ನಮಸ್ತೇ ಪ್ರಿಯ ಸ್ನೇಹಿತರೆ, ನಮ್ಮ ದೇಶ ಹಳ್ಳಿಗಳ ನಾಡು. ನಾವು ಕೃಷಿ ಭೂಮಿಯಲ್ಲಿ ಬೋರ್ ವೆಲ್ ಹಾಕಿಸಲು ನೀರು ಇದೆಯೋ ಇಲ್ಲವೋ ಎಂದು ಜನರನ್ನು ಕರೆಸಿ ಅವರಿಂದ ತಿಳಿದುಕೊಳ್ಳುತ್ತೇವೆ. ಇದನ್ನು ನಮ್ಮ ಹಿಂದಿನ ಕಾಲದ ಹಿರಿಯರು ಮಾಡಿಕೊಂಡು ಬಂದ ರೂಢಿಯಾಗಿದೆ. ಆ ವ್ಯಕ್ತಿಯೂ ಬೋರ್ ವೆಲ್ ಹಾಕುವ ಸ್ಥಳದಲ್ಲಿ ಬಂದು ತನ್ನ ಕೈಯಲ್ಲಿ ಒಂದು ತೆಂಗಿನ ಕಾಯಿಯನ್ನು ಇಟ್ಟುಕೊಂಡು ಒಂದು ಪಾಯಿಂಟ್ ಅನ್ನು ಮಾಡಿಕೊಟ್ಟು ಹೋಗುತ್ತಾರೆ. ಅದನ್ನು ನಂಬಿಕೊಂಡು ನಾವು ಅಲ್ಲಿ ಬೋರ್ ವೆಲ್ ಹಾಕಿಸುತ್ತೇವೆ ಹೌದು ಅದೃಷ್ಟ ಅನ್ನುವುದು ಚೆನ್ನಾಗಿ ಇದ್ದರೆ ಖಂಡಿತವಾಗಿ ನೀರು ದೊರೆಯುತ್ತದೆ ಇಲ್ಲವಾದರೆ ನೀರು ಹತ್ತುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಇದು ಎಷ್ಟು ಸತ್ಯ. ಇದಕ್ಕೆ ವೈಜ್ಞಾನಿಕವಾಗಿ ಏನು ಕಾರಣ ಅಂತ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ವ್ಯಕ್ತಿಯ ಕೈಯಲ್ಲಿ ಇರುವ ತೆಂಗಿನ ಕಾಯಿಗೂ ಹಾಗೂ ಭೂಮಿಯ ಒಳಗಡೆ ಇರುವ ನೀರಿಗೂ ಏನು ಸಂಭಂದ ಇರಬಹುದು ಅನ್ನುವ ಪ್ರಶ್ನೆ ಸಾಮಾನ್ಯವಾಗಿ ನಿಮ್ಮಲ್ಲಿ ಮೂಡುತ್ತದೆ. ನೀರು ಇದ್ದರೆ ಇದು ಮೇಲೆ ಏರುತ್ತದೆಯೋ ಅಥವಾ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡ ವ್ಯಕ್ತಿ ಅದನ್ನು ಮೇಲೇತ್ತುತ್ತಾನೆಯೋ ಗೊತ್ತಾಗುವುದಿಲ್ಲ. ಇನ್ನೂ ಇದು ಮೂಢನಂಬಿಕೆಯೊ ಅಥವಾ ಖಂಡಿತವಾಗಿ ಇದಕ್ಕೆ ವೈಜ್ಞಾನಿಕವಾಗಿ ಕಾರಣವಿದೆ ಅನ್ನುವುದನ್ನು ತಿಳಿಯೋಣ. ತೆಂಗಿನಕಾಯಿ ಹಿಡಿದು ನೀರು ಇದೆಯೋ ಇಲ್ಲವೋ ಅನ್ನುವುದನ್ನು ಪತ್ತೆ ಹಚ್ಚುವ ಪದ್ಧತಿಯು ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಇನ್ನಿತರ ದೇಶದಲ್ಲಿ ಕೂಡ ಈ ವಿಧಾನದ ಮೂಲಕ ನೀರು ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚುತ್ತಾರೆ.
ಆದರೆ ಈ ಪದ್ಧತಿ ಅಧಿಕವಾಗಿ ಖನಿಜಗಳು ಭೂಮಿಯ ಆಳದಲ್ಲಿ ಇವೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ಈ ವಿಧಾನವನ್ನು ಅಧಿಕವಾಗಿ ಬಳಸುತ್ತಿದ್ದರು. ಇದನ್ನು ಬಳಕೆ ಮಾಡಿಕೊಂಡು ಖನಿಜಗಳು ಲವಣಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಪತ್ತೆ ಹಚ್ಚುತ್ತಿದ್ದರು. ಆಗ ಅವರು ಈ ವಿಷಯವನ್ನು ಗಣನೆಗೆ ತೆಗೆದುಕೊಂಡರೆ ಅದುವೇ ಈ ಖನಿಜ ಕವಣಗಳಲ್ಲಿ ನೀರು ಅಡಗಿದೆ ಎಂದು. ಇದರ ಅರ್ಥ ಖನಿಜಗಳು ಲವಣಗಳು ಎಲ್ಲಿ ಇರುತ್ತವೆಯೋ ಅಲ್ಲಿ ನೀರು ಇದೆ ಎಂದು ತಿಳಿದು ಕೊಳ್ಳುತ್ತಿದ್ದರು ಈ ರೀತಿ ಹುಡುಕುತ್ತಾ ಮನುಷ್ಯನಿಗೆ ಅಗತ್ಯವಾದ ನೀರನ್ನು ಕೂಡ ಈ ವಿಧಾನದ ಮೂಲಕ ಪತ್ತೆ ಹಚ್ಚಲು ಶುರು ಮಾಡಿದರು. ನಮ್ಮ ಭಾರತ ದೇಶದಲ್ಲಿ ತೆಂಗಿನ ಕಾಯಿ ಮೂಲಕ ನೀರನ್ನು ಪತ್ತೆ ಹಚ್ಚುತ್ತಾರೆ ಆದರೆ ಬೇರೆ ದೇಶದಲ್ಲಿ ವಾಯ್ ಎಂಬ ಕಟ್ಟಿಗೆಯಿಂದ ಪೆನ್ನುಗಳ ಬಳಕೆಯಿಂದ ಕೀ ಚೈನ್ ನಿಂದ ಕೂಡ ಪತ್ತೆ ಹಚ್ಚುತ್ತಾರೆ. ಇನ್ನೂ ಭೂಮಿಯ ಒಳಗಡೆ ಇರುವ ನೀರಿಗೂ ಹಾಗೂ ಕೈಯಲ್ಲಿ ಇರುವ ತೆಂಗಿನಕಾಯಿಗೂ ಇರುವ ವೈಜ್ಞಾನಿಕ ಕಾರಣ ಏನು ಅಂತ ನೀವು ಪ್ರಶ್ನೆ ಮಾಡುವುದಾದರೆ, ಭೂಮಿಯೊಳಗೆ ಇರುವ ನೀರು ಎಂದಿಗೂ ಶುದ್ಧವಾದ ನೀರು ಅಲ್ಲ. ಅದು ಪೊಟ್ಯಾಶಿಯಂ ಫಾಸ್ಫರಸ್ ಕ್ಯಾಲ್ಷಿಯಂ ಎಂಬ ಅಂಶವನ್ನು ಹೊಂದಿರುತ್ತದೆ.