ಕ್ರಾಂತಿ ಸಿನಿಮಾ ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ದರ್ಶನ್ ಅವರ ಕ್ರಾಂತಿ ಸಿನಿಮಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೇಶಾದ್ಯಂತ ಬಿಡುಗಡೆಯಾಗಲಿದೆ.
ಇನ್ನೂ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು ಕೇವಲ ಕೆಲವೇ ದಿನಗಳು ಬಾಕಿ ಉಳಿದಿದ್ದು, ನಟ ದರ್ಶನ್ ಅವರು ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಮಾಧ್ಯಮಗಳಿಂದ ಬ್ಯಾನ್ ಆಗಿದ್ದು, ಈ ಕಾರಣ ಅಭಿಮಾನಿಗಳೇ ಅವರ ಸಿನಿಮಾದ ಪ್ರಚಾರವನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಮಾಡುತ್ತಿದ್ದಾರೆ.
ಇನ್ನು ಇತ್ತೀಚೆಗೆ ನಟ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋಗಿದ್ದರು. ಹೊಸಪೇಟೆಯಲ್ಲಿ ಪ್ರಚಾರದ ವೇಳೆ ಕಿಡಿಗೇಡಿ ಒಬ್ಬರು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದರು. ಇನ್ನು ಈ ರೀತಿ ಅಪ್ಪು ಅವರ ಅಭಿಮಾನಿಗಳು ಮಾಡಿದ್ದಾರೆ ಎನ್ನಲಾಗಿತ್ತು. ಇನ್ನು ಈ ವಿಷಯದ ಬಗ್ಗೆ ಸ್ವತಹ ಶಿವರಾಜ್ ಕುಮಾರ್ ಅವರು ಸಹ ಮಾತನಾಡಿದ್ದರು.
ಯಾರ ಅಭಿಮಾನಿಗಳೇ ಆಗಲಿ ಈ ರೀತಿ ಮಾಡುವುದು ನಿಜಕ್ಕೂ ತಪ್ಪು ಎಂದು ಪ್ರತಾ ದರ್ಶನ್ ಅವರ ಪರವಾಗಿ ಶಿವಣ್ಣ ನಿಂತಿದ್ದರು. ಇನ್ನು ಈ ವಿಷಯದ ಬಗ್ಗೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಸಹ ಮಾತನಾಡಿ ದರ್ಶನ್ ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಹೇಳಿದ್ದರು.
ಯಾರೋ ಕಿಡಿಗೇಡಿಗಳು ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಕಿ-ಚ್ಚು ಹಚ್ಚಿ ಇವರಿಬ್ಬರ ನಡುವೆ ಶ-ತ್ರುತ್ವ ಬೆಳೆಸಲು ಈ ರೀತಿಯ ಹೀ-ನ ಕೃ-ತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದೀಗ ಈ ವಿಷಯದ ಬಗ್ಗೆ ದರ್ಶನ್ ಅವರ ತಾಯಿ ಮೀನ ತೂಗುದೀಪ್ ಅವರು ಸಹ ಮಾತನಾಡಿದ್ದಾರೆ.
ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ದೊಡ್ಮನೆಯ ಕುಟುಂಬದವರು ತಮಗೆ ಮಾಡಿರುವ ಸಹಾಯದ ಕುರಿತು ಮಾತನಾಡಿದ್ದಾರೆ. ದರ್ಶನ್ ಇಷ್ಟು ಬೆಳೆದಿದ್ದಾನೆ, ಅವನು ಇಷ್ಟರಮಟ್ಟಿಗೆ ಗುರುತಿಸಿಕೊಂಡಿದ್ದಾನೆ ಎಂದರೆ ಅದರಲ್ಲಿ ರಾಜಕುಮಾರ್ ಕುಟುಂಬದವರ ಸಹಾಯ ಕೂಡ ಆಗಿದೆ ಎಂದಿದ್ದಾರೆ.
ದರ್ಶನ್ ಅವರ ತಾಯಿ ಮಾತನಾಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..