ಕ್ರಿಸ್ಮಸ್ ಪಯುಕ್ತ ಅಭಿಮಾನಿಗಳ ಜೊತೆಗೆ ಸಿಹಿ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್! ಏನದು ಗೊತ್ತಾ ನೋಡಿ?…

ಸ್ಯಾಂಡಲವುಡ್

ದಕ್ಷಿಣ ಭಾರತ ಸಿನಿಮಾರಂಗದ ಬಹು ಬೇಡಿಕೆಯ ನಟಿಯರ ಪೈಕಿನತಿ ಮೇಘನಾ ರಾಜ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ಮೇಘನಾ ರಾಜ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ನಿ*ಧ*ನದ ನಂತರ ಒಬ್ಬಂಟಿಯಾಗಿದ್ದುರು.

ಇನ್ನು ನಟಿ ಮೇಘನಾ ರಾಜ್ ಬಾಳಲ್ಲಿ ಅವರ ಮಗ ರಾಯನ್ ರಾಜ್ ಸರ್ಜಾ ಬೆಳಕಾಗಿ ಬಂದರು. ಇನ್ನು ಕೆಲವು ದಿನಗಳ ಕಾಲ ತಮ್ಮ ಪತಿಯ ಅಗಲಿಕೆಯ ನೋವಿನಲ್ಲಿದ್ದ ನಟಿ ಮೇಘನಾ ರಾಜ್ ಮತ್ತೊಮ್ಮೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಹೌದು ನಟಿ ಮೇಘನಾ ರಾಜ್ ಇದೀಗ ಮತ್ತೆ ಸಿನಿಮಾಗಳನ್ನು ಒಪ್ಪಿಕೊಂಡು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟಿ ಮೇಘನಾ ರಾಜ್ ತಮ್ಮ ಸ್ನೇಹಿತ ಹಾಗೂ ಕನ್ನಡ ಚಿತ್ರರಂಗದ ಉತ್ತಮ ನಿರ್ದೇಶಕ ಪನ್ನಗಭರಣ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅಲ್ಲದೆ ಈ ವಿಷಯ ನಿಜ ಎಂದು ಹೇಳಲಾಗುತ್ತಿದೆ. ಹಾಗೂ ಈ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಒಂದು ಸಣ್ಣ ಪಾತ್ರದಲ್ಲಿ ಕಾನಿಸಿಕೊಳ್ಳಲಿದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಅಥವಾ ನಟಿ ಮೇಘನಾ ರಾಜ್ ಬಿಟ್ಟು ಕೊಟ್ಟಿಲ್ಲ.

ನಟಿ ಮೇಘನಾ ರಾಜ್ ಇತ್ತೀಚೆಗೆ ತಾವು ಶೀಘ್ರದಲ್ಲೇ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡುವುದಾಗಿ ಒಂದು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಹೇಳಿದ್ದರು. ಇದೀಗ ನಟಿ ಮೇಘನಾ ರಾಜ್ ಕೊನೆಗೂ ತಮ್ಮ ಅಭಿಮಾನಿಗಳಿಗೆ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಒಂದು ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು ನಟಿ ಮೇಘನಾ ರಾಜ್ ಇಷ್ಟು ದಿನ ಸೋಶಿಯಲ್ ಮೀಡಿಯಾದ ಮುಖಾಂತರ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಿದ್ದರು, ಇನ್ನು ಮುಂದೆ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ನಟಿ ಮೇಘನಾ ರಾಜ್ ತಮ್ಮ ಸ್ವಂತ ಯು ಟ್ಯೂಬ್ ಚಾನಲ್ ಅನ್ನು ಶುರು ಮಾಡಿದ್ದಾರೆ.ಇನ್ನು ಈ ಬಗ್ಗೆ ಸ್ವತಃ ನಟಿ ಮೇಘನಾ ರಾಜ್ ಅವರೇ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ನಟಿ ಮೇಘನಾ ರಾಜ್ ಅವರು ತಮ್ಮ ದಿನ ನಿತ್ಯದ ಎಲ್ಲಾ ಅಪ್ಡೇಟ್ ಗಳನ್ನು ಹಾಗೆ ತಮ್ಮ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಮ್ಮ ಯು ಟ್ಯೂಬ್ ಚಾನಲ್ ನ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಬಗ್ಗೆ ನಟಿ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *