ಇತ್ತೀಚೆಗೆ ಫ್ಯಾನ್ ಗಳ ನಡುವೆ ವಾರ್ ಸಿಕ್ಕಾಪಟ್ಟೆ ಮಿತಿ ಮೀರಿ ಹೋಗುತ್ತಿದೆ. ಒಬ್ಬ ನಟನನ್ನು ಇಷ್ಟ ಪಟ್ಟರೆ ಚಿತ್ರರಂಗದ ಮತ್ತೊಬ್ಬ ನಟನನ್ನು ಅವಹೇಳನ ಕಾರಿ ಮಾತುಗಳಿಂದ ಅವಮಾನಿಸುವುದು, ಹಾಗೆ ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡುವುದು, ಈ ರೀತಿ ಸಾಕಷ್ಟು ಪೋಸ್ಟ್ ಗಳನ್ನು ನಾವು ನೋಡಿದ್ದೇವೆ.
ಇನ್ನು ಇತ್ತೀಚೆಗೆ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಕ್ಕೆ ಹೋಗಿದ್ದಾಗ, ಕಿಡಿಗೇಡಿಯೊಬ್ಬ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ್ದ. ಇನ್ನು ಈ ಕೃತ್ಯವನ್ನು ಅಪ್ಪು ಅಭಿಮಾನಿಗಳು ಮಾಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ಅವಮಾನ ಮಾಡಲು ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಅಪ್ಪು ಅಭಿಮಾನಿಗಳು ನಾವು ಎಂದಿಗೂ ಈ ರೀತಿ ಹೀನ ಕೃತ್ಯ ಮಾಡುವುದಿಲ್ಲ, ಹೀಗೆ ಮಾಡಿರುವುದು ಯಾರೋ ನಮಗೆ ಗೊತ್ತಿಲ್ಲ ಎಂದಿದ್ದರು. ಆದರೂ ಸಹ ತಮ್ಮ ನೆಚ್ಚಿನ ನಟ ಡಿ ಬಾಸ್ ಅವರಿಗೆ ಅವಮಾನ ಮಾಡಿದ ಕಾರಣ.
ಡಿ ಬಾಸ್ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇನ್ನು ಇದೀಗ ಈ ಫ್ಯಾನ್ ವಾರ್ ಮಿತಿಮೀರಿ ಹೋಗಿದೆ. ಇಡೀ ಕರ್ನಾಟಕ ರಾಜ್ಯಾದ್ಯಂತ ಇರುವ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಅಭಿಮಾನಿಗಳು ಇದೀಗ ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳ ವಿರುದ್ಧವಾಗಿ ನಿಂತಿದ್ದಾರೆ.
ಈ ನಾಲ್ವರ ಅಭಿಮಾನಿ ಸಂಘಗಳು ನೆನ್ನೆ ಅಂದರೆ ಡಿಸೆಂಬರ್ 29ರಂದು ಬೆಂಗಳೂರಿನ ಗಾಂಧಿನಗರದ ಫಿಲಂ ಚೇಂಬರ್ ನ ಬಳಿ ದೊಡ್ಡ ಪ್ರತಿಭಟನೆಯನ್ನೆ ನಡೆಸಿದ್ದಾರೆ. ಇನ್ನು ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಜನವರಿ 26ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ನಿರ್ಧಾರ ಮಾಡಿದ್ದಾರೆ.
ಇನ್ನು ಇದೀಗ ಅಪ್ಪು ಅಭಿಮಾನಿಗಳು ನೀವು ಇದೇ ರೀತಿ ನಮ್ಮ ಅಪ್ಪು ಬಾಸ್ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನಿಂದಿಸುತ್ತಿದ್ದಾರೆ. ನೀವು ಅದ್ಯಾವ ರೀತಿ ಸಿನಿಮಾ ಬಿಡುಗಡೆ ಮಾಡುತ್ತೀರಾ ಎಂದು ನಾವು ನೋಡುತ್ತೇವೆ. ಜನವರಿ 26ರಂದು ನಿಮ್ಮ ಸಿನಿಮಾ ಬಿಡುಗಡೆ ಮಾಡುವ ದಿನ ನಾವು ಕರ್ನಾಟಕವನ್ನು ಬಂದ್ ಮಾಡಿಸುತ್ತೇವೆ.
ನಿಮ್ಮ ಸಿನಿಮಾ ಬಿಡುಗಡೆಯಾದರೂ ಆ ಸಿನಿಮಾವನ್ನು ಯಾರು ನೋಡದಂತೆ ಮಾಡುತ್ತೇವೆ ಎಂದು ದರ್ಶನ್ ಹಾಗೂ ಕ್ರಾಂತಿ ಸಿನಿಮಾದ ವಿರುದ್ಧ ದೊಡ್ಮನೆಯ ಅಭಿಮಾನಿಗಳು ಗುಡುಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..