ಕ್ವಾಲ್ಹತ್ತಿ ಎಂಬ ಹಳ್ಳಿಯಲ್ಲಿ ಈಗ ಕಣ್ಣು ಹಾಯಿಸಿದಲೆಲ್ಲ ಜನವೋ ಜನ. ಅಕ್ಕ ಪಕ್ಕದ ಹಳ್ಳಿಯಿಂದ ಅಷ್ಟೇ ಅಲ್ಲ ದೂರದ ಹಳ್ಳಿಗಳಿಂದಲೂ ಜನ ಗುದ್ದಲಿ ಹಿಡಿದು ಬರುತ್ತಿದ್ದಾರೆ. ಮಕ್ಕಳು ಮರಿ ಎನ್ನದೇ ಎಲ್ಲರೂ ಭೂಮಿ ಅಗೆಯುವವರೆ. ಅಲ್ಲಿಯ ಜನರ ಕಾಯಕ ನೋಡಿದರೆ ಬಹುಶಃ ಯಾವುದೋ ದೊಡ್ಡ ಕಂಪನಿಯಿಂದ ಕಾಮಗಾರಿ ನಡೆಯುತ್ತಿರಬಹುದು, ಇಲ್ಲವೇ ಸರ್ಕಾರವೇ ಯಾವುದಾದ್ರೂ ಹೊಸ ಯೋಜನೆ ಜಾರಿಗೆ ತಂದಿರಬಹುದಾ ಅನ್ನುವ ಅನುಮಾನ ನಿಮ್ಮದಿರಬಹುದು. ಹಾಗಂದುಕೊಂಡರೆ ನಿಮ್ಮ ಊಹೆ ತಪ್ಪು. ಅಲ್ಲಿ ನಡೆಯುತ್ತಿರುವುದೇ ಬೇರೆ.
ದಕ್ಷಿಣ ಆಫ್ರಿಕಾದ ಕ್ವಾಝುಲ್ ನಟಾಲ್ ಎಂಬ ಪ್ರಾಂತ್ಯದ ಈ ಹಳ್ಳಿಯಲ್ಲಿ ಡೈಮಂಡ್ ಸಿಗುತ್ತೆ ಅಂತ ಸುದ್ದಿ ಹಬ್ಬಿದ್ದೆ ಕಳೆದ ಶನಿವಾರ. ಅದ್ಯಾವಾಗ ಸುದ್ದಿ ಕಾಡ್ಗಿಚ್ಚಿನಂತ ಹಬ್ಬಿತೋ ಜನ ಮುತ್ತಿಗೆ ಹಾಕಲು ಆರಂಭಿಸಿದ್ದಾರೆ. ಸಿಕ್ಕ ಸಿಕ್ಕ ಜಾಗವನ್ನೆಲ್ಲ ಅಗೆಯುತ್ತಿದ್ದಾರೆ. ಡೈಮಂಡ್ ಸಿಗುತ್ತೆ ಲೈಫ್ ಚೇಂಜ್ ಆಗುತ್ತೆ ಅಂತ ಭರವಸೆ ಹೊಂದಿದ್ದಾರೆ. ಅದೃಷ್ಟಕ್ಕೆ ಹೀಗೆ ಭೂಮಿ ಅಗೆಯುತ್ತಿರುವವರಿಗೆ ಹರಳುಗಳು ಸಿಗುತ್ತಿವೆ. ನನ್ಗೆ ಡೈಮಂಡ್ ಸಿಕ್ತು ನಿನ್ಗೆ ಸಿಕ್ತಾ ಅಂತ ಅಕ್ಕ ಪಕ್ಕ ಅಗೆಯುತ್ತಿರುವವರನ್ನು ವಿಚಾರಿಸುತ್ತಿದ್ದಾರೆ. ದೂರದ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಫೋನ್ ಮಾಡಿ ತನಗೆ ಡೈಮಂಡ್ ಸಿಕ್ತು ಅಂತ ಸಂತೋಷ ಹಂಚಿಕೊಳ್ತಾ ಇದ್ದಾರೆ. ನೀವು ಬನ್ನಿ ಮತ್ತೆ ಹುಡುಕೋಣ ಅಂತ ಆಹ್ವಾನ ಬೇರೆ ನೀಡುತ್ತಿದ್ದಾರೆ.
ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದ ಜನಕ್ಕೆ ಕ್ವಾಲ್ಹತ್ತಿ ಎಂಬ ಹಳ್ಳಿ ಕಲ್ಪವೃಕ್ಷವಾಗಿ ಬಿಟ್ಟಿದೆ. ತಮಗೆ ಡೈಮಂಡ್ ಸಿಗುತ್ತೆ ತಮ್ಮ ಜೀವನ ಬದಲಾಗುತ್ತೆ ಅಂತ ಅವರೆಂದೂ ಕನಸು ಮನಸಿನಲ್ಲಿಯೂ ಅಂದುಕೊಂಡವರಲ್ಲ. ಆದ್ರೆ, ಈಗ ಡೈಮಂಡ್ ಒಡೆಯರಾಗುತ್ತಿದ್ದಾರೆ. ಇನ್ನೇನು ತಮ್ಮ ಲೈಫ್ ಬದಲಾಯ್ತು ಅಂದುಕೊಳ್ತಾ ಇದ್ದಾರೆ. ಸಿಕ್ಕ ಸಿಕ್ಕ ಜಾಗವನ್ನೆಲ್ಲಾ ಅಗೆದು ಡೈಮಂಡ್‌ಗಾಗಿ ಹುಡುಕಾಟ ಮಾಡ್ತಿದ್ದಾರೆ. ಸಿಕ್ಕ ಹರಳನ್ನು ಜೋಪಾನವಾಗಿ ಹೊತ್ತು ಹೋಗುತ್ತಿದ್ದಾರೆ.
ಜನ ಮುಗಿ ಬಿದ್ದು ಡೈಮಂಡ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭೂಮಿ ಅಗೆಯುತ್ತಿದ್ದಾರೆ. ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಅಲ್ಲೇ ಜಂಡಾ ಊರಿದ್ದಾರೆ. ಅವರ ಪರಿಶ್ರಮಕ್ಕೆ ಹರಳುಗಳು ಸಿಕ್ತಾ ಇವೆ. ಆದ್ರೆ, ಅದು ಡೈಮಂಡ್ ಹರಳುಗಳಾ ಅನ್ನೋದು ಮಾತ್ರ ಪಕ್ಕಾ ಆಗಿಲ್ಲ. ಒಮ್ಮೆ ಅದು ಹೌದು ಅಂತಾದ್ರೆ, ಅಲ್ಲಿಯ ಜನರ ಲೈಫ್ ಚೇಂಜ್ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ. ಇಷ್ಟು ದಿನ ತುತ್ತು ಅನ್ನಕ್ಕೆ ಪರದಾಡುವವರು ದೊಡ್ಡ ದೊಡ್ಡ ಶ್ರೀಮಂತರಾಗಲಿದ್ದಾರೆ. ಗುಡಿಸಲಿನಲ್ಲಿ ವಾಸಿಸುತ್ತಿರುವವರು ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡು ಐಶಾರಾಮಿ ಕಾರುಗಳನ್ನು ಹೊಂದುತ್ತಾರೆ.
ಕಳೆದ ಶನಿವಾರ ಈ ಹಳ್ಳಿಯಲ್ಲಿ ಡೈಮಂಡ್ ಸಿಗುತ್ತಿದೆ ಅನ್ನೋ ಸುದ್ದಿ ವೈರಲ್ ಆಗಿದ್ದೆ ತಡ, ಸಾವಿರಾರು ಜನ ಹಳ್ಳಿಯಲ್ಲಿ ಡೈಮಂಡ್ ಹುಡುಕಾಟ ಮಾಡ್ತಾ ಇದ್ದಾರೆ. ಇದು, ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ಸರ್ಕಾರ ಎಚ್ಚೆತ್ತುಕೊಂಡಿದೆ. ತಕ್ಷಣ ಭೂಗೋಳ ಶಾಸ್ತ್ರಜ್ಞರು, ಗಣಿ ತಜ್ಞರನ್ನು ಸ್ಥಳಕ್ಕೆ ಕಳುಹಿಸಿದೆ. ಸ್ಥಳಕ್ಕೆ ಬಂದಂತಹ ತಜ್ಞರು ಹರುಳನ್ನು ಎತ್ತಿಕೊಂಡು ಇದು ಡೈಮಂಡ್ ಹೌದೋ ಅಲ್ಲೋ ಅಂತ ಪರಿಶೀಲಿಸಿದ್ದಾರೆ. ಆದ್ರೆ, ಅವರಿಗೂ ಖಚಿತವಾಗಿಲ್ಲ. ಹೀಗಾಗಿ ಪರಿಶೀಲನೆಗೆ ಕಳುಹಿಸಿ ಸುಮ್ಮನಾಗಿ ಬಿಟ್ಟಿದ್ದಾರೆ.
