ಇಂತಹ ಮಹಿಳೆಯರು ಎಲ್ಲಿ ಸಿಗ್ತರೋ ತಕ್ಷಣ ಮದುವೆಯಾಗಬೇಕು ಅಂತಾರೆ ಚಾಣಿಕ್ಯ ಯಾಕೆ ಗೊತ್ತಾ ನೋಡಿ..???

curious

ಮದುವೆ ಎನ್ನುವುದು ಪ್ರತಿಯೊಬ್ಬರ ಕನಸ್ಸು, ಅವರಿಗೆ ಸಂಗಾತಿಯಾಗಿ ಬರುವವರು ಯಾವ ರೀತಿ ಇರುತ್ತಾರೋ ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ. ಅವರ ಕುಟುಂಬದವರ ಜೊತೆಗೆ ಸರಿಯಾಗಿ ಬೇರೆಯುತ್ತಾರೋ ಇಲ್ಲವೋ ಎನ್ನುವ ಸಾಕಷ್ಟು ಪ್ರಶ್ನೆಗಳು ಪ್ರತಿಯೊಬ್ಬರಲ್ಲಿ ಸಹ ಮೂಡಿರುತ್ತದೆ. ಇನ್ನು ಸಹಜವಾಗಿ ಪ್ರತಿಯೊಬ್ಬರೂ ಸಹ ತಾವು

ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಸೌಂದರ್ಯದ ಬಗ್ಗೆ ಸಾಕಷ್ಟು ಊಹಿಸಿರುತ್ತಾರೆ. ಇನ್ನು ಕೇವಲ ಸೌಂದರ್ಯದ ಮಾತ್ರವಲ್ಲದೆ ಕೆಲವರು ತಮ್ಮ ಸಂಗಾತಿಯ ಗುಣದ ಬಗ್ಗೆ ಸಹ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇನ್ನು ಹುಡುಗರು ತಾವು ಮದುವೆಯಾಗುವ ಹುಡುಗಿಯಲ್ಲಿ ಸಾಕಷ್ಟು ಅಂಶಗಳನ್ನು ಅಪೇಕ್ಷಿಸುತ್ತಾರೆ.

ಆದರೆ ಯಾವ ಸ್ವಭಾವದ ಹುಡುಗಿಯನ್ನ ಮದುವೆಯಾದರೆ ಯಾವ ರೀತಿ ಇರುತ್ತದೆ ಎಂಬುದು ಯಾರಿಗೂ ಸಹ ಗೊತ್ತಿರುವುದಿಲ್ಲ. ಇನ್ನು ಚಾಣಕ್ಯ ತನ್ನ ಚಾಣಕ್ಯ ನೀತಿ ಪುಸ್ತಕದಲ್ಲಿ ಯಾವ ಹುಡುಗಿಯನ್ನ ಮದುವೆಯಾದರೆ ನಿಮ್ಮ ಜೀವನ ಸುಖಮಯವಾಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಹಾಗಾದರೆ ಚಾಣಕ್ಯನ ಪ್ರಕಾರ ಯಾವ ಹೆಣ್ಣು ನಿಮಗೆ ಸೂಕ್ತ ಎಂಬುದನ್ನು ತಿಳಿಯೋಣ ಬನ್ನಿ..

ಚಾಣಕ್ಯ ನೀತಿ ಹಾಗೂ ಶಾಸ್ತ್ರಗಳ ಪ್ರಕಾರ ಒಂದು ಉತ್ತಮ ಹುಡುಗಿಯನ್ನು ಮದುವೆಯಾದರೆ ಜೀವನ ಸುಖಮಯವಾಗಿರುತ್ತದೆ. ಹೌದು ಮೊದಲನೆಯದಾಗಿ ಮಹಿಳೆ ಉದ್ಯಮಕ್ಕೆ ಹೋಗದೆ ಒಳ್ಳೆಯ ಸಂಸ್ಕಾರವಂತೆಯಾಗಿದ್ದರೆ ಉತ್ತಮ. ಇಂತಹ ಮಹಿಳೆ ಮನೆಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ.

ಅಲ್ಲದೆ ತನ್ನ ಗುರು ಹಿರಿಯರಿಗೆ ಅವರಿಗೆ ಸಿಗಬೇಕಾದ ಗೌರವವನ್ನು ಸಹ ಕೊಡುತ್ತಾಳೆ ಎನ್ನುತ್ತಾರೆ. ಇನ್ನು ಉತ್ತಮ ಹೆಂಡತಿಯ ಎರಡನೇ ಗುಣ ಮಹಿಳೆ ಯಾವುದೇ ವಯಸ್ಸಿನ ತಾರತಮ್ಯ ಮಾಡದೆ ಎಲ್ಲರಿಗೂ ಸಹ ಸಮಾನವಾದ ಗೌರವ ಕೊಡಬೇಕು. ತನಗಿಂತ ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ ಎಲ್ಲರಿಗೂ ಸಮಾನವಾದ ಗೌರವ ಕೊಡಬೇಕು.

ಇನ್ನು ಒಬ್ಬ ಮಹಿಳೆ ತಮ್ಮ ಕುಟುಂಬದ ಗೌರವ ಹಾಗೆ ಅವರ ಸಂಸ್ಕೃತಿ ಸಂಪ್ರದಾಯಗಳನ್ನು ಕಾಪಾಡಿಕೊಂಡು ಹೋಗುವಂತವಳಾಗಿರಬೇಕು. ಇಂತಹ ಮಹಿಳೆ ಯಾವುದೇ ಕಷ್ಟ ಬಂದರು ಅದನ್ನು ಮೆಟ್ಟಿ ತನ್ನ ಹಾಗೂ ತನ್ನ ಕುಟುಂಬದವರ ರಕ್ಷಣೆ ಮಾಡುತ್ತಾಳೆ. ಅಲ್ಲದೆ ಉತ್ತಮ ಧ್ವನಿ ಇರುವ ಮಹಿಳೆಯನ್ನು ಮದುವೆಯಾಗಬೇಕು, ಏಕೆಂದರೆ ಆಕೆಯ ಧ್ವನಿ

ಕೇಳುತ್ತಿದ್ದಂತೆ ಎಲ್ಲಾ ನೋವು ಕಷ್ಟಗಳನ್ನು ಮರೆತು ಬಿಡುತ್ತೇವೆ. ಇನ್ನು ಆಕೆ ತನ್ನ ಮಾತುಗಳಿಂದ ತನ್ನ ಗಂಡನಲ್ಲಿ ಧೈರ್ಯ ತುಂಬಿ ಆತನನ್ನು ಯಾವುದೇ ಕೆಲಸವನ್ನು ಮಾಡುವಂತೆ ಉರಿದುಂಬಿಸುತ್ತಾಳೆ. ಇನ್ನು ಇಂತಹ ಮಹಿಳೆ ಸಿಕ್ಕರೆ ಪುರುಷರು ಯಾವುದೇ ತಡ ಮಾಡದೆ ಮದುವೆಯಾಗುವುದು ಉತ್ತಮ ಎಂದು ಚಾಣಕ್ಯ ನೀತಿಯಲ್ಲಿ ಬರೆದಿದೆ.

Leave a Reply

Your email address will not be published. Required fields are marked *