ಬಾಲಿವುಡ್ ನ ಬಹು ಬೇಡಿಕೆಯ ನಟ ಎಂದರೆ ಆ ಪಟ್ಟಿಯಲ್ಲಿ ಮೊದಲು ಕೇಳಿ ಬರುವ ಹೆಸರು ಶಾರುಖ್ ಖಾನ್ ಎಂದರೆ ತಪ್ಪಾಗುವುದಿಲ್ಲ. ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಒಟ್ಟಾಗಿ ನಟಿಸಿರುವ ಸಿನಿಮಾ ಪಠಾಣ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಿದೆ.
ನಟ ಶಾರುಖ್ ಖಾನ್ ಅವರು ಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇನ್ನು ಶಾರುಖ್ ಖಾನ್ ಅಭಿಮಾನಿಗಳು ಅವರನ್ನು ಮತ್ತೆ ತೆರೆ ಮೇಲೆ ನೋಡಲು ಬಹಳ ಕಾತುರರಾಗಿದ್ದಾರೆ. ಅಲ್ಲದೆ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಶಾರುಖ್ ಖಾನ್ ಜೋಡಿ ಈ ಹಿಂದೆ ಕೂಡ ಒಟ್ಟಾಗಿ ಸಿನಿಮಾಗಳಲ್ಲಿ
ನಟಿಸಿ ತಮ್ಮ ಅದ್ಭುತ ಕೆಮಿಸ್ಟ್ರಿಯ ಅಭಿಮಾನಿಗಳ ಮನ ಗೆದ್ದಿದ್ದರು. ಓಂ ಶಾಂ’ತಿ ಓಂ, ಚೆನ್ನೈ ಎಕ್ಸ್ಪ್ರೆಸ್, ಹ್ಯಾಪಿ ನ್ಯೂ ಇಯರ್, ನಂತಹ ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಗೆದ್ದಿದ್ದರು. ಇನ್ನು ಇದೀಗ ಮತ್ತೊಮ್ಮೆ ತಮ್ಮ ಕೆಮಿಸ್ಟ್ರಿಯ ಮೂಲಕ ಮೋಡಿ ಮಾಡಲು ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಶಾರುಖ್ ಖಾನ್ ತಯಾರಾಗಿದ್ದಾರೆ.
ಇನ್ನು ಇತ್ತೀಚೆಗೆ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ಪಠಾಣ್ ಸಿನಿಮಾದ ಬೇಶರಮ್ ರಂಗ್ ಹಾಡು ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು. ಇನ್ನು ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಧರಿಸಿದ್ದು, ಈ ಕಾರಣದಿಂದ ಸಾಕಷ್ಟು ಜನ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಪಠಾಣ್ ಸಿನಿಮಾದ ಮೊದಲ ಹಾಡಿನ ವಿರುದ್ದ ಇನ್ನು ಬೆಂ’ಕಿ ತನ್ನಗಾಗಿಲ್ಲ ಅಷ್ಟರಲ್ಲಿ ಇದೀಗ ಪಠಾಣ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಹೌದು ಪಠಾಣ್ ಸಿನಿಮಾದ ಎರಡನೇ ಹಾಡು ಜುಮೋ ಜೋ ಪಠಾಣ್ ಹಾಡು ಇದೀಗ ಬಿದುಗ್ಡೆಯಾಗಿದ್ದು, ಈ ಹಾಡಿನಲ್ಲಿ ಸಹ ನಟಿ ದೀಪಿಕಾ ಬಹಳ ಹಾಟ್ ಆಗಿ ಕಾಣಿಸುತ್ತಿದ್ದಾರೆ.
ಇನ್ನು ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು 24 ಮಿಲಿಯನ್ ವೀಕ್ಷಣೆ ಕಂಡು ಇದೀಗ ಹೊಸ ದಾಖಲೆ ಬರೆದಿದೆ. ಇನ್ನು ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಯಾವುದೇ ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆ ಧರಿಸಿಲ್ಲ. ಇದನ್ನು ನೋಡಿ ನಟಿಯ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಈ ಹಾಡು ಯಾವುದೇ ವಿವಾದಗಳಿಗೆ ಕಾರಣವಾಗುವುದಿಲ್ಲ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಇನ್ನು ಈ ಹಾಡಿನ ಮೂಲಕ ಪಠಾಣ್ ಸಿನಿಮಾ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದ್ದರೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ….