ಬಿಗ್ ಬಾಸ್ ಕನ್ನಡ ಸೀಸನ್ 5ರ ಮೂಲಕ ಹೆಸರು ಫೇಮಸ್ ಆದ ಕಾಮನ್ ಸ್ಪರ್ಧಿಗಳಲ್ಲಿ ಒಬ್ಬರು ನಿವೇದಿತಾ ಗೌಡ. ಬಿಗ್ ಬಾಸ್ ನಲ್ಲಿ ಫಿನಾಲೆವರೆಗು ಬಂದು ಎಲಿಮಿನೇಟ್ ಆಗಿದ್ದರು ನಿವೇದಿತಾ. ಬಳಿಕ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ನಂತರ ನಿವೇದಿತಾ ಅವರು ಬಿಗ್ ಬಾಸ್ ನಲ್ಲಿ ಪರಿಚಯವಾಗಿದ್ದ ಚಂದನ್ ಶೆಟ್ಟಿ ಅವರೊಡನೆ ಮದುವೆಯಾಗಿ ಸುಂದರವಾದ ಜೀವನ ನಡೆಸುತ್ತಿದ್ದಾರೆ.
ಚಂದನ್ ಅವರನ್ನು ಮದುವೆಯಾದ ಮೇಲೆ ನಿವೇದಿತಾ ಗೌಡ ಅವರ ಲೈಫ್ ಸ್ಟೈಲ್ ಪೂರ್ತಿಯಾಗಿ ಬದಲಾಯಿತು ಎಂದು ಹೇಳಬಹುದು. ನಿವೇದಿತಾ ಗೌಡ ಅವರು ಮದುವೆ ನಂತರ ರಾಜ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸಿ ತಮ್ಮ ಟ್ಯಾಲೆಂಟ್ ಅನ್ನು ನಿರೂಪಿಸಿದ್ದರು.
ನಂತರ ಸೋಲೊ ಟ್ರಿಪ್ ಅದು ಇದು ಎಂದು ಬ್ಯುಸಿ ಆಗಿದ್ದ ನಿವೇದಿತಾ ಈಗ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ಶೋ ಸಂಗಮದಲ್ಲಿ ಕಾಣಿಸಿಕೊಂಡಿದ್ದು, ಎರಡು ಸ್ಕಿಟ್ ಗಳಲ್ಲಿ ನಟಿಸಿದರು. ಆ ಸ್ಕಿಟ್ ನಂತರ, ನಿವೇದಿತಾ ಅವರಿಗೆ ಮಗು ಆದರೆ ಹೇಗೆ ನೋಡಿಕೊಳ್ಳುತ್ತಾರೆ ಎಂದು ಕೇಳಲಾಯಿತು. ಆಗ ನಿವೇದಿತಾ, ನನಗೆ ಮಗು ಆದರೆ ಆ ಮಗುವೆ ನನಗೆ ಅಡುಗೆ ಮಾಡಿ ಊಟ ಕೊಡಬೇಕು.
ಮಗುವಿಗೆ ಅಡುಗೆ ಮಾಡೋದನ್ನ ಹೇಳಿಕೊಡ್ತೀನಿ, ನನ್ನ ಕೈಯಲ್ಲಿ ಅಂತೂ ಆಗಲ್ಲ ಎಂದಿದ್ದಾರೆ. ಆಗ ತಾರಾ ಅವರು ಮಗುವಿಗೆ ಅಡುಗೆ ಹೇಳಿಕೊಡಬೇಕು ಅಂದ್ರೆ ನಿನಗೆ ಮೊದಲು ಅಡುಗೆ ಬರಬೇಕು ಎಂದಿದ್ದು, ಅದಕ್ಕೆ ನಿವೇದಿತಾ ಗೌಡ, ಈಗ ಯೂಟ್ಯೂಬ್ ಇದೆ ಅದರಲ್ಲೇ ನೋಡಿ ಕಲಿಯಬಹುದು ಎಂದು ತಮಾಷೆ ಮಾಡಿದ್ದಾರೆ.
ನಿವೇದಿತಾ ಗೌಡಗೆ ಮಗು ಆದರೆ ಹೇಗಿರುತ್ತೆ ಎಂದು ಎಲ್ಲರೂ ತಮಾಷೆ ಮಾಡಿದ್ದಾರೆ..
