ನಟಿ ಮೇಘನಾ ರಾಜ್ ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ತಂದು ಕೊಟ್ಟಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರು ಇದೀಗ ಕನ್ನಡ ಸೇರಿದಂತೆ ಮಲಯಾಳಂ ನ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸದ್ಯ ಸಿನಿಮಾರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಅವರು ತಮ್ಮ ಸಿನಿಮಾ ಕೆಲಸಗಳ ಜೊತೆಗೆ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ನಟಿ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇದ್ದು, ಆಗಾಗ ತಮ್ಮ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ನಟಿ ಮೇಘನಾ ರಾಜ್ ಚಿರು ಅವರ ತಮ್ಮ ಧ್ರುವ ಸರ್ಜಾ ಹಾಗೆ ಅವರ ಪತ್ನಿ ಪ್ರೇರಣಾ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಇತ್ತೀಚೆಗೆ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಧ್ರುವ ಸರ್ಜಾ ಹಾಗೂ ಪ್ರೇರಣಾ ಸದ್ಯ ತಾವು ಪೋಷಕರಾಗಿರುವ ಖುಷಿಯಲ್ಲಿದ್ದಾರೆ.
ಇನ್ನು ಇದೀಗ ಮೇಘನಾ ರಾಜ್ ಹಾಗೂ ಅವರ ಮಗ ರಾಯನ್ ರಾಜ್ ಸರ್ಜಾ ಇಬ್ಬರೂ ಸಹ ಧ್ರುವ ಸರ್ಜಾ ಅವರ ಮನೆಗೆ ಭೇಟಿ ನೀಡಿದ್ದಾರೆ. ಇನ್ನು ನೆನ್ನೆ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ರಾಜ್ ಹಾಗೂ ರಾಯನ್ ಪ್ರೇರಣಾ ಅವರಿಗೆ ಶುಭ ಕೋರಿದ್ದಾರೆ.
ಇನ್ನು ಸಾಕಷ್ಟು ಧ್ರುವ ಸರ್ಜಾ ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದ ಮೂಲಕ ಪ್ರೇರಣಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಪ್ರೇರಣಾ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಹಾಗಾದರೆ ನಟಿ ಮೇಘನಾ ರಾಜ್ ಪ್ರೇರಣಾ ಅವರಿಗೆ ಕೊಟ್ಟ ಉಡುಗೊರೆ ಏನು? ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ, ಈ ಪುಟವನ್ನು ಸಂಪೂರ್ಣವಾಗಿ ಓದಿ. ನಟಿ ಮೇಘನಾ ರಾಜ್ ಹಾಗೂ ಪ್ರೇರಣಾ ಇಬ್ಬರೂ ಸಹ ಸ್ವಂತ ಅಕ್ಕತಂಗಿಯರ ರೀತಿ ಬಹಳ ಬಂದವ್ಯದಿಂದ ಇರುತ್ತಾರೆ.
ಇನ್ನು ಇದೀಗ ಮಗ ರಾಯನ್ ಜೊತೆಗೆ ಪ್ರೇರಣಾ ಅವರ ಮನೆಗೆ ಬಂದ ಮೇಘನಾ ರಾಜ್, ಪ್ರೇರಣಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ದುಬಾರಿ ಬೆಳೆಯ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.