ಸಾಮಾನ್ಯವಾಗಿ ಸ್ಟಾರ್ ಕಲಾವಿದರ ಅಭಿಮಾನಿಗಳು ಅವರ ಅಭಿಮಾನವನ್ನು ಬೇರೆ ಬೇರೆ ರೀತಿ ತೋರಿಸುತ್ತಾರೆ. ಇನ್ನು ಸ್ಟಾರ್ ಕಲಾವಿದರನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಅವರ ಪ್ರತಿಯೊಂದು ಅಪ್ಡೇಟ್ ಗಳನ್ನು ಪಡೆಯುತ್ತಿರುತ್ತಾರೆ. ಅಲ್ಲದೆ ನಟ ನಟಿಯರ ಹೆಸರಿನಲ್ಲಿ ಅವರ ಅಭಿಮಾನಿಗಳು ಫ್ಯಾನ್ ಪೇಜ್ ಕ್ರಿಯೇಟ್ ಮಾಡಿ,
ಅವರ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇನ್ನು ಕೆಲವು ನಟ ನಟಿಯರ ಅಭಿಮಾನಿಗಳು ಕೇವಲ ತಮಗೆ ಇಷ್ಟವಾದ ನಟರನ್ನು ಹೊರತು ಪಡಿಸಿ ಬೇರೆ ಎಲ್ಲಾ ನಟ ನಟಿಯರಿಗೂ ಸಹ ಕೆಲವೊಮ್ಮೆ ಅ-ವಾ-ಚ್ಯ ಶಬ್ದಗಳಿಂದ ನಿಂದಿ-ಸುತ್ತಿರುತ್ತಾರೆ.
ಹೌದು ಬೇರೆ ಕಲಾವಿದರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಅ-ವಾ-ಚ್ಯ ಶಬ್ದಗಳಿಂದ ಕಾಮೆಂಟ್ ಮಾಡುವುದು ಅವರನ್ನು ಟ್ರೊಲ್ ಮಾಡುವುದು ಹೇಗೆ ಹಲವಾರು ರೀತಿಯಲ್ಲಿ ಬೇರೆ ನಟ ನಟಿಯರನ್ನು ಕೀಳಾಗಿ ಕಾನುತ್ತಿರುತ್ತಾರೆ. ಅಲ್ಲದೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ಕೂಡ ನಡೆಯುತ್ತಿರುತ್ತದೆ.
ಒಂದು ಸ್ಟಾರ್ ನಟ ಅಥವಾ ನಟಿಯ ಅಭಿಮಾನಿಗಳು ಬೇರೆ ಸ್ಟಾರ್ ನಟ ಅಥವಾ ನಟಿಯರನ್ನು ಅವಮಾನಿಸುವುದು, ಅವರನ್ನು ಟ್ರೊಲ್ ಮಾಡುವುದು ಮಾಡುತ್ತಿರುತ್ತಾರೆ. ಅಲ್ಲದೆ ನಟ ನಟಿಯರ ತಮ್ಮ ಅಭಿಮಾನಿಗಳ ಜಗಳ ಕೆಲವೊಮ್ಮೆ ತಾರಕಕ್ಕೆ ಹೋದಾಗ ಅವರ ಬಳಿ ಈ ರೀತಿ ಮಾಡದೆ ಇರುವಂತೆ ಸಹ ಕೇಳಿ ಕೊಳ್ಳುತ್ತಾರೆ.
ಇನ್ನು ಇತ್ತೀಚೆಗೆ ನಟ ದರ್ಶನ್ ಅವರ ಅಪ್ಪು ಬಗ್ಗೆ ಹೇಳಿದ ಒಂದು ಹೇಳಿಕೆಯಿಂದ ಅವರ ಮೇಲೆ ಅಪ್ಪು ಅಭಿಮಾನಿಗಳು ಕಿ-ಡಿ ಕಾರಿದ್ದರು. ಅಲ್ಲದೆ ಅವರು ಹೊಸಪೇಟೆಗೆ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಹೋದಾಗ ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ಅವ-ಮಾನ ಮಾಡಲು ಎನೋನೋ ಪ್ರಯತ್ನ ಪಟ್ಟರೂ. ಇನ್ನು ಇದೆ ವೇಳೆ ಅಲ್ಲಿದ್ದ ಒಬ್ಬ ಅಪರಿಚಿತ ವ್ಯಕ್ತಿ ದರ್ಶನ್ ಅವರ ಮೇಲೆ ಚಪ್ಪಲಿ ಸಹ ಎಸೆದು ಅವರಿಗೆ ಅವಮಾನ ಮಾಡಿದ್ದ.
ಇನ್ನು ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಶಿವಣ್ಣ ಅವರು ಸಹ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದರು. ಇನ್ನು ಶಿವಣ್ಣ ಅವರ ವೇದ ಸಿನಿಮಾ ಇದೀಗ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದೆ. ಇನ್ನು ಶಿವಣ್ಣ ಅವರ ತಮ್ಮ ಸಿನಿಮಾದ ಒಂದು ಸಂದರ್ಶನದಲ್ಲಿ ಇರುವಾಗ ಅವರಿಗೆ ಈ ಕುರಿತು ಪ್ರಶ್ನೆ ಮಾಡಲಾಗಿತ್ತು.
ಇದಕ್ಕೆ ಶಿವಣ್ಣ ಅವರು ನಾನು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ನಾನು ಇದೀಗ ನನ್ನ ವೇದ ಸಿನಿಮಾದ ಪ್ರಚಾರ ಬಂದಿದ್ದೇನೆ, ನಾನು ಕೇವಲ ನನ್ನ ವೇದ ಸಿನಿಮಾದ ಕುರಿತು ಮಾತ್ರ ಮಾತನಾಡುತ್ತೇನೆ ಎಂದಿದ್ದಾರೆ. ಸದ್ಯ ಶಿವಣ್ಣ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.