ಅಷ್ಟೇ ಅಲ್ಲರೆ ನಿವೇದಿತಾ ಕೈಗೆ ಮಗುವಿನ ಹಾಗೆ ಒಂದು ಗೊಂಬೆಯನ್ನು ಕೂಡ ಕೊಡಲಾಯಿತು. ಒಂದು ವೇಳೆ ಮಗು ಅತ್ತರೆ ಹೇಗೆ ಸಮಾಧಾನ ಮಾಡ್ತಿಯಾ ಎಂದು ಕೇಳಲಾಗಿತ್ತು. ಅದಕ್ಕೆ ನಿವೇದಿತಾ ಗೌಡ ಅವರು, ಮಗುವಿಗೆ ಚಾನ್ವಿ ಎಂದು ಹೆಸರು ಇಡುತ್ತೀನಿ ಎಂದಿದ್ದಾರೆ. ಚಾನ್ವಿ ಎಂದರೆ ಏನು ಎಂದು ಜಡ್ಜ್ ಗಳು ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟ ನಿವೇದಿತಾ..
ಚಂದನ್ ಹೆಸರಿನಿಂದ ಚ, ನನ್ನ ಹೆಸರಿನಿಂದ ನಿವಿ ತೆಗೆದುಕೊಂಡು ಚಾನ್ವಿ ಎಂದು ಹೆಸರು ಇಡುತ್ತೀನಿ ಎಂದಿದ್ದಾರೆ. ಮಗು ಅಳೋದಕ್ಕೆ ಶುರು ಮಾಡಿದಾಗ, ಯಾಕಪ್ಪಾ ಅಳ್ತಾ ಇದ್ದಿಯಾ, ಯಾಕೆ ಚಿನ್ನಿ ಅಳ್ತಾ ಇದ್ದೀಯಾ, ನಿನಗೆ ಗೋಬಿ ಮಂಚೂರಿ ಬೇಕಾ, ಫ್ರೆಂಚ್ ಫ್ರೈಸ್ ಬೇಕಾ ಎಂದು ಕೇಳುತ್ತಾರೆ.
ಆಗ ಜಡ್ಜ್ ಸೃಜನ್ ಲೋಕೇಶ್ ಅವರು ಅದೇನು ಮಗುನಾ ಅಥವಾ ನಾಯಿನಾ ಎಂದು ತಮಾಷೆ ಮಾಡಿದ್ದಾರೆ. ಹೀಗೆ ನಿವೇದಿತಾ ಅವರೊಡನೆ ಬಹಳಷ್ಟು ತಮಾಷೆ ಕಾರ್ಯಕ್ರಮದಲ್ಲಿ ನಡೆದಿದ್ದು, ನಿವೇದಿತಾ ಅವರ ಜೊತೆಗೆ ನಿರಂಜನ್ ಅವರ ಪತ್ನಿ ಯಶಸ್ವಿನಿ ಅವರಿಗು ಸಹ ಒಂದು ಗೊಂಬೆ ನೀಡಿ, ಮಗು ಇದ್ದರೆ ಹೇಗೆ ನೋಡಿಕೊಳ್ಳುತ್ತಾರೆ ಎಂದು ತಮಾಷೆ ಮಾಡಲಾಯಿತು.
ನಂತರ ನಿವೇದಿತಾ ಗೌಡ ಅವರು ಸೋಲೋ ಟ್ರಿಪ್ ಹೋಗಿದ್ದರ ಬಗ್ಗೆ ಸಹ ಮಾತನಾಡಿ, ಒಬ್ಬಳೇ ಸೋಲೋ ಟ್ರಿಪ್ ನಲ್ಲಿ ರೀಲ್ಸ್ ಮಾಡುತ್ತಾ ಎಂಜಾಯ್ ಮಾಡಿದೆ ಎಂದಿದ್ದಾರೆ. ಹಾಗೆಯೇ ನಿವೇದಿತಾ ಗೌಡ ಅವರು ಟ್ರಿಪ್ ಗೆ ಹೋಗಿದ್ದಾಗ ತಾರಾ ಅವರಿಗೆ ಮತ್ತು ಸೃಜನ್ ಲೋಕೇಶ್ ಅವರಿಗೆ ಗಿಫ್ಟ್ ಸಹ ತಂದು ಕೊಟ್ಟಿದ್ದಾರೆ.. ಒಟ್ಟಿನಲ್ಲಿ ನನ್ನಮ್ಮ ಸೂಪರ್ ಸ್ಟಾರ್2 ವೇದಿಕೆಯಲ್ಲಿ ಭಾರಿ ಮನರಂಜನೆ ನೀಡಿದ್ದಾರೆ ನಿವೇದಿತಾ ಗೌಡ.