ಬ್ಯಾನ್ ಮಾಡುತ್ತಾರೆ ಎಂದು ಹೆದರಿ ಕನ್ನಡ ಹಾಗೂ ಕನ್ನಡಿಗರ ಕುರಿತು ನಟಿ ರಶ್ಮಿಕಾ ಮಂದಣ್ಣ ಮಾಡಿದ್ದೇನು ಗೊತ್ತಾ ಏಲ್ಲರೂ ಶಾಕ್ ನೋಡಿ?…

ಸ್ಯಾಂಡಲವುಡ್

ದಕ್ಷಿಣ ಭಾರತ ಸಿನಿಮಾರಂಗದ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ. ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವಿವಾದಾತ್ಮಕ ಹೇಳಿಕೆಗಳು ಹಾಗೂ ತಾ ವರ್ತನೆಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುವ ಮೂಲಕ ಸುದ್ದಿಯಾಗುತ್ತಾರೆ.

ಇನ್ನು ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಿನಿಮಾರಂಗದಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಕನ್ನಡಿಗರು ನಿರ್ಧಾರ ಮಾಡಿದರು. ಹೌದು ನಟಿ ರಶ್ಮಿಕಾ ಮಂದಣ್ಣ ಆಗಾಗ ಕನ್ನಡ ಭಾಷೆಯ ವಿರುದ್ದ ಅಸಡ್ಡೆ ವ್ಯವಹಾರ ತೋರಿಸುತ್ತಾ ಮಾತನಾಡುತ್ತಿದ್ದರು, ಇನ್ನು ಇದರಿಂದ ನಟಿಯ ಮೇಲೆ ನೆಟ್ಟಿಗರು ಗರಂ ಆಗಿದ್ದರು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡಿಗರು ಸಿಕ್ಕಾಪಟ್ಟೆ ಟ್ರೊಲ್ ಮಾಡುತ್ತಿದ್ದರು. ಇನ್ನು ನಟಿ ರಶ್ಮಿಕಾ ಮಂದಣ್ಣ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ಮಾತ್ರವಲ್ಲದೆ ಬೇರೆ ಭಾಷೆಯ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಇನ್ನು ನಟಿ ರಶ್ಮಿಕಾ ಮಂದಣ್ಣ ಕನ್ನಡದ ಮುತ್ತು ನಮ್ಮ ನಿಮ್ಮ ಪ್ರೀತಿಯ ಅಪ್ಪು ಅವರ ಜೊತೆಗೆ ಸಹ ನಾಯಕಿಯಾಗಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ಪುನೀತ್ ರಾಜ್ ಕುಮಾರ್ ಅವರ ಅಂಜನಿಪುತ್ರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಇನ್ನು ಅಪ್ಪು ಅವರನ್ನು ಕಳೆದುಕೊಂಡಾಗ ಎಲ್ಲಾ ಕಲಾವಿದರು ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ದುಃಖ ವ್ಯಕ್ತಪಡಿಸಿದ್ದರು. ಆದರೆ ನಟಿ ರಶ್ಮಿಕಾ ಮಂದಣ್ಣ ಅವರ ಕುರಿತು ಯಾವುದೇ ಪೋಸ್ಟ್ ಹಾಕಿರಲಿಲ್ಲ. ಇದೀಗ ನಟಿ ರಶ್ಮಿಕಾ ಮಂದಣ್ಣ ಹಾಗೂ ಅಪ್ಪು ಅಭಿನಯದ ಅಂಜನೀಪುತ್ರ ಸಿನಿಮಾ ಐದು ವರ್ಷ ಪೂರೈಸಿದೆ.

ಈ ಖುಷಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅಪ್ಪು ಅವರ ಜೊತೆಗಿನ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಈ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಐದು ವರ್ಷಗಳು ಕಳೆದು ಹೋಗಿದೆ. ನಾನು ಇಂದಿಗೂ ಸಹ ಅಪ್ಪು ಅವರ ಜೊತೆಗೆ ನಡೆಸಿದ್ದ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತೇನೆ.

ಅವರು ನನ್ನ ಬಳಿ ಮಾತನಾಡುವಾಗ ನನಗಿಂತ ಹೆಚ್ಚು ನನ್ನ ಮೇಲೆ ಭರವಸೆ ಅವರಿಗಿತ್ತು. ಇನ್ನು ಈ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಹರ್ಷ ಸರ್ ಅವರಿಗೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಅಚಾನಕ್ಕಾಗಿ ಕನ್ನಡ ಸಿನಿಮಾ ಹಾಗೂ ಅಪ್ಪು ಮೇಲೆ ಪ್ರೀತಿ ಹುಟ್ಟಿ ಬಂದಿರುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *