ಬಾಲಿವುಡ್ ನ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟನೆಯ ಅವರ ಬಹು ನಿರೀಕ್ಷಿತ ಸಿನಿಮಾ ಪಠಾಣ್. ಪಠಾಣ್ ಸಿನಿಮಾ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಪಠಾಣ್ ಸಿನಿಮಾವನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ್ದು, ಆದಿತ್ಯ ಚೋಪ್ರಾ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಇನ್ನು ನಟ ಶಾರುಖ್ ಖಾನ್ ಅವರು ಸುಮಾರು 4 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಪಠಾಣ್ ಸಿನಿಮಾದ ಮೂಲಕ ಬರುತ್ತಿದ್ದು, ಸಿನಿಮಾಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಪಠಾಣ್ ಸಿನಿಮಾ ಬಿಡುಗಡೆಗೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಪಠಾಣ್ ಸಿನಿಮಾದ ಬೇಶರಮ್ ರಂಗ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಬಹಳ ಸದ್ದು ಮಾಡಿತ್ತು. ಇನ್ನು ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ತಮ್ಮ ಹಾಟ್ ಹಾಗೂ ಬೋ’ಲ್ಡ್ ಲುಕ್ಸ್ ನ ಮೂಲಕ ಎಲ್ಲರ ಘಮನ ಸೆಳೆದಿದ್ದರು.
ಇನ್ನು ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕ್ಕಿನೀ ತೊಟ್ಟಿದ್ದರು. ಇನ್ನು ಇದನ್ನು ಗಮನಿಸಿದ ಕೆಲವು ಹಿಂದೂ ಪರ ಸಂಘಟನೆಗಳನ್ನು, ಕೇಸರಿ ಬಣ್ಣದ ಬಟ್ಟೆ ತೊಟ್ಟು ಹಿಂದುತಕ್ಕೆ ಅವ’ಮಾನ ಮಾಡಿದ್ದಾರೆ ಎಂದು ಪಠಾಣ್ ಸಿನಿಮಾದ ವಿರುದ್ದ ಗುಡುಗಿದ್ದಾರೆ. ಅಲ್ಲದೆ ಈ ಸಿನಿಮಾ ಬಿಡುಗಡೆಯಾಗಬಾರದು ಈ ಸಿನಿಮಾ ಬ್ಯಾನ್ ಆಗಬೇಕು ಎಂದು ಆ,ಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಆಕ್ರೋಶ ಸದ್ಯ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತಾರಕಕ್ಕೆರಿದೆ. ಅಲ್ಲದೆ ಚಿತ್ರರಂಗದ ಸ್ಟಾರ್ ಕಲಾವಿದರು ಪಠಾಣ್ ಸಿನಿಮಾದ ಪರ ನಿಂತು ಧ್ವನಿ ಎತ್ತಿದ್ದಾರೆ. ಅಲ್ಲದೆ ಇದೀಗ ಹಿರಿಯ ನಟಿ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ನಟಿ ಆಶಾ ಪರೇಖ್ ಹೇಳಿದ್ದೇನು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..
ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಹಿಂದುತ್ವಕ್ಕೆ ಅವ,ಮಾನ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರ ಮಾಡಲಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಧರ್ಮಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿಲ್ಲ. ಹಿಂದಿ ಸಿನಿಮಾಗಳನ್ನು ಟಾರ್ಗೆಟ್ ಮಾಡುವುದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಕೆಲವು ಸಿನಿಮಾಗಳು ಹೇಳಿಕೊಳ್ಳುವಷ್ಟು ಸದ್ದು ಮಾಡಿಲ್ಲ. ಇನ್ನು ಸಿನಿಮಾಗಳನ್ನು ಬ್ಯಾನ್ ಮಾಡುತ್ತಾ ಹೋದರೆ ಮುಂದೆ ಸಿನಿಮ ನಿರ್ಮಾಣ ಮಾಡಲು ಸಾಧ್ಯವೇ ಎಂದಿದ್ದಾರೆ ನಟಿ ಆಶಾ ಪರೇಖ್. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..