ಸ್ಯಾಂಡಲ್ವುಡ್ ನಟರಾದ ಡಿ ಬಾಸ್ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಇಬ್ಬರಿಗೂ ಸಹ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಇನ್ನು ನಟ ದರ್ಶನ್ ಹಾಯಾಗು ನಟ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದರು. ಆದರೆ ಅದ್ಯರ ಕಣ್ಣು ಇವರ ಮೇಲೆ ಬಿತ್ತೋ ಏನೋ, ಈ ಇಬ್ಬರೂ ಸ್ನೇಹಿತರ ನಡುವೆ ಮನಸ್ತಾಪಗಳು ಮೂಡಿ ಇವರ ಸ್ನೇಹ ಮುರಿದು ಬಿದ್ದಿತ್ತು.
ನಟ ದರ್ಶನ್ ಅವರು ಇತ್ತೀಚೆಗೆ ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೊಸಪೇಟೆಗೆ ಹೋದಾಗ ಅಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಡಿ ಬಾಸ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವರಿಗೆ ಅವ-ಮಾನ ಮಾಡಿದ ಸುದ್ದಿ ನಿಮ್ಮೆಲ್ಲರಿಗೂ ಸಹ ಗೊತ್ತ ಇದೆ.
ಇನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ನಟ ದರ್ಶನ್ ಅವರ ಬೆನ್ನೆಲುಬಾಗಿ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ನಿಂತಿದ್ದರು. ಇನ್ನು ನಟ ದರ್ಶನ್ ಅವರ ಪರವಾಗಿ ಮಾತನಾಡುತ್ತಾ, ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ನಟ ದರ್ಶನ್ ಅವರಿಗೆ ಈ ರೀತಿಯ ಒಂದು ಘಟನೆ ನಡೆದಿದೆ ಎಂದು ತಿಳಿದು ಅವರ ಗೆಳೆಯ ಸುದೀಪ್ ಅವರು ಸಹ ಇದೀಗ ನಟ ದರ್ಶನ್ ಅವರ ಬೆಂಬಲಕ್ಕೆ ಬಂದಿದ್ದಾರೆ. ನಟ ದರ್ಶನ್ ಕುರಿತು ನಟ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ನೋಡಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದರು.
ಸುದೀಪ್ ಅವರು ನಟ ದರ್ಶನ್ ಅವರಿಗಾಗಿ ಮಾತನಾಡಿದ ಮಾತುಗಳನ್ನು ಕೇಳಿ ನಟ ದರ್ಶನ್ ಅವರು ತುಂಬಾ ಖುಷಿ ಪಟ್ಟಿದ್ದಾರೆ. ಅಲ್ಲದೆ ನಟ ದರ್ಶನ್ ಅವರು ಸುದೀಪ್ ಅವರನ್ನು ಕುರಿತು ಇದೀಗ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ್ದು ಸದ್ಯ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ಇತ್ತೀಚೆಗೆ ನಟ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ತಮ್ಮ ಕುರಿತು ನಡೆದ ಘಟನೆ ಬಗ್ಗೆ ವೇದಿಕೆ ಮೇಲೆ ಮಾತನಾಡಿದ್ದಾರೆ. ಅಲ್ಲದೆ ಈ ವೇಳೆ ನಟ ದರ್ಶನ್ ಅವರು ನನಗಾಗಿ ನಿಂತ ಪ್ರತಿಯೊಬ್ಬರಿಗೂ ಸಹ ನಾನು ಸದಾ ಚಿರುರುಣಿ ಎಂದಿದ್ದಾರೆ.
ಇದನ್ನು ಕೇಳಿದ ಅಭಿಮಾನಿಗಳು ಸುದೀಪ್ ಅವರನ್ನು ಕುರಿತು ಸಹ ಮಾತನ್ನು ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಇನ್ನು ನಟ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರೋಮೋ ಬಿಡುಗಡೆಗೆ ನಟ ಸುದೀಪ್ ಅವರು ಅತಿಥಿಯಾಗಿ ಬರಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ. ಇನ್ನು ಈ ಬಗ್ಗೆ ನಿಯ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..