ಇತ್ತೀಚೆಗೆ ನಟ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾತಂಡದ ಜೊತೆಗೆ ತಮ್ಮ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದರು. ಈ ವೇಳೆ ಅಲ್ಲಿ ಕಿಡಿಗೇಡಿ ಒಬ್ಬ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವರಿಗೆ ಅವಮಾನ ಮಾಡಿದ್ದ. ಇನ್ನು ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು.
ಒಬ್ಬೊಬ್ಬರು ಒಂದೊಂದು ರೀತಿ ಬಣ್ಣ ಕಟ್ಟಿ ಮಾತನಾಡುತ್ತಿದ್ದಾರೆ. ಅಲ್ಲದೆ ನಟ ದರ್ಶನ್ ಅವರ ಮೇಲೆ ಪುನೀತ್ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ ಎಂದರೆ, ಇನ್ನು ಕೆಲವರು ಇದು ರಾಜಕಾರಣಿಗಳ ಕುತಂತ್ರ ಎನ್ನುತ್ತಿದ್ದಾರೆ. ಈ ರೀತಿ ವಿಧವಿಧವಾಗಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ವಿಷಯ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಸಾಕಷ್ಟು ಕಲಾವಿದರು ವಿಡಿಯೋ ಮಾಡುವ ಮೂಲಕ ದರ್ಶನ್ ಪರವಾಗಿ ಮಾತನಾಡಿದರು. ಶಿವಣ್ಣ ಸೇರಿದಂತೆ ಅಭಿಷೇಕ್ ಅಂಬರೀಶ್ ಹಾಗೂ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿಯೆತ್ತಿದ್ದರು.
ಇನ್ನು ಇದೀಗ ಇದೇ ವಿಷಯದ ಬಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಹ ಮಾತನಾಡಿದ್ದಾರೆ. ಹೌದು ವಿಜಯಲಕ್ಷ್ಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯದ ಬಗ್ಗೆ ಬರೆದು ಕೊಂಡಿದ್ದಾರೆ. ಸದ್ಯ ವಿಜಯಲಕ್ಷ್ಮಿ ಅವರ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿನ್ನನ್ನು ದ್ವೇಷಿಸುವರು ನಿನ್ನನ್ನು ದ್ವೇಷಿಸುವ ಇನ್ನೊಂದು ಗುಂಪಿಗೆ ಸೇರುತ್ತಾರೆ. ನಿನಗೆ ಗೊತ್ತಾಗುವುದಕ್ಕೂ ಮುಂಚೆ ಇನ್ನೊಂದು ಗುಂಪನ್ನು ಕಟ್ಟಿಕೊಳ್ಳುತ್ತಾರೆ. ನಿಜ ಹೇಳಬೇಕು ಎಂದರೆ ಆ ಗುಂಪಿನಲ್ಲಿ ಅವರವರಿಗೆ ಅವರನ್ನು ನೋಡಿದರೆ ಆಗುತ್ತಿರಲ್ಲ. ಆದರೆ ನಿನಗಾಗಿ ಅವರೆಲ್ಲ ಒಟ್ಟಾಗಿ ಸೇರಿರುತ್ತಾರೆ.
ನಿನಗಾಗಿ ಅವರೆಲ್ಲ ಒಟ್ಟಾಗಿದ್ದಾರೆ ಎಂದರೆ ನೀನೇಷ್ಟು ಶಕ್ತಿವಂತನಾಗಿರಬೇಡ ಎಂಬುದನ್ನು ಯೋಚಿಸು. ಪರೋಕ್ಷವಾಗಿ ನಿನ್ನನ್ನು ಕಂಡರೆ ಆಗದೆ ಇರುವವರೇ ಈ ಕೆಲಸವನ್ನು ಮಾಡುತ್ತಾರೆ. ಆದರೆ ಅವರಿಗೆ ಗೊತ್ತಿರಲ್ಲ ನಿನಗೆ ಎಷ್ಟು ಶಕ್ತಿ ಇದೆ ಎಂಬುದು. ಆಗದೆ ಇರೋರ ಮನೆಯ ಬಾಗಿಲಿಗೆ ಹೋಗಬಾರದು ಎನ್ನುತ್ತಾರೆ.
ನಿನ್ನನ್ನು ಕಂಡರೆ ಆಗದೇ ಇರುವವರೇ ಜೊತೆ ಸೇರಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದರೆ ನೀನು ಎಷ್ಟು ಶಕ್ತಿವಂತನಾಗಿದ್ದೀಯ ನೋಡು ಎಂದು ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಪತಿಗೆ ಬೆಂಬಲ ನೀಡಿದ್ದಾರೆ.