ಬಾಲಿವುಡ್ ಸಿನಿಮಾರಂಗದ ಸ್ಟಾರ್ ಕಲಾವಿದರ ಸಿನಿಮಾ ವಿಚಾರದ ಜೊತೆಗೆ ಅವರ ವೈಯಕ್ತಿಕ ವಿಚಾರಗಳನ್ನು ಸಹ ತಿಳಿದು ಕೊಳ್ಳಲು ಅವರ ಅಭಿಮಾನಿಗಳು ಬಹಳ ಕಾತುರರಾಗಿರುತ್ತಾರೆ. ಇನ್ನು ಬಾಲಿವುಡ್ ನ ನಟ ನಟಿಯರು ಹುಟ್ಟಿ ಬೆಳೆದಿದ್ದು ಎಲ್ಲಿ, ಅವರ ತಂದೆ ತಾಯಿ ಯಾರು, ಅವರ ಜೀವನ ಸಂಗಾತಿ ಯಾರು?
ಅಲ್ಲದೆ ಸ್ಟಾರ್ ಕಲಾವಿದರ ವಿಧ್ಯಾಭ್ಯಾಸ ಕುರಿತು ಸಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತದೆ. ಇನ್ನು ಇದೀಗ ಬಾಲಿವುಡ್ ನ ಸ್ಟಾರ್ ಕಲಾವಿದರ ವಿಧ್ಯಾಭ್ಯಾಸದ ಕುರಿತು ಇಂದು ನಿಮಗೆ ಮಾಹಿತಿ ನೀಡುತ್ತೇವೆ. ಯಾವ ಯಾವ ಸ್ಟಾರ್ ಕಲಾವಿದ ಎಷ್ಟು ವಿದ್ಯಾಭ್ಯಾಸ ಮುಗಿಸಿದ್ದಾರೆ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..
ಬಾಲಿವುಡ್ ನ ಕೆಲವು ಸ್ಟಾರ್ ಕಲಾವಿದರು ಕೇವಲ 10 ನೆ ತರಗತಿ ಮುಗಿಸಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ಉತ್ತಮ ಪದವಿಗಳನ್ನು ಪಡೆದು ನಂತರ ತಮ್ಮ ಕನಸಿನ ಕಡೆಗೆ ಮುಖ ಮಾಡಿದ್ದಾರೆ. ಹಾಗಾದರೆ ಯಾವ ಕಲಾವಿದರ ಯಾವ ಪದವಿ ಪಡೆದಿದ್ದಾರೆ ನೋಡೋಣ ಬನ್ನಿ .
ಇನ್ನು ಈ ಸಾಲಿನಲ್ಲಿ ಮೊದಲು ಇರುವುದು ನಟಿ ದೀಪಿಕಾ ಪಡುಕೋಣೆ. ನಟಿ ದೀಪಿಕಾ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ಆದರೆ ನಟಿ ದೀಪಿಕಾ ಕೇವಲ ತಮ್ಮ 12ನೇ ತರಗತಿ ಮುಗಿಸಿ ನಂತರ ಮಾಡಲಿಂಗ್ ಹಾಗೂ ಚಿತ್ರರಂಗದ ಕಡೆಗೆ ಮುಖ ಮಾಡಿದರು. ಇನ್ನು ನಟ ರಣವೀರ್ ಸಿಂಗ್ ಅವರು ಉತ್ತಮ ಶಿಕ್ಷಣ ಹೊಂದಿದ್ದಾರೆ. ಅಮೆರಿಕಾದ ಇಂಡಿಯನ್ ವಿಶ್ವವಿದ್ಯಾನಿಲಯದಲ್ಲಿ ನಟ ರಣವೀರ್ ಸಿಂಗ್ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನಟಿ ಆಲಿಯಾ ಭಟ್ ಅವರು ಸಹ ತಮ್ಮ 12 ನೀ ತರಗತಿ ಪೂರ್ಣಗೊಳಿಸಿ ನಂತರ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ನಟ ರಣವೀರ್ ಕಪೂರ್ ಅವರು ನ್ಯೂಯಾರ್ಕ್ ಆಫ್ ವಿಷುಯಲ್ ಆರ್ಟ್ಸ್ ನಲ್ಲಿ ಫಿಲಂ ಮೇಲಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಇದರ ಜೊತೆಗೆ ಬೇರೆ ಬೇರೆ ಕೋರ್ಸ್ ಗಳನ್ನು ಸಹ ಮಾಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದೆ.
ಇನ್ನು ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲಿ ಸಹ ತಮ್ಮ ಉತ್ತಮ ನಟನೆಯ ಮೂಲಕ ಛಾಪು ಮೂಡಿಸಿರುವ ನಟಿ ಪ್ರಿಯಾಂಕ ಚೋಪ್ರ ಸಹ ತಮ್ಮ ವಿಧ್ಯಾಭ್ಯಾಸದಲ್ಲಿ ಬಹಳ ಇಂದುಳಿದಿದ್ದಾರೆ. ಹೌದು ನಟಿ ಪ್ರಿಯಾಂಕ ಚೋಪ್ರ ಕೇವಲ ತಮ್ಮ 12 ನೇ ತರಗತಿ ಪಾಸ್ ಅದ ನಂತರ ವಿಧ್ಯಾಭ್ಯಾಸಕ್ಕೆ ಗುಡ್ ಬಾಯ್ ಹೇಳಿ, ಸಿನಿಮಾರಂಗದ ಕಡೆಗೆ ಮುಖ ಮಾಡಿದರು.
ಇನ್ನು ನಟಿ ಐಶ್ವರ್ಯ ರೈ ಕೂಡ ಕೇವಲ ತಮ್ಮ 12 ನೇ ತರಗತಿ ಪಾಸ್ ಆಗಿದ್ದಾರೆ. ಇನ್ನು ನಟಿ ಐಶ್ವರ್ಯ ಅವರಿಗೆ ಇನ್ನು ಮುನ್ ಓದುವ ಆಸೆ ಇತ್ತು, ಆದರೆ ಅವರು ವಿಶ್ವ ಸುಂದರಿ ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡ ನಂತರ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರು. ಇನ್ನು ಈ ಕಾರಣದಿಂದ ಅವರು ಮುಂದೆ ಓದಲು ಸಾಧ್ಯವಾಗಲಿಲ್ಲ.. ಇವರ ಬಗ್ಗೆ ನಿಮ್ಮ ಅನಿಸಿಕೆ ಏನು ತಪ್ಪದೇ ಕಮೆಂಟ ಮಾಡಿ..