ಬಾಲಿವುಡ್ ನ ಬಾಕ್ಸ್ ಆಫಿಸ್ ಸುಲ್ತಾನ್, ಮೋಸ್ಟ್ ಹ್ಯಾಂಡ್ಸಮ್ ನಟ ಎಂದರೆ ಅದು ಶಾರುಖ್ ಖಾನ್. ಶಾರುಖ್ ಖಾನ್ ಅವರು ತಮ್ಮ 60ರ ವಯಸ್ಸಿನಲ್ಲಿ ಸಹ ಇಂದಿಗೂ ಯಾವ ಯಂಗ್ ಹೀರೋ ಗೆ ಸಹ ಕಡಿಮೆ ಇಲ್ಲದಂತೆ ಡ್ಯಾನ್ಸ್ ಹಾಗೂ ಆಕ್ಷನ್ ಸೀನ್ ಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ.
ನಟ ಶಾರುಖ್ ಖಾನ್ ಅವರ ಬಾಲಿವುಡ್ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪಠಾಣ್. ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಬಿಡಗಡೆಯಾಗುವ ಮುನ್ನವೇ ಸಾಕಷ್ಟು ವಿವಾಧಹಳನ್ನು ಸೃಷ್ಟಿಸಿ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಶಾರುಖ್ ಖಾನ್ ಅವರಿಗೆ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಸಹ ಸಾಕಷ್ಟು ಅಭಿಮಾನಿ ಬಳಗವಿದೆ. ಅದೇ ರೀತಿ ಕರ್ಣಾಟಕದಲ್ಲಿ ಸಹ ಶಾರುಖ್ ಖಾನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಇನ್ನು ಇದೀಗ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬ್ಯಾನ್ ಮಾಡಲು ಕೆಲವರು ಮುಂದಾಗಿದ್ದಾರೆ.
ಹೌದು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಲು ಕೆಲವು ಹಿಂದೂ ಪರ ಸಂಘಟನೆಗಳು ಮುಂದಾಗಿವೆ. ಪಠಾಣ್ ಸಿನಿಮಾದಲ್ಲಿ ನಟ ಶಾರೂಖ್ ಖಾನ್ ಜೊತೆಗೆ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದ ಬೇಶರಮ್ ರಂಗ್ ಹಾಡು ಇತ್ತೀಚೆಗೆ ಬಿಡುಗೆಯಾಗಿತ್ತು.
ಕೆಲವರು ಈ ಸಿನಿಮಾದ ಹಾಡನ್ನು ಒಪ್ಪಿಕೊಂಡರೆ ಇನ್ನು ಕೆಲವರು ದೀಪಿಕಾ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕ್ಕಿನೀ ಧರಿಸಿದ್ದು, ಅವರು ಈ ಹಾಡಿನ ಮೂಲಕ ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಈ ಹಾಡು ಹಾಗೂ ಸಿನಿಮಾದ ವಿರುದ್ದ ಕಿ’ಡಿ ಕಾರಿದ್ದಾರೆ.
ಇನ್ನು ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ಈ ವಿಷಯ ಮಧ್ಯಪ್ರದೇಶದಲ್ಲಿ ತಾರಕಕ್ಕೇರಿದೆ. ಇನ್ನು ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಲೇಬೇಕು ಎಂದು ಕೆಲವರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ.
ಇನ್ನು ಇಂದು ಸೋಮವಾರ ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ನಡೆಸಲಾಗುತ್ತಿರುವ ಒಂದು ಅಧಿವೇಶನದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಬೇಕಾ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…