ಸಾಮಾನ್ಯವಾಗಿ ಸಿನಿಮಾರಂಗದವರು ರಾಜಕೀಯ ಪ್ರವೇಶ ಮಾಡಿರುವುದನ್ನು ನಾವು ನೋಡಿದ್ದೇವೆ. ಸಿನಿಮಾಗಳ ಜೊತೆಗೆ ತಮ್ಮ ರಾಜಕೀಯ ಜೀವನ ಎರಡನ್ನೂ ಸಹ ಬಹಳ ಅದ್ಭುತವಾಗಿ ನಿಭಾಯಿಸಿಕೊಂಡು ಕೆಲವು ಕಲಾವಿದರು ಹೋಗುತ್ತಾರೆ. ಇನ್ನು ಕೆಲವು ಕಲಾವಿದರು ರಾಜಕೀಯದಿಂದ ಸಂಪೂರ್ಣ ದೂರ ಉಳಿದು ಬಿಡುತ್ತಾರೆ.
ಹೌದು ಪ್ರತಿ ಸಾರಿ ಚುನಾವಣೆ ಬಂದಾಗ ರಾಜಕಾರಣಿಗಳು ಸ್ಟಾರ್ ಕಲಾವಿದರ ಬಳಿ ಹೋಗಿ ಅವರನ್ನು ಅವರ ಪಕ್ಷಕ್ಕೆ ಸೇರಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ. ಕೆಲವರು ಇದಕ್ಕೆ ಒಪ್ಪಿಗೆ ನೀಡಿ ರಾಜಕೀಯ ಪ್ರವೇಶಿಸಿದರೆ, ಇನ್ನು ಕೆಲವರು ಈ ರೀತಿಯ ಆಫರ್ ಗಳನ್ನು ರಿಜೆಕ್ಟ್ ಮಾಡುತ್ತಾರೆ.
ಇನ್ನು ದೊಡ್ಮನೆಯ ಕುಟುಂಬದವರನ್ನು ಸಾಕಷ್ಟು ಬಾರಿ ರಾಜಕೀಯಕ್ಕೆ ಕರೆ ತರುವ ಪ್ರಯತ್ನ ಮಾಡಲಾಗಿದೆ. ಆದರೆ ಇದರಲ್ಲಿ ಎಲ್ಲಾ ರಾಜಕಾರಣಿಗಳು ವಿಫಲರಾಗಿದ್ದಾರೆ. ಇನ್ನು ಡಾ. ರಾಜ್ ಕುಮಾರ್ ಅವರನ್ನು ಸಹ ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಲಾಗಿತ್ತು.
ಆದರೆ ಇದಕ್ಕೆ ಅಣ್ಣಾವ್ರು ಒಪ್ಪಿಗೆ ನೀಡಿರಲಿಲ್ಲ. ಇನ್ನು ಪುನೀತ್ ಅವರನ್ನು ಸಹ ರಾಜಕೀಯಕ್ಕೆ ಬರುವಂತೆ ಸ್ವತಃ ಮೋದಿ ಅವರು ಕೇಳಿಕೊಂಡಿದ್ದರು. ಇನ್ನು ಅಪ್ಪು ಅವರು ಸಹ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇನ್ನು ಅಪ್ಪು ಅವರ ನಂತರ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹೆಸರು ಕೇಳಿ ಬಂದಿತ್ತು.
ಅಶ್ವಿನಿ ಅವರನ್ನು ರಾಜಕೀಯ ಪ್ರವೇಶ ಮಾಡುವಂತೆ ಸಾಕಷ್ಟು ರಾಜಕೀಯ ಮುಖಂಡರು, ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಅಶ್ವಿನಿ ಅವರು ತಾನು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ನಿರಾಕರಿಸಿದ್ದರು. ಇನ್ನು ಇದೀಗ ಶಿವ ರಾಜ್ ಕುಮಾರ್ ಅವರ ಹೆಸರು ಕೇಳಿ ಬರುತ್ತಿದೆ.
ಹೌದು ಇದೀಗ ಶಿವಣ್ಣ ಅವರು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ವೈರಲ್ ಆಗುತ್ತಿದೆ. ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಸ್ವತಃ ಶಿವ ರಾಜ್ ಕುಮಾರ್ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಊಹಾ ಪೋಹಾಗಳಿಗೆ ತೆರೆ ಎಳೆದಿದ್ದಾರೆ.
ನಾನು ಯಾವುದೇ ಪಕ್ಷ ಸೇರಿಕೊಳ್ಳುತ್ತಿಲ್ಲ, ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ಎಂದಿದ್ದಾರೆ ನಟ ಶಿವ ರಾಜ್ ಕುಮಾರ್. ಇನ್ನೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…