ತಮಿಳು ಸ್ಟಾರ್ ಡೈರೆಕ್ಟರ್ ಕೈ ಹಿಡಿದ ಕನ್ನಡದ ಖ್ಯಾತ ನಟಿ? ಮದುವೆ ಆಗೇಬಿಟ್ರ..!! ಯಾರಿವಳು ನೋಡಿ..???

ಸ್ಯಾಂಡಲವುಡ್

ನಟಿ ಧನ್ಯಾ ಬಾಲಕೃಷ್ಣನ್ ಕನ್ನಡದಲ್ಲಿ ಹೆಚ್ಚಿನ ಜನರಿಗೆ ಗೊತ್ತಿರದ ಹೆಸರು. ಆದರೆ ಇವರು ಕನ್ನಡದ ಹುಡುಗಿ, ಧನ್ಯಾ ಅವರು ಹೆಚ್ಚಾಗಿ ಕಾಣಿಸಿಕೊಂಡಿರುವುದು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ. ಮೊದಲಿಗೆ ಸ್ನೇಹಿತೆಯ ಪಾತ್ರಗಳಲ್ಲಿ ಮತ್ತು ಎರಡನೆಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಧನ್ಯಾ ಬಾಲಕೃಷ್ಣನ್ ಅವರು ಮುಂದಿನ ದಿನಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ರಾಜ ರಾಣಿ ಮತ್ತು ಇನ್ನಿತರ ಸಿನಿಮಾಗಳಲ್ಲಿ ಧನ್ಯಾ ರಾಮ್ ಕುಮಾರ್ ಅವರ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಮೊದಲ ನಾಯಕಿಯಾಗಿಯೇ ಕಾಣಿಸಿಕೊಂಡರು ಧನ್ಯಾ. ಧನ್ಯಾ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. ಧನ್ಯಾ ಅವರು ಕನ್ನಡದ ಹುಡುಗಿ ಎಂದು ಹೇಳುವುದು ಸಂತೋಷದ ವಿಚಾರವೇ.

ಕನ್ನಡದಲ್ಲಿ ನಟಿಸಬೇಕು ಎನ್ನುವುದು ಧನ್ಯಾ ಬಾಲ ಕೂಡ ಧನ್ಯಾ ಬಾಲಕೃಷ್ಣನ್ ಅವರ ಆಸೆ ಆಗಿತ್ತು. ಅದೇ ರೀತಿ ಕನ್ನಡದಲ್ಲಿ ಕೂಡ ಎರಡು ಸಿನಿಮಾಗಳಲ್ಲಿ ನಟಿಸಿದರು. ಸಾರ್ವಜನಿಕರಿಗೆ ಸುವರ್ಣಾವಕಾಶ ಮತ್ತು ನೋಸಿ ಸ್ವಾಮಿ ನಾವಿರೋದು ಹೀಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಚ್ಚುಕಟ್ಟಾಗಿ ಮಾತನಾಡುವ ಧನ್ಯಾ ಅವರಿಗೆ ಕನ್ನಡದಲ್ಲಿ ನಟಿಸಬೇಕು ಎನ್ನುವುದು ಬಹಳ ಆಸೆ.

ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಧನ್ಯಾ ಅವರು ಇದೀಗ ಇದ್ದಕ್ಕಿದ್ದ ಹಾಗೆ ಮದುವೆ ಆಗುವ ಮೂಲಕ ದಿಢೀರ್ ಎಂದು ಎಲ್ಲರಿಗೂ ಶಾಕ್ ನೀಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಬಾಲಾಜಿ ಮೋಹನ್ ಅವರೊಡನೆ ಧನ್ಯಾ ಅವರು ಮದುವೆ ಆಗಿದ್ದು, ಜ್ ಮಾಡುಬೆ ಬಗ್ಗೆ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕಾಲಿವುಡ್ ಅಭಿಮಾನಿಗಳಿಗೆ ಈ ಮದುವೆ ಶಾಕ್ ನೀಡಿದೆ ಎಂದರೆ ತಪ್ಪಲ್ಲ.

ಬಾಲಾಜಿ ಮೋಹನ್ ಅವರು ತಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿದ್ದಾರೆ ಖ್ಯಾತ ನಟ ಧನುಷ್ ಅವರ ಸೂಪರ್ ಹಿಟ್ ಸಿನಿಮಾ ಮಾರಿ ಮತ್ತು ಮಾರಿ2 ಸಿನಿಮಾವನ್ನು ಬಾಲಾಜಿ ಮೋಹನ್ ಅವರೇ ನಿರ್ದೇಶನ ಮಾಡಿದರು. ಇನ್ನು ಕೆಲವು ಸಿನಿಮಾಗಳನ್ನು ಬಾಲಾಜಿ ಮೋಹನ್ ಅವರು ನಿರ್ದೇಶನ ಮಾಡಿದ್ದಾರೆ.

ಇದರಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ, ನಿರ್ದೇಶಕ ಬಾಲಾಜಿ ಮೋಹನ್ ಅವರಿಗೆ ಇದು ಎರಡನೇ ಮದುವೆ. ಮೊದಲಿಗೆ ಅವರು ಅರುಣಾ ಎನ್ನುವವರ ಜೊತೆಗೆ ಮದುವೆಯಾಗಿದ್ದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಅವರಿಂದ ಬೇರೆಯಾದರು. ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದಾರೆ..

ವಿಚ್ಛೇದನ ಪಡೆದ ನಂತರ, ಈಗ ಧನ್ಯಾ ಬಾಲಕೃಷ್ಣನ್ ಅವರ ಜೊತೆಗೆ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುಳಿವು ಕೂಡ ಯಾರಿಹೂ ಗೊತ್ತಿರಲಿಲ್ಲ. ಇನ್ನು ಈ ಜೋಡಿಯ ಅಭಿಮಾನಿಗಳು, ವಿಶ್ ಮಾಡೋದಕ್ಕೆ ಶುರು ಮಾಡಿದ್ದಾರೆ.

Leave a Reply

Your email address will not be published. Required fields are marked *