ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪಠಾಣ್ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದೇ ವೇಳೆ ಕೆಲವು ಸಂಘಟನೆಗಳು ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಿಸುತ್ತಿದ್ದಾರೆ.
ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪಠಾಣ್ ಸಿನಿಮಾ ಕೂಡ ಒಂದು. ಪಠಾಣ್ ಸಿನಿಮಾಗಾಗಿ ಶಾರುಖ್ ಖಾನ್ ಹಾಗೇ ದೀಪಿಕಾ ಅಭಿಮಾನಿಗಳು ಬಹಳ ನಿರೀಕ್ಷೆ ಇಂದ ಕಾದು ಕುಳಿದ್ದಾರೆ. ಇನ್ನು ಇದೀಗ ಪಠಾಣ್ ಸಿನಿಮಾದ ಕುರಿತು ಕಳೆದ ಕೆಲವು ದಿನಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಪಠಾಣ್ ಸಿನಿಮಾದ ಬೇಶರಮ್ ರಂಗ್ ಹಾಡು ಇತ್ತೀಚೆಗೆ ಬಿಡಗಡೆಗೊಂಡು ಯುಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿತ್ತು. ಇನ್ನು ಈ ಹಾಡು ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಈ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ವಸ್ತ್ರ ನೋಡಿ ಆಕೆಯ ಮೇಲೆ ಕಿ’ಡಿ ಕಾರಿದ್ದಾರೆ.
ಕೇಸರಿ ಬಣ್ಣ ಹಿಂದುತ್ವದ ಸಂಕೇತ, ಇನ್ನು ಈ ಹಾಡಿನ ಸಾಲುಗಳಲ್ಲಿ ಈ ಬಣ್ಣವನ್ನು ಅವಮಾನಿಸಲಾಗಿದೆ ಪರೋಕ್ಷವಾಗಿ ನಮ್ಮ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಟ್ವಿಟರ್ ನಲ್ಲಿ ಆಂದೋಲನ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ವಿಷಯ ಕೇಳಿ ಬರುತ್ತಿದ್ದಂತೆಯೇ, ಚಿತ್ರರಂಗದ ಅನೇಕ ನಟ ನಟಿಯರು ನಟಿ ದೀಪಿಕಾ ಹಾಗೂ ಪಠಾಣ್ ಸಿನಿಮಾದ ಪರವಾಗಿ ನಿಂತು ಟ್ವೀಟ್ ಮಾಡಿದ್ದರು. ನಟಿ ರಮ್ಯಾ ಹಾಗೂ ನಟ ಪ್ರಕಾಶ್ ರೈ ಕೂಡ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಪಠಾಣ್ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರು ಸಹ ನಟಿಸಿದ್ದಾರೆ. ಇನ್ನು ನಟ ಪ್ರಕಾಶ್ ಬೆಳವಾಡಿ ಅವರು ಪಠಾಣ್ ಸಿನಿಮಾ ಬ್ಯಾನ್ ಬಗ್ಗೆ ಮಾತನಾಡಿದ್ದಾರೆ. ನಟ ಪ್ರಕಾಶ್ ಬೆಳವಾಡಿ ಅವರು ಈ ಸಿನಿಮಾವನ್ನು ಬ್ಯಾನ್ ಮಾಡಿದರು ಸಹ ನಾನು ಈ ಸಿನಿಮಾವನ್ನು ನೋಡುತ್ತೇನೆ.
ಈ ಸಿನಿಮಾದಲ್ಲಿ ನಾನು ನಟಿಸಿಲ್ಲವೆಂದರೆ ಬಹುಶಃ ನಾನು ನೋಡುತ್ತಿರಲಿಲ್ಲವೇನೋ, ಆದರೆ ನಾನು ಈ ಸಿನಿಮಾವನ್ನು ಖಂಡಿತವಾಗಿಯೂ ನೋಡುತ್ತೇನೆ. ದೀಪಿಕಾ ಖ್ಯಾತ ನಟಿ ಆಕೆಯನ್ನು ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಮಾಡಿಕೊಂಡರೆ ಆಕೆಯ ಕಾರಣದಿಂದ ಸಿನಿಮಾ ಇನ್ನಷ್ಟು ಹಿಟ್ ಆಗುತ್ತದೆ ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..