ದರ್ಶನ್ ಮೇಲೆ ಚಪ್ಪಲಿ ಎಸೆದವರ ಬಗ್ಗೆ ಅಭಿಷೇಕ್ ಪತ್ನಿ ಅವಿವಾ ಹೇಳಿದ್ದೇನು ಗೊತ್ತಾ?.. ನೋಡಿ ವಿಡಿಯೋ..!!!

ಸ್ಯಾಂಡಲವುಡ್

ಕ್ರಾಂತಿ ಸಿನಿಮಾ ಎರಡನೇ ಹಾಡು ಬಿಡುಗಡೆ ಮಾಡಲು, ದರ್ಶನ್ ಹಾಗೂ ಇದೀಗ ಚಿತ್ರತಂಡ ಇತ್ತೀಚೆಗೆ ಹೊಸಪೇಟೆಗೆ ಭೇಟಿ ನೀಡಿದ್ದರು. ಇನ್ನು ಈ ವೇಳೆ ನಟ ದರ್ಶನ್ ಅವರ ಮೇಲೆ ಅಲ್ಲಿದ್ದ ಅಪರಿಚಿತ ವ್ಯಕ್ತಿ ಒಬ್ಬ ಚಪ್ಪಲಿ ಎಸೆದು ಅವರ ಮೇಲೆ ಅಲ್ಲೇ ಮಾಡಿದ್ದಾನೆ. ಸದ್ಯ ಈ ವಿಷಯದ ಬಗ್ಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರರಂಗದ ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನಟ ಅಭಿಷೇಕ್ ಅಂಬರೀಶ್ ಅವರ ಪತ್ನಿ ಅವಿವಾ ಅವರು ಕೂಡ ಮಾತನಾಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ, ಸದ್ಯ ನಟ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಇನ್ನು ನಟ ವಶಿಷ್ಠ ಸಿಂಹ ಸೇರಿದಂತೆ, ನಟಿ ಅಮೂಲ್ಯ, ನಟ ಶಿವ ರಾಜ್ ಕುಮಾರ್, ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದೀಗ ನಟ ಅಭಿಷೇಕ್ ಅಂಬರೀಶ್ ಅವರ ಪತ್ನಿ ಅವಿವಾ ಅವರು ಕೂಡ ಇದೀಗ ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಇದೀಗ ನಟ ಸುಮಲತಾ ಅಂಬರೀಷ್ ಅವರು ತಮ್ಮ ದೊಡ್ಡ ಮಗ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಯಾವುದೇ ಒಬ್ಬ ನಿಜವಾದ ಅಭಿಮಾನಿ ಈ ರೀತಿಯ ಕೃತ್ಯ ಮಾಡುವುದಿಲ್ಲ. ಇದರಿಂದ ಯಾವುದೇ ತರದ ಹಾನಿ ದರ್ಶನ್ ಅವರ ವರ್ಚಸ್ಸು ಹಾಗೂ ಜನಪ್ರಿಯತೆಗೆ ಆಗುವುದಿಲ್ಲ.

ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಂತಿರುವ ಈ ಘಟನೆ ಎಸೆಗಿದವರ ಸಣ್ಣತನ ಹಾಗೂ ಹೇಡಿತನ ಮಾತ್ರ ತಿಳಿಯುತ್ತದೆ. ಇಡೀ ಚಿತ್ರರಂಗ ಕೃತ್ಯ ಕಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ. ಯಶ್, ದರ್ಶನ್, ಅಂಬಿ, ಉಪೇಂದ್ರ, ಅಪ್ಪು ಜೊತೆಗಿರುವ ಫೋಟೋ ಶೇರ್ ಮಾಡಿ ನಾವೆಲ್ಲಾ ಒಂದೇ ಎಂದು ಸಾರಿದ್ದಾರೆ.

ಇನ್ನು ನಟ ಅಭಿಷೇಕ್ ಅಂಬರೀಶ್ ಕೂಡ ಎಲ್ಲರಂತೆ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಪತಿಯಂತೆ ಅವರ ಪತ್ನಿ ಅವಿವಾ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ದರ್ಶನ್ ಸರ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು.

ಕನ್ನಡವನ್ನ ಬೆಳೆಸುವುದರಲ್ಲಿ ಉಳಿಸುವುದರಲ್ಲಿ ಅವರದ್ದು ಸಾಕಷ್ಟು ಪಾತ್ರ ಇದೆ. ಅವರ ಮೇಲೆ ಈ ರೀತಿಯಾದ ಕೃತ್ಯವನ್ನು ಯಾರು ಸಹ ಸಹಿಸುವುದಿಲ್ಲ. ದರ್ಶನ್ ಸರ್ ಅವರ ಬೆಂಬಲವಾಗಿ ನಾವಿದ್ದೇವೆ ಎಂದಿದ್ದಾರೆ ಅವಿವಾ. ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *