಡಿದ ಅಭಿಮಾನಿಗಳು ವೇದ ಸಿನಿಮಾಾಗೆ ಸಾಕಷ್ಟು ಮೆಚ್ಚುಗೆ ಸೂಚಿಸಿದ್ದರು. ಇನ್ನು ಅದ್ದೂರಿಯಾಗಿ ವೇದ ಸಿನಿಮಾದ ಪ್ರಚಾರ ಕೆಲಸಗಳು ಸಹ ನಡೆಯುತ್ತದೆ.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಪೀ ಆರ್ ಕೆ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಅವರೇ ವಹಿಸಿಕೊಂಡಿದ್ದಾರೆ. ಇನ್ನು ಮನೆಯ ಜೊತೆಗೆ ಆಫೀಸ್ ಕೆಲಸವನ್ನು ಸಹ ಅಶ್ವಿನಿ ಪುನೀತ್ ಅವರು ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಶಿವಣ್ಣ ಅವರ ವೇದ ಸಿನಿಮಾ ಕುರಿತಾಗಿ,
ಅಶ್ವಿನಿ ಪುನೀತ್ ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..