ಖನಿಜ ಸಂಪತ್ತಿನ ಮೇಲೆ ಅಧಿಕಾರ ಇರುವುದು ಆಯಾ ದೇಶದ ಸರ್ಕಾರದ ಮೇಲೆ. ಇದರಿಂದಾಗಿಯೇ ಯಾವುದೇ ಸ್ಥಳಕ್ಕೆ ಸರ್ಕಾರಿ ಅಧಿಕಾರಿಗಳು ದೌಡಾಯಿಸಿದರೆ ಜನ ಭಯಭೀತರಾಗುತ್ತಾರೆ. ತಮಗೆ ಸಿಕ್ಕಂತಹ ನಿಧಿಯನ್ನು ಅವರಿಗೆ ಒಪ್ಪಿಸಬೇಕಾಗುತ್ತಲ್ಲ ಅನ್ನೋ ನೋವು ಅವರಿಗೆ ಕಾಡುತ್ತೆ. ಆದ್ರೆ, ದಕ್ಷಿಣ ಆಫ್ರಿಕಾದಲ್ಲಿ ಹಾಗಾಗಲಿಲ್ಲ. ತಜ್ಞರು ಸ್ಥಳಕ್ಕೆ ಬಂದರೂ ಜನ ಕ್ಯಾರೇ ಎಂದಿಲ್ಲ. ತಮ್ಮ ಪಾಡಿಗೆ ತಾವು ಭೂಮಿ ಅಗೆದು ಡೈಮಂಡ್ ತೆಗೆಯುವ ಕೆಲಸದಲ್ಲಿ ನಿರತರಾಗಿದ್ರು. ನೋಡಿ, ಲೈಫ್ ಚೇಂಜ್ ಡೈಮಂಡ್ ಆಸೆ ಹೇಗಿರಬಹುದು ಅಂತ.
ಇಂದು ದಕ್ಷಿಣ ಆಫ್ರಿಕಾದ ಆ ಹಳ್ಳಿಯಲ್ಲಿ ಜನ ಗುದ್ದಲಿ ಹಿಡಿದು ಡೈಮಂಡ್ ಹುಡುಕುತ್ತಾ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ಒಬ್ಬ ದನಗಾಯಿ. ಆತ ದನ ಮೇಯಿಸಲು ಗುಡ್ಡ ಪ್ರದೇಶಕ್ಕೆ ಹೋಗಿದ್ದ. ಜೊತೆಯಲ್ಲಿ ಗುದ್ದಲಿ ತೆಗೆದುಕೊಂಡು ಹೋಗಿದ್ದ. ಅದೆನಕ್ಕೋ ತಿಳಿಯದು ಗುಡ್ಡದಲ್ಲಿ ಹೊಂಡ ಹೊಡೆಯಲು ಆರಂಭಿಸಿದ್ದಾನೆ. ಸ್ವಲ್ಪ ಮಣ್ಣು ಹೊರಹಾಕುತ್ತಲೇ ಒಂದು ಬೃಹತ್ ಆಕಾರದ ಹರಳು ಸಿಕ್ಕದೆ.
ಅದು ಡೈಮಂಡ್ ಇರಬಹುದೇ ಅನ್ನುವಂತಹ ಅನುಮಾನ ಆತನಿಗೆ ಆಗಲೇ ಸ್ಟಾರ್ಟ್ ಆಗಿ ಬಿಟ್ಟಿದೆ. ಅದನ್ನು ಹೊತ್ತು ಓಡೋಡಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಇದ್ದವರು ಅಕ್ಕಪಕ್ಕದ ಮನೆಯವರು ಹೌದು ಅದು ಡೈಮಂಡ್ ಅಂದಿದ್ದಾರೆ. ಆಮೇಲೆ ಊರವರೆಲ್ಲ ಸೇರಿ ಗುದ್ದಲಿ ಹಿಡಿದು ಗುಡ್ಡಕೆ ಹೋಗಿದ್ದಾರೆ. ಅದೃಷ್ಟಕ್ಕೆ ಅವರಿಗೂ ಹರಳುಗಳು ಸಿಕ್ಕಿವೆ. ಅಲ್ಲಿಂದಲೇ ಈ ಸುದ್ದಿ ಇಡೀ ದಕ್ಷಿಣ ಆಫ್ರಿಕಾದಾದ್ಯಂತ ಕಾಡ್ಗಿಚ್ಚಿನಿಂದ ಹಬ್ಬಿಬಿಟ್ಟಿದೆ.
ಸಿಕ್ಕಿರುವಂತಹ ಹರಳುಗಳು ಡೈಮಂಡ್ ಅಲ್ಲ ಎಂದು ಅಲ್ಲಗೆಳೆಯಲೂ ಸಾಧ್ಯ ಇಲ್ಲ. ಸ್ಥಳಕ್ಕೆ ಬಂದ ಪರಿಶೀಲಿಸಿದ ತಜ್ಞರಿಗೂ ಅದು ತಿಳಿದಿಲ್ಲ. ಒಮ್ಮೆ ಅದು ಡೈಮಂಡ್ ಪಕ್ಕಾ ಹೌದು ಅಂತಾದ್ರೆ ಅಲ್ಲಿಯ ಜನರ ಜೀವನವೇ ಬದಲಾಗಿ ಬಿಡುತ್ತೆ. ಅದರಲ್ಲಿಯೂ ದೊಡ್ಡ ಗಾತ್ರದ ಡೈಮಂಡ್ ಹೊಂದಿರುವ ದನಗಾಯಿ ತನ್ನ ಹತ್ತು ತಲೆ ಮಾರು ಕುಳಿತು ತಿನ್ನುವಷ್ಟು ಶ್ರೀಮಂತನಾಗಿ ಬಿಡ್ತಾನೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.