ತಿರುಪೂರದಲ್ಲಿ ಒಂದು ಸಣ್ಣ ಮನೆಯಲ್ಲಿ ಪಳನಿ ಹಾಗೂ ಗಿರಿಜಾ ಎಂಬ ದಂಪತಿ ವಾಸವಾಗಿದ್ದರು. ಇನ್ನು ಈ ದಂಪತಿಗೆ ರೇಣುಕಾ ಹಾಗೂ ರೇಖಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇನ್ನು ರೇಣುಕಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ರೇಖಾ 10ನೆ ತರಗತಿ ಓದುತ್ತಿದ್ದರು.
ಇನ್ನು ಪಳನಿ ಗಾರೆ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ಇನ್ನು ಗಿರಿಜಾ ಸಹ ಕೂಲಿ ಕೆಲಸ ಮಾಡುತ್ತಿದ್ದಳು. ಇನ್ನು ಪಳನಿಗೆ ಕುಡಿಯುವ ಚಟ ಇತ್ತು. ಪತ್ನಿ ಗಿರಿಜಾ ಎಸ್ಟೇ ಹೇಳಿದರು ಸಹ ಆತ ಕುಡಿಯುವುದನ್ನು ಮಾತ್ರ ಬಿಡುತ್ತಿರಲಿಲ್ಲ.
ಇನ್ನು ಒಂದು ದಿನ ಇದೆ ಕುಡಿಯುವ ಚಟದಿಂದ ಪಳನೆಯ ಲಿವರ್ ಡ್ಯಾಮೇಜ್ ಆಗಿ, ವೈದ್ಯರು ಆತನಿಗೆ ಇನ್ನು ಮುಂದೆ ಯಾವುದೇ ಕೆಲಸ ಮಾಡಬಾರದು ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಹೇಳಿದರು. ಇನ್ನು ಪಳನಿ ಕೆಲಸಕ್ಕೆ ಹೋಗದ ಕಾರಣ ಮನೆಯ ಪರಿಸ್ಥಿತಿ ಅದಗೆಟಿತ್ತು. ಇನ್ನು ಗಿರಿಜಾ ಮಾತ್ರ ಕೆಲಸಕ್ಕೆ ಹೋಗಿ ದುಡಿದು ಮನೆಯನ್ನು ನೋಡಿಕೊಳ್ಳುತ್ತಿದ್ದಳು.
ಇನ್ನು ತನ್ನ ತಾಯಿಯ ಕಷ್ಟ ನೋಡಲಾಗದೆ, ರೇಣುಕಾ ತಾನು ಸಹ ಕೆಲಸಕ್ಕೆ ಹೋಗಿ ಮನೆಗೆ ಸಹಾಯ ಮಾಡುವುದಾಗಿ ತನ್ನ ತಾಯಿಯನ್ನು ಒಪ್ಪಿಸಿ, ಮನೆಯ ಬಳಿ ಇದ್ದ, ಒಂದು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಸೇರಿಕೊಂಡಳು. ಇನ್ನು ಅಲ್ಲಿ ಪ್ರೀತಂ ಎನ್ನುವ ಮ್ಯಾನೇಜರ್ ಗೆ ರೇಣುಕಾಳ ಮೇಲೆ ಪ್ರೀತಿ ಉಂಟಾಯಿತು.
ಇನ್ನು ಒಂದು ದಿನ ತನ್ನನ್ನು ಮದುವೆಯಾಗುವಂತೆ ಮ್ಯಾನೇಜರ್ ರೇಣುಕಾಳನ್ನು ಕೇಳಿದ, ಆದರೆ ಇದಕ್ಕೆ ರೇಣುಕಾ ಮುಖಕ್ಕೆ ಹೊಡೆದಂತೆ ತಿರಸ್ಕರಿಸಿದಳು. ನಂತರ ಎರಡು ವಾರಗಳಲ್ಲಿ ರೇಣುಕಾ ಅವರ ತಂದೆಯ ಕೊನೆಯ ಆಸೆಯಂತೆ ತಮ್ಮ ಹತ್ತಿರದ ಸಂಬಂಧಿಕರ ಮಗನನ್ನು ಮದುವೆಯಾದರು. ಇನ್ನು ಈ ವಿಷಯ ತಿಳಿದು ಪ್ರೀತಂ ತುಂಬಾ ಬೇಸರ ಮಾಡಿಕೊಂಡರು.
ರೇಣುಕಾಳ ಗಂಡ ಕೂಡ ತನ್ನ ತಂದೆಯಂತೆ ಒಬ್ಬ ಕುಡುಕನಾಗಿದ್ದ, ಆಕೆಯನ್ನು ದಿನಾಲೂ ಹೊಡೆದು ಬಡೆದು, ಮನೆಯಲ್ಲಿದ್ದ ಸಮಾನೆಲ್ಲ ಮಾರಿ ಕುಡಿಯುತ್ತಿದ್ದ. ಇನ್ನು ರೇಣುಕಾ ತನ್ನ ಸಂಸಾರವನ್ನು ತಾನೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಿಂದ ಮತ್ತೆ ಅದೇ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋದಳು. ಆಕೆಯನ್ನು ನೋಡಿದ ಪ್ರೀತಂ ಮನಸ್ಸಿನಲ್ಲೇ ಕೊಗರಿದ.
ಇನ್ನು ರೇಣುಕಾಗೆ ಒಂದು ಹೆಣ್ಣು ಮಗು ಇದ್ದು, ಒಂದು ದಿನ ಆ ಮಗುವಿಗೆ ಹೃದಯಕ್ಕೆ ಸಂಬಂಧ ಕಾ-ಯಿಲೆ ಇದೆ ಆಪರೇಶನ್ ಮಾಡಬೇಕು ಎನ್ನುವ ವಿಷಯ ಆಕೆಗೆ ತಿಳಿಯಿತು. ಆದರೆ ಹಣ ಹೊಂದಿಸಲು ಆಗದೆ, ಆಕೆ ಡಾಕ್ಟರ್ ಗೆ ತನ್ನ ಸಾವಿನ ನಂತರ ಆಕೆಯ ಅಂಗಾಗವನ್ನು ಮಾರಿ ಅದರ ಹಣದಿಂದ ಮಗಳ ಆಪರೇಶನ್ ಮಾಡುವಂತೆ ಪತ್ರ ಬರೆದು ಮನೆಗೆ ಹೋಗಿ ನೇಣು ಹಾಕಿಕೊಳ್ಳುತ್ತಿದ್ದಳು
ಇನ್ನು ಆ ಪತ್ರ ಓದಿದ ಡಾಕ್ಟರ್ ತಕ್ಷಣ ಆಕೆಯ ಮನೆಗೆ ಹೋಗಿ ಆಕೆಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದರು. ಇನ್ನು ತನ್ನಿಂದ ತನ್ನ ಪತ್ನಿ ಹಾಗೂ ಮಗಳ ಪರಿಸ್ಥಿತಿ ಹೀಗಾಯಿತು ಎಂದು ರೇಣುಕಾ ಗಂಡ ಕೂಡ ಬುದ್ದಿ ಕಲಿತುಕೊಂಡ. ನಂತರ ರೇಣುಕಾಳ ಗಾರ್ಮೆಂಟ್ಸ್ ಮ್ಯಾನೇಜರ್ ಪ್ರೀತಂ ಆಕೆಯ ಮಗಳ ಆಪರೇಶನ್ ಗೆ ಬೇಕಾದ ಎಲ್ಲಾ ಹಣವನ್ನು ನೀಡಿ, ರೇಣುಕಾಳ ಮಗಳನ್ನು ಉಳಿಸಿಕೊಂಡ. ಇನ್ನು ರೇಣುಕಾ ಇಂತಹ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡೆ ಎಂದು ದುಃಖ ಪಟ್ಟಳು. ನಂತರ ರೇಣುಕಾಳ ಗಂಡ ಸಹ ಬದಲಾಗಿ ಅದೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ರೇಣುಕಾ ಹಾಗೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.