ಹೊಸಪೇಟೆಯಲ್ಲಿ ನಡೆದ ದರ್ಶನ ಮೇಲೆ ಚಪ್ಪಲಿ ಹಾರಿಸಿದ ಬಗ್ಗೆ ನಟ ಅಭಿಷೇಕ್ ಅಂಬರೀಶ್ ಹೇಳಿದ್ದೇನು ಗೊತ್ತಾ?… ನೋಡಿ ವಿಡಿಯೋ..!!

ಸ್ಯಾಂಡಲವುಡ್

ಸಾಮಾನ್ಯವಾಗಿ ಸಿನಿಮಾರಂಗದಲ್ಲಿ ಸ್ಟಾರ್ ಕಲಾವಿದರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಸಹಜವಾಗಿ ನಡೆಯುತ್ತಿರುತ್ತದೆ. ಇನ್ನು ಇದೀಗ ನಟ ದರ್ಶನ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ಶುರುವಾಗಿದ್ದು, ಸದ್ಯ ಈ ವಾರ್ ಬೇರೆ ಮಟ್ಟಕ್ಕೆ ಹೋಗಿ ತಲುಪಿದೆ.

ನಟ ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ. ದರ್ಶನ್ ಹಾಗೂ ನಟಿ ರಚಿತಾ ರಾಮ್ ಒಟ್ಟಾಗಿ ನಟಿಸಿರುವ ಕ್ರಾಂತಿ ಸಿನಿಮಾ ಮುಂದಿನ ವರ್ಷ ಜನವರಿ 26 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದ್ದೆ. ಇನ್ನು ಇದೀಗ ಡಿ ಬಾಸ್ ದರ್ಶನ್ ಹಾಗೂ ಚಿತ್ರತಂಡ ತಮ್ಮ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ಇತ್ತೀಚೆಗೆ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಭೇಟಿ ನೀಡಿದ್ದರು. ಇನ್ನು ಈ ವೇಳೆ ದರ್ಶನ್ ಅವರ ಮೇಲೆ ಅಲ್ಲಿದ್ದ ಒಬ್ಬ ಅಪರಿಚಿತ ವ್ಯಕ್ತಿ ಚಪ್ಪಲಿ ಎಸೆದಿದ್ದಾರೆ. ಆ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನು ಸಹ ಯಾವುದೇ ಮಾಹಿತಿ ದೊರಕಿಲ್ಲ.

ಇನ್ನು ಆ ವ್ಯಕ್ತಿ ಆ ರೀತಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆಯಲು ಕಾರಣವಾದರೂ ಏನು? ಈ ರೀತಿಯ ಸಾಕಷ್ಟು ಪ್ರಶ್ನೆಗಳು ಎಲ್ಲರಲ್ಲೂ ಸಹ ಮೂಡಿದೆ. ಇನ್ನು ಇದೀಗ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತದೆ. ಇನ್ನು ನಟ ಶಿವಣ್ಣ ಸೇರಿದಂತೆ ಸಾಕಷ್ಟು ಕಲಾವಿದರು,

ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ನಟ ಅಭಿಷೇಕ್ ಅಂಬರೀಶ್ ಇದೀಗ ದರ್ಶನ್ ಅವರಿಗೆ ಆಗಿರುವ ಅವಮಾನ ಬಗ್ಗೆ ಮಾಧ್ಯಮಗಳ ಬಳಿ ಕೆಂಡ ಕಾರಿದ್ದಾರೆ. ಹಾಗಾದರೆ ಅಷ್ಟಕ್ಕೂ ನಟ ಅಭಿಷೇಕ್ ಅಂಬರೀಶ್ ಹೇಳಿದ್ದೇನು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ದರ್ಶನ್ ಅವರಿಗೆ ಈ ರೀತಿ ಅವಮಾನ ಮಾಡಿರುವುದು ನಿಜಕ್ಕೂ ಬೇಸರದ ವಿಷಯ. ಇನ್ನು ಈ ರೀತಿಯ ಕೆಲಸವನ್ನು ಪುನೀತ್ ಅಭಿಮಾನಿಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ. ಈ ರೀತಿಯ ಕೆಲಸ ಪುನೀತ್ ಅಭಿಮಾನಿಗಳು ಮಾಡಿದ್ದರೆ ನಿಜಕ್ಕೂ ಅದು ಅವರಿಗೆ ಮಾಡುತ್ತಿರುವ ಅವಮಾನದ ರೀತಿ ಆಗುತ್ತದೆ.

ಅಥವಾ ಬೇರೆ ಯಾರಾದರೂ ಈ ರೀತಿಯ ಕೆಲಸ ಮಾಡಿ ಈ ಅಪವಾದವನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕುತ್ತಿದ್ದಾರೆ ಏನೋ ಗೊತ್ತಿಲ್ಲ. ಕಲಾವಿದರಿಗೆ ಈ ರೀತಿ ಮಾಡುವುದು ನಿಜಕ್ಕೂ ತಪ್ಪು ಎಂದಿದ್ದಾರೆ ನಟ ಅಭಿಷೇಕ್ ಅಂಬರೀಶ್. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *