ಶಿವ ರಾಜ್ ಕುಮಾರ್ ಈ ಹೆಸರು ಯಾರು ಕೇಳಿಲ್ಲ ಹೇಳಿ. ಶಿವಣ್ಣ ಅವರ ಸಿನಿಮಾಗಳು ಎಂದರೆ ಸಾಲು ಅವರ ಅಭಿಮಾನಿಗಳು ಆ ದಿನವನ್ನು ಒಂದು ಹಬ್ಬದ ರೀತಿ ಆಚರಿಸುತ್ತಾರೆ. ಇನ್ನು ಶಿವಣ್ಣ ಅವರ ಸಿನಿಮಾ ಬಿಡುಗಡೆಯದಾಗ ಚಿತ್ರಮಂದಿರಗಳ ಮುಂದೆ ಶಿವಣ್ಣ ಅವರ ಕಟ್ ಔಟ್ ಗಳಿಗೆ ಹಾಲಿನ ಅಭಿಷೇಕ ಇನ್ನು ಇತ್ಯಾದಿ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಾರೆ.
ಶಿವ ರಾಜ್ ಕುಮಾರ್ ಅವರು ಸದ್ಯ ತಮ್ಮ ವೇದ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಶಿವಣ್ಣ ಅವರ ವೇದ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇನ್ನು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಶಿವಣ್ಣ ಅವರ ವೇದ ಸಿನಿಮಾ ಕೂಡ ಶಿವಣ್ಣ ಅವರ ಓಂ ಸಿನಿಮಾ ರೀತಿಯೆ ಒಂದು ಹೊಸ ದಾಖಲೆ ಬರೆಯುತ್ತಿದೆ ಎನ್ನುವುದು ಶಿವಣ್ಣ ಅಭಿಮಾನಿಗಳ ಅಭಿಪ್ರಾಯ. ಇನ್ನು ಶಿವಣ್ಣ ಅವರ ವೇದ ಸಿನಿಮಾ ಇದೆ ಡಿಸೆಂಬರ್ 23 ರಂದು ರಾಜ್ಯಾದ್ಯಂತ ಬಿಡಗಡೆಯಾಗುತ್ತಿದೆ. ಇನ್ನು ಈ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ವೇದ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳು ಶಿವಣ್ಣ ಅವರ ಅಭಿನಯಕ್ಕೆ ಮನ ಸೋತ್ತಿದ್ದಾರೆ. ಅಲ್ಲದೆ ಈ ಸಿನಿಮಾದ ಟ್ರೇಲರ್ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಇದೀಗ ಶಿವಣ್ಣ ಹಾಗೂ ವೇದ ಚಿತ್ರತಂಡ ತಮ್ಮ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಇದೆ ವೇಳೆ ಮಾಧ್ಯಮದವರು ಕೇಳಿದ ಒಂದು ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ..
ಹೊಸ ಸಿನಿಮಾಗಳು ಹೊಸ ಕಲಾವಿದರು ಬರುತ್ತಿದ್ದಾರೆ ಇನ್ನು ಕೆಲವು ಸಿನಿಮಾಗಳು ನಿಜಕ್ಕೂ ಚೆನ್ನಾಗಿದೆ ಆದರೆ ಆ ಸಿನಿಮಾಗಳು ಅಷ್ಟಾಗಿ ಗುರುತಿಸಿಕೊಳ್ಳಲು ಆಗುತ್ತಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ. ಶಿವಣ್ಣ ಅವರು ನಾವು ಸಹ ಅದೇ ಹೇಳುವುದು ಯಾರಾದರೂ ಹೊಸ ಪ್ರತಿಭೆ ಬರುತ್ತಿದ್ದಾರೆ ಅವರಿಗೆ ಟ್ಯಾಲೆಂಟ್ ಇದ್ದರೆ ಅವರನ್ನು ಬೆಳಸಿ.
ಕೇವಲ ನಮ್ಮ ಸಿನಿಮಾಗಳು, ಯಶ್, ಸುದೀಪ್ ದರ್ಶನ್ ಸಿನಿಮಾಗಳನ್ನು ನೋಡುವುದು ಅಷ್ಟೇ ಅಲ್ಲ. ಹೊಸ ಪ್ರತಿಭೆಗಳಿಗೆ ಅಷ್ಟೇ ಗೌರವ ಕೊಡಿ, ಕನ್ನಡ ಸಿನಿಮಾಗಳನ್ನು ನೋಡಿ ಅದನ್ನು ಬೆಳಸಿ. ಅಲ್ಲದೆ ಕೇವಲ ನಮ್ಮ ವಂಶ, ಹಾಗೆ ವಂಶಗಳನ್ನು ಬೆಳೆಸುವುದು ಅಲ್ಲ, ಅವರ ಪ್ರತಿಭೆಯ ಮೇಲೆ ನೀವು ಅವರಿಗೆ ಗೌರವ ನೀಡಿಲ್ಲ ಎಂದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.