ಯಾವ ವಯಸ್ಸಿನವರು ಬಹಳ ಎಂಜಾಯ್ ಮಾಡುತ್ತಾರೆ ಗೊತ್ತಾ ..!! ಮದುವೆಗೆ ಹುಡುಗ ಹಾಗೂ ಹುಡುಗಿಯ ನಡುವೆ ವಯಸ್ಸಿನ ಅಂತರ ಎಷ್ಟರಬೇಕು ಗೊತ್ತಾ ನೋಡಿ…??

curious

ಮದುವೆ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ಮನಸ್ಥಿತಿ ಇರುವುದು ಸಹಜ. ಕೆಲವರು ಅಂತಸ್ತು ನೋಡಿ ಮದುವೆಯಾದರೆ, ಇನ್ನು ಕೆಲವರು ಗುಣ ನೋಡಿ ಮದುವೆಯಾಗುತ್ತಾರೆ. ಇನ್ನು ಕೆಲವರು ಹುಡುಗ ಅಥವಾ ಹುಡುಗಿಯ ಸೌಂದರ್ಯ ನೋಡಿ ಮದುವೆಯಾಗುವವರು ಇದ್ದಾರೆ. ಇನ್ನು ಕೆಲ ಮನೆಗಳಲ್ಲಿ ಹುಡುಗ ಹಾಗೂ ಹುಡುಗಿಯ ವಯಸ್ಸಿನ ಅಂತರ ಸಹ ನೋಡುತ್ತಾರೆ.

ಆದರೆ ಏನೇ ನೋಡಿದರೂ ಮಾಡಿದರು, ಮದುವೆಯಾಗುವ ಗಂಡು ಹೆಣ್ಣು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಒಬ್ಬರಿಗೊಬ್ಬರು ಸದಾ ಬೆನ್ನೆಲುಬಾಗಿ ನಿಂತು, ಸಂಸಾರ ನಡೆಸಿಕೊಂಡು ಹೋದರೆ ಅದಕ್ಕಿಂತ ಸ್ವರ್ಗ ಬೇರೆ ಯಾವುದೂ ಇಲ್ಲ ಎನ್ನುತ್ತಾರೆ ಹಿರಿಯರು. ಇನ್ನು ಮದುವೆ ಪ್ರತಿಯೊಬ್ಬರ ಕನಸು.

ಕೆಲವರು ಪ್ರೀತಿಸಿ ಮದುವೆಯಾದರೆ, ಇನ್ನು ಕೆಲವರು ತಮ್ಮ ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗುತ್ತಾರೆ. ಇತ್ತೀಚೆಗೆ ಯಾವುದೇ ಜಾತಿ, ಮತ, ಕುಲ, ಬಣ್ಣ ವಯಸ್ಸು ಯಾವುದು ಲೆಕ್ಕಕ್ಕೆ ಬರುತ್ತಿಲ್ಲ. ಇವೆಲ್ಲವೂ ಒಂದು ರೀತಿ ಒಳ್ಳೆಯದೇ. ಇನ್ನು ಮದುವೆಯಾಗುವ ಜೋಡಿಗಳಲ್ಲಿ ಸಾಮಾನ್ಯವಾಗಿ ಹುಡುಗ ಹುದುಗಿಗಿಂತ ಹಿರಿಯವನಾಗಿರಬೇಕು ಎನ್ನುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಜನರು ಭಾವಿಸುತ್ತಾರೆ. ಆದರೂ ಸಹ ಹುಡುಗನಿಗಿಂತ ಹುಡುಗಿಯ ವಯಸ್ಸು ಚಿಕ್ಕದಾಗಿರಬೇಕು ಎನ್ನುತ್ತಾರೆ. ಹಾಗಾದರೆ ಯಾರ ವಯಸ್ಸು ಎಸ್ಟಿರ ಬೇಕು. ವಯಸ್ಸಿಗೂ ಮದುವೆಗೂ ಸಂಬಂಧ ಏನು ಎನ್ನುವ ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ಸಾಮಾನ್ಯವಾಗಿ ವಯಸ್ಸಿನಲ್ಲಿ ಹುಡುಗ ಹುಡುಗಿಗಿಂತ ದೊಡ್ಡವನಾಗಿದ್ದರೆ ಅವರ ದಾಂಪತ್ಯ ಜೀವನ ತುಂಬಾ ಸುಖಕರವಾಗಿರುತ್ತದೆ ಎನ್ನಲಾಗುತ್ತದೆ. ಹೌದು ಇದರ ಮೂಲ ಅರ್ಥ ಏನೆಂದರೆ ಹುಡುಗ ಹಾಗೂ ಹುಡುಗಿ ಇಬ್ಬರ ವಯಸ್ಸು ಒಂದೇ ಇದ್ದರೆ, ಇದರ ನಡುವೆ ಆಗಾಗ ಮನಸ್ತಾಪಗಳು ಉಂಟಾಗಿ ಆ ಸಂಬಂಧ ತುಂಬಾ ದಿನ ಉಳಿಯುವುದಿಲ್ಲ ಎನ್ನಲಾಗುತ್ತದೆ.

ಇನ್ನು ಹುಡುಗನಿಗಿಂತ ಹುಡುಗಿಯ ವಯಸ್ಸು ಹೆಚ್ಚಿದ್ದರೆ, ಆಕೆ ಆತನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡುತ್ತಾಳೆ ಎನ್ನಲಾಗುತ್ತದೆ. ಇದರಿಂದ ಸಹ ಇಬ್ಬರ ಸಂಬಂಧ ಗಟ್ಟಿಯಾಗಿ ನಿಲ್ಲುವುದಿಲ್ಲ. ಇನ್ನು ಹುಡುಗ ಹಾಗೂ ಹುಡುಗಿಯ ನಡುವೆ ಮೂರರಿಂದ ನಾಲ್ಕು ವರ್ಷಗಳ ಅಂತರ ಇದ್ದರೆ ಉತ್ತಮ ಎನ್ನಲಾಗುತ್ತದೆ.

ಇದಕ್ಕಿಂತ ಹೆಚ್ಚು ವಯಸ್ಸಿನ ಅಂತರ ಇದ್ದರೂ ಸಹ ಅದು ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇನ್ನು ಮೂರರಿಂದ ನಾಲ್ಕು ವಯಸ್ಸಿನ ಅಂತರ ಇದ್ದರೆ, ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿ ನಿಲ್ಲುತ್ತದೆ, ಅಲ್ಲದೆ ಇಬ್ಬರೂ ಸಹ ಒಬ್ಬರನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *