ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಪಠಾಣ್. ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಪಠಾಣ್ ಸಿನಿಮಾ ಇನ್ನೆನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾಗಾಗಿ ನಟ ಶಾರುಖ್ ಖಾನ್ ಅಭಿಮಾನಿಗಳು ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ.
ನಟ ಶಾರುಖ್ ಖಾನ್ ಅವರು ಪಠಾಣ್ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ನಟ ಶಾರೂಖ್ ಖಾನ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾಗಾಗಿ ನಟ ಶಾರೂಖ್ ಖಾನ್ ಸಾಕಷ್ಟು ಕಸರತ್ತು ಮಾಡಿದ್ದು, ಬಹಳ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿಗಟ್ಟಲೆ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇನ್ನು ನಟಿ ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಅವರು ಕೇಸರಿಯ ಬಣ್ಣದ ಬಿಕ್ಕಿನಿ ಧರಿಸಿದ್ದು, ಇದೀಗ ಕೆಲಬದಿನಗಳಿಂದ ಈ ಹಾಡಿನ ಮೂಲಕ ಅವರು ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಹಿಂದೂ ಪರ ಸಂಘಟನೆಗಳು ಪಠಾಣ್ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪಠಾಣ್ ಸಿನಿಮಾ ವನ್ನು ಬ್ಯಾನ್ ಮಾಡಲು ಮುಂದಾಗಿದ್ದಾರೆ. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪಠಾಣ್ ಸಿನಿಮಾದ ನೆರವಿಗೆ ಬಂದಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಕಾಶ್ ರೈ ಅವರು ಪಠಾಣ್ ಸಿನಿಮಾದ ಬ್ಯಾನ್ ವಿಷಯವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಕೇಸರಿ ಬಣ್ಣದ ವಸ್ತ್ರಗಳನ್ನು ಧರಿಸಿ ಗುರೂಜಿಗಳು ಹಾಗೂ ಸ್ವಾಮೀಜಿಗಳು ಹೆಣ್ಣು ಮಕ್ಕಳನ್ನು ರೇ*ಪ್ ಮಾಡಬಹುದು ಆದರೆ ಅದೇ ಬಣ್ಣದ ವಸ್ತ್ರ ಧರಿಸಿ ನಟಿ ದೀಪಿಕಾ ನೃತ್ಯ ಮಾಡಿದರೆ ಅದು ತಪ್ಪು. ಈ ರೀತಿ ಮಾಡಿದರೆ ಅದು ಹಿಂದುತ್ವಕ್ಕೆ ಅವಮಾನ ಎನ್ನುತ್ತೀರಾ. ಇನ್ನು ಕೆಲವರು ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಲು ನಿಂತಿದ್ದಾರೆ.
ಎಂದು ನಟ ಪ್ರಕಾಶ್ ರೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪಠಾಣ್ ಸಿನಿಮಾದ ಬ್ಯಾನ್ ವಿಷಯದ ಕುರಿತು ಟ್ವೀಟ್ ಮಾಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..