ಸ್ಟುಡಿಯೋದಲ್ಲಿ ಕಣ್ಣೀರು ಹಾಕಿದ ಶಿವಣ್ಣ ಕಾರಣ ಏನು ಗೊತ್ತಾ ಏಲ್ಲರೂ ಶಾಕ್ ನೋಡಿ…???

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಸೆಂಚ್ಯುರಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಇದೀಗ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ವೇದ ಸಿನಿಮಾ ಶಿವರಾಜ್ ಕುಮಾರ್ ಅವರ 125ನೆ ಸಿನಿಮಾ ಆಗಿದ್ದು, ಸಿನಿಮಾದ ಬಗ್ಗೆ ಪ್ರಚಾರ ನಡೆಸಲು ಶಿವಣ್ಣ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇನ್ನು ಶಿವ ರಾಜ್ ಕುಮಾರ್ ಅವರು ಇದೀಗ ಒಂದು ಸಂದರ್ಶನದಲ್ಲಿ ಮಾತನಾಡುವ ವೇಳೆ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದರೆ ಶಿವಣ್ಣ ಅವರ ಕಣ್ಣೀರಿಗೆ ಕಾರಣ ಏನು? ಅಷ್ಟಕ್ಕೂ ಆಗಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಬನ್ನಿ..

ಶಿವಣ್ಣ ಅವರು ಇತ್ತೀಚಿಗೆ ವೇದ ಸಿನಿಮಾದ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಳ್ಳಲು ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇನ್ನು ಇದೆ ವೇಳೆ ಶಿವಣ್ಣ ಅವರು ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಮಾಧ್ಯಮದಲ್ಲಿ ನಿಮ್ಮ ಮೇಲೆ ನಿಮ್ಮ ತಾಯಿ ಎಷ್ಟು ಪ್ರಭಾವ ಬೀರಿದ್ದಾರೆ ಎನ್ನುವ ಪ್ರಶ್ನೆ ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿದ ಶಿವಣ್ಣ ಅವರು ಅಕ್ಷರಶಃ ಕಣ್ಣೀರು ಹಾಕಿ ಬಿಟ್ಟರು. ಸಣ್ಣ ಸಣ್ಣ ಸಂಗತಿಗಳಿಗೂ ನನಗೆ ಅಮ್ಮ ನೆನಪಾಗುತ್ತಾರೆ. ಪುಟ್ಟ ನೋವಾದರೂ ಸಹ ಅಲ್ಲಿ ಅಮ್ಮ ಇರಬೇಕಿತ್ತು ಎನಿಸುತ್ತದೆ. ಇಂದಿಗೂ ಅವರನ್ನು ಬರೆಯುವುದಕ್ಕೆ ಸಾಧ್ಯವಿಲ್ಲ ಎಂದು ಶಿವಣ್ಣ ಅವರು ತಮ್ಮ ತಾಯಿ ಪಾರ್ವತಮ್ಮ ಅವರ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಅವರ ವೃತ್ತಿ ಬದುಕಿನಲ್ಲಿ ಸಹ ಅವರ ತಾಯಿಯ ಪಾತ್ರ ದೊಡ್ಡದು. ಶಿವರಾಜ್ ಕುಮಾರ್ ಅವರ ಸಿನಿಮಾಗಳ ಕಥೆಯನ್ನು ಕೇಳುವುದು. ಸಿನಿಮಾ ನಿರ್ಮಾಣ ಮಾಡುವುದು, ವಿತರಿಸುವುದು, ಹೀಗೆ ಸಾಕಷ್ಟು ಕೆಲಸಗಳನ್ನು ಶಿವಣ್ಣ ಅವರ ತಾಯಿ ಪಾರ್ವತಮ್ಮ ರಾಜಕುಮಾರ್ ಅವರು ಮಾಡಿದ್ದಾರೆ.

ತಾಯಿಯ ಪ್ರೀತಿಯನ್ನು ಹಿಡಿಹಿಡಿಯಾಗಿ ನೀಡಿದ್ದಾರೆ. ಎಲ್ಲವನ್ನು ನೆನೆಸಿಕೊಂಡು ಶಿವರಾಜ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ನಮ್ಮ ತಾಯಿ ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಜೊತೆಗಿನ ಅದೆಷ್ಟೋ ನೆನಪುಗಳು ಇಂದಿಗೂ ನನ್ನನ್ನು ಕಾಡುತ್ತದೆ. ನನಗೆ ಏನೇ ಆದರೂ ಮೊದಲು ನನಗೆ ನೆನಪಿಗೆ ಬರುವುದು ನನ್ನ ತಾಯಿ.

ಈಗಲೂ ಸಹ ಕೆಲವೊಮ್ಮೆ ನನ್ನ ಅಮ್ಮ ಇಲ್ಲೇ ಎಲ್ಲೋ ಇದ್ದಾರೆ ಎನ್ನುವ ಭಾವನೆ ನನಗೆ ಬರುತ್ತದೆ. ಎಂದು ಅವರ ತಾಯಿಯನ್ನು ನೆನೆದು ಶಿವರಾಜ್ ಕುಮಾರ್ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *