ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿಯರಲ್ಲಿ ಒಬ್ಬರು. ಸ್ಯಾಂಡಲ್ವುಡ್ ಮಾತ್ರವಲ್ಲದೆ ಮಾಲಿವುಡ್, ಟಾಲಿವುಡ್, ನಲ್ಲಿಯೂ ಸಹ ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಅವರು ಮಲಯಾಳಂ ಸಿನಿಮಾರಂಗದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ತಮ್ಮ ಬಹು ಕಾಲದ ಗೆಳೆಯ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಈ ಮದುವೆ ಬಹಳ ದಿನಗಳ ಕಾಲ ಉಳಿಯಲಿಲ್ಲ. ಮದುವೆಯಾದ ಒಂದೇ ವರ್ಷದಲ್ಲಿ ಚಿರಂಜೀವಿ ಸರ್ಜಾ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋದರು.
ಇನ್ನು ಚಿರು ಅವರ ನೆನಪಿನಲ್ಲಿ ಕೊರಗುತ್ತಿದ್ದ ಮೇಘನಾ ರಾಜ್ ಬದುಕಿಗೆ ಬೆಳಕಿನಂತೆ ಅವರ ಮಗ ರಾಯನ್ ರಾಜ್ ಸರ್ಜಾ ಬಂದರು. ಇನ್ನು ನಟಿ ಮೇಘನಾ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲಾ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದರು.
ಇನ್ನು ಸದ್ಯ ಇತ್ತೀಚೆಗೆ ನಟಿ ಮೇಘನಾ ರಾಜ್ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು, ಸದ್ಯ ಈ ವಿಷಯ ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದುಕೊಟ್ಟಿದೆ. ಇನ್ನು ನಟಿ ಮೇಘನಾ ರಾಜ್ ಇದೀಗ ಕನ್ನಡ ಜೊತೆಗೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಚಿತ್ರರಂಗದಲ್ಲಿ ಸಕತ್ ಬ್ಯುಸಿಯಾಗಿದ್ದಾರೆ.
ನಟ ಮೇಘನಾ ರಾಜ್ ಅವರು ಸದ್ಯ ತಮ್ಮ ಸಿನಿಮಾ ಕೆಲಸಗಳ ಜೊತೆಗೆ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಮೇಘನಾ ರಾಜ್ ಅವರು ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿರುತ್ತದೆ. ಇನ್ನು ಸ್ವತಃ ನಟಿ ಮೇಘನಾ ರಾಜ್ ಅವರು ಈ ಬಗ್ಗೆ ಮಾತನಾಡಿದ್ದು, ಸದ್ಯ ನನಗೆ ಎರಡನೇ ಮದುವೆಯ ಬಗ್ಗೆ ಯಾವುದೇ ಯೋಚನೆ ಇಲ್ಲ. ನಾನು ಸದ್ಯ ಚಿರು ಯೋಚನೆಯಲ್ಲಿದ್ದೇನೆ, ಬೇರೆ ಯಾವುದೇ ವಿಷಯ ನನ್ನ ತಲೆಯಲ್ಲಿಲ್ಲ ಎಂದಿದ್ದರು.
ಇನ್ನು ನಟಿ ಮೇಘನಾ ರಾಜ್ ಎರಡನೇ ಮದುವೆ ಕುರಿತು ನಟ ಧ್ರುವ ಸರ್ಜಾ ಇದೀಗ ಮಾತನಾಡಿದ್ದು, ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ನನ್ನ ಅತ್ತಿಗೆ ಚಿರು ಅವರ ನೆನಪಿನಲ್ಲಿ ಇಂದಿಗೂ ಸಹ ಕೊರಗುತ್ತಾರೆ. ಅವರು ರಾಯನ್ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಿದ್ದಾರೆ. ಇನ್ನು ಅವರ ಎರಡನೇ ಮದುವೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಇಲ್ಲ ಸಲ್ಲದ ವಿಚಾರಗಳಿಗೆ ಘಮನ ಕೊಡಬೇಡಿ ಎಂದಿದ್ದಾರೆ.