ನಟಿ ದೀಪಿಕಾ ಪಡುಕೋಣೆ ಅವರನ್ನು ಟ್ರೊಲ್ ಮಾಡಿದವರಿಗೆ ಚಳಿ ಬಿಡಿಸಿದ ನಟಿ ರಮ್ಯಾ?… ಹೇಳಿದ್ದೆನು ಗೊತ್ತಾ ನೋಡಿ..

ಸ್ಯಾಂಡಲವುಡ್

ಕನ್ನಡ ಸಿನಿಮಾರಂಗದ ಮೋಹಕತಾರೆ ಚಂದನವನದ ಪದ್ಮಾವತಿ ಎಂದೆ ಖ್ಯಾತಿ ಪಡೆದಿರುವ ನಟಿ ರಮ್ಯಾ. ನಟಿ ರಮ್ಯಾ ಅವರು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇನ್ನು ನಟಿ ರಮ್ಯಾ ಅವರು ಮತ್ತೆ ಬಣ್ಣದ ಲೋಕಕ್ಕೆ ಹಿಂತಿರುಗುವ ನಿರ್ಧಾರ ತೆಗೆದುಕೊಂಡ,

ಮೇಲೆ ಅವರು ಆಗಾಗ ಚಿತ್ರರಂಗದಲ್ಲಿ ಆಗುವ ಘಟನೆಗಳು ಹಾಗೂ ಇನ್ನಿತರ ವಿಷಯಗಳ ಕುರಿತು ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೇ. ಇನ್ನು ಇದೀಗ ಮತ್ತೊಮ್ಮೆ ನಟಿ ರಮ್ಯಾ ಅವರು ಒಂದು ಟ್ವೀಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ಸ್ಯಾಂಡಲ್ ವುಡ್ ಪದ್ಮಾವತಿ ನಟಿ ರಮ್ಯಾ ಇತ್ತೀಚೆಗೆ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇನ್ನು ನಟಿ ರಮ್ಯಾ ಅವರು ಡಾಲಿ ಧನಂಜಯ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಕೂಡ ನೆರವೇರಿತ್ತು.

ನಟಿ ರಮ್ಯಾ ಅವರು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇನ್ನು ನಟಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಟ್ರೀಟ್ ಮಾಡುವ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ನಟಿ ಸಮಂತಾ, ನಟಿ ಸಾಯಿ ಪಲ್ಲವಿ, ನಟಿ ರಶ್ಮಿಕಾ ಮಂದಣ್ಣ,

ಇವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡುವ ವೇಳೆ ನಟಿ ರಮ್ಯಾ ಇವರ ಪರವಾಗಿ ಟ್ವೀಟ್ ಮಾಡುತ್ತಿದ್ದರು. ಇನ್ನೂ ಕಳೆದ ಕೆಲವು ದಿನಗಳಿಂದ ಪಟ್ಟಾನ್ ಸಿನಿಮಾದ ಬೇಷರ್ಮ್ ರಂಗ್ ಹಾಡು ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನಟಿ ದೀಪಿಕಾ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು ಇದೀಗ ನಟಿ ರಮ್ಯಾ ಅವರು ನಟಿ ದೀಪಿಕಾ ಅವರ ಪರವಾಗಿ ಟ್ವೀಟ್ ಮಾಡುವ ಮೂಲಕ ನಟಿ ದೀಪಿಕಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಟಿ ಸಮಂತ ಅವರಿಗೆ ಡೈವೋರ್ಸ್ ವಿಷಯದಲ್ಲಿ, ನಟಿ ರಶ್ಮಿಕಾ ಮಂದಣ್ಣಅವರಿಗೆ ಬ್ರೇಕ್ ಅಪ್ ವಿಷಯದಲ್ಲಿ, ನಟಿ ಸಾಯಿ ಪಲ್ಲವಿ ಅವರಿಗೆ ತಮ್ಮ ಅಭಿಪ್ರಾಯ ಹೇಳಿದ್ದಕ್ಕೆ, ಇದೀಗ ನಟಿ ದೀಪಿಕಾ ಅವರನ್ನು ಅವರ ಬಟ್ಟೆಯ ವಿಷಯಕ್ಕೆ ಟ್ರೊಲ್ ಮಾಡಲಾಗುತ್ತಿದೆ.

ಹೆಣ್ಣಿಗೆ ತನ್ನ ಹಕ್ಕನ್ನು ನಾವು ಕೊಡಬೇಕು, ಅವಳು ತನಗೆ ಇಷ್ಟ ಬಂದಂತೆ ಇರಬಹುದು. ಹೆಣ್ಣನ್ನು ನಾವು ದುರ್ಗೆಯ ಸ್ವರೂಪವಾಗಿ ಕಾಣುತ್ತೇವೆ. ನಾವು ಸ್ತ್ರೀದ್ವೇಷವನ್ನು ಹೋರಾಡಬೇಕು ಎಂದಿದ್ದಾರೆ ನಟಿ ರಮ್ಯ. ಇದೀಗ ನಟಿ ರಮ್ಯಾ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *