ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರ ಮನೆಯವರು ಆಕೆಗೆ ಮದುವೆ ಮಾಡಿಸಿ ಮನೆಯಿಂದ ಕಳುಹಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ತನ್ನ ಮಗಳ ಮದುವೆ ಪ್ರತಿಯೊಬ್ಬ ಮನೆಯವರ ಜವಾಬ್ದಾರಿ ಎಂದು ಅವರ ಮನೆಯವರು ಭಾವಿಸುತ್ತಾರೆ.
ಹೆಣ್ಣು ಮಗಳು ವಯಸ್ಸಿಗೆ ಬಂದ ತಕ್ಷಣ ಅವಳಿಗೆ ತಕ್ಕ ಹುಡುಗನನ್ನು ಹುಡುಕಿ ಮನೆಯವರು ಮದುವೆ ಮಾಡಲು ನಿರ್ಧಾರ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಓದಲು ಇಷ್ಟವಿದ್ದರು ಸಹ ಕಾಲೇಜು ಬಿಡಿಸಿ ಆಕೆಗೆ ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸುತ್ತಾರೆ.
ಇನ್ನು ಇದೀಗ ಒಂದು ಘಟನೆ ನಡೆದಿದ್ದು, ಇದೀಗ ಆ ಘಟನೆ ಎಲ್ಲರಿಗೂ ತಿಳಿದು ಎಲ್ಲರೂ ಆ ಹೆಣ್ಣು ಮಗುವಿನ ಸಾಧನೆಗೆ ಚಪ್ಪಾಳೆ ತಟ್ಟುತ್ತಿದ್ದಾರೆ. ಹೌದು ಒಂದು ಹೆಣ್ಣು ಮಗಳಿಗೆ ಮನೆಯವರೆಲ್ಲಾ ಸೇರಿ ಮದುವೆ ಮಾಡಲು ಒತ್ತಾಯ ಮಾಡುತ್ತಾರೆ. ಆದರೆ ಆಕೆ ಮನೆ ಬಿಟ್ಟು 7 ವರ್ಷಗಳ ಕಾಲ ದೂರವಿದ್ದು, ಇದೀಗ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಮನೆಗೆ ಹಿಂತಿರುಗಿದ್ದಾರೆ.
ಇನ್ನು ಇದೀಗ ವೀರತ್ ನಲ್ಲಿ ಈ ಘಟನೆ ನಡೆದಿದೆ, ಹೌದು ಸಂಜು ರಾಣಿ ಎಂಬ ಮಹಿಳೆ ಈ ರೀತಿಯ ಒಂದು ಸಾಹಸ ಮಾಡಿದ್ದಾರೆ. ಸಂಜು ರಾಣಿ ತಮ್ಮ ಕಾಲೇಜು ಓದುತ್ತಿರುವ ವೇಳೆ ತಮ್ಮ ತಾಯಿ ಅನಾ-ರೋಗ್ಯದ ಕಾರಣದಿಂದ ನಿ*ಧ*ನರಾದರು. ಇನ್ನು ತಾಯಿಯನ್ನು ಕಳೆದುಕೊಂಡ ನಂತರ ಸಂಜು ರಾಣಿ ದೆಹಲಿಯಲ್ಲಿ ತಮ್ಮ ಪದವಿ ಮುಗಿಸಿದರು.
ಈ ವೇಳೆ ಕುಟುಂಬದವರೆಲ್ಲ ತಾಯಿ ಇಲ್ಲದ ಹುಡುಗಿ ಎಂದು ಹೇಳಿ ಆಕೆಗೆ ಆದಷ್ಟು ಬೇಗ ಮದುವೆ ಮಾಡಬೇಕು ಎಂದು ನಿರ್ಧರಿಸಿ. ಆಕೆಗೆ ಮದುವೆಯಾಗುವಂತೆ ಒತ್ತಾಯ ಮಾಡಿದರು. ಆದರೆ ಸಂಜು ರಾಣಿ ಇದಕ್ಕೆ ಒಪ್ಪಲಿಲ್ಲ, ಜೀವನದಲ್ಲಿ ತಾನು ಏನಾದರೂ ಸಾಧಿಸಬೇಕು ಎಂದುಕೊಂಡಿದ್ದ ಸಂಜು ರಾಣಿ ಮದುವೆ ಬಿಟ್ಟು ಮನೆ ಬಿಡುತ್ತಾರೆ.
ಮನೆ ಬಿಟ್ಟು ಬಂದ ಸಂಜು ರಾಣಿ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸಿ, ಕಷ್ಟ ಪಟ್ಟು ಓದಿ ಪಿ ಎಸ್ ಐ ಪರೀಕ್ಷೆ ಬರೆದು ಅದರಲ್ಲಿ ಒಳ್ಳೆಯ ಅಂಕ ಪಡೆದು, ಸರ್ಕಾರಿ ನೌಕರಿ ತೆಗೆದುಕೊಳ್ಳುತ್ತಾರೆ. ಇನ್ನು 7 ವರ್ಷಗಳ ನಂತರ ಸಂಜು ರಾಣಿ ಮತ್ತೆ ತಮ್ಮ ಮನೆಗೆ ಒಂದು ಸರ್ಕಾರಿ ನೌಕರಿ ತೆಗೆದುಕೊಂಡು ಮರಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಜು ರಾಣಿ, ನಾನು ಮನೆ ಬಿಟ್ಟು ಹೋದಾಗ ನನ್ನ ಬಳಿ ಏನೂ ಇರಲಿಲ್ಲ, ನಾನು ಒಂದು ಬಾಡಿಗೆ ರೂಮ್ ತೆಗೆದುಕೊಂಡು ಅಲ್ಲಿಯೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೆ, ನಂತರ ಒಂದು ಸ್ಕೂಲ್ ನಲ್ಲಿ ತಾತ್ಕಾಲಿಕವಾಗಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದೆ. ಕೆಲಸ ಮಾಡಿಕೊಂಡು ನಾನು ನನ್ನ ವಿಧ್ಯಾಭ್ಯಾಸ ಮುಗಿಸಿಕೊಂಡು ಒಂದು ಸರ್ಕಾರಿ ನೌಕರಿ ತೆಗೆದುಕೊಂಡೆ. ಇನ್ನು ಮುಂದೆ ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸುವ ಆಸೆ ಇದೆ ಎಂದಿದ್ದಾರೆ ಸಂಜು ರಾಣಿ. ಇನ್ನು ಇವರ ಸಾಧನೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.