ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅವರ ಮಾತುಗಳು ಅದೆಷ್ಟೋ ಜನರ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟಿದೆ. ಇನ್ನು ಸಿದ್ದೇಶ್ವರ ಸ್ವಾಮೀಜಿಗಳನ್ನು ಎಲ್ಲರೂ ನಡೆದಾಡುವ ದೇವರು ಎಂದೇ ಭಾವಿಸಿದ್ದರು. ಇನ್ನು ಅವರ ಪ್ರತಿ ಬಾರಿಯ ಪ್ರವಚನಗಳಿಗೆ ಜನರು ಲಕ್ಷ ಸಂಖ್ಯೆಗಳಲ್ಲಿ ಬರುತ್ತಿದ್ದರು.
ಇನ್ನು ಸಿದ್ದೇಶ್ವರ ಸ್ವಾಮೀಜಿಯವರು ಪತಂಜಲಿ ಯೋಗಸೂತ್ರದ ಬಗ್ಗೆ ಒಂದು ಪುಸ್ತಕವನ್ನು ಸಹ ಬರೆದಿದ್ದರು. ಇನ್ನು ಇದನ್ನು ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಬಗ್ಗೆ ಸಿದ್ದೇಶ್ವರ ಸ್ವಾಮಿಗಳು ಹೇಳಿದ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದೆ.
ಕಳೆದ ಜೂನ್ ತಿಂಗಳಲ್ಲಿ ಸುತ್ತೂರು ಮಠದಲ್ಲಿ ಒಂದು ಕಾರ್ಯಕ್ರಮದ ಜರುಗಿಸಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಇನ್ನು ಈ ವೇಳೆ ಸಿದ್ದೇಶ್ವರ ಸ್ವಾಮಿಗಳು ನರೇಂದ್ರ ಮೋದಿ ಅವರನ್ನು ಕುರಿತು ಹೊಗಳಿ ಮಾತನಾಡಿದ್ದಾರೆ. ಇನ್ನು ಸ್ವಾಮೀಜಿ ಅವರ ಮಾತುಗಳನ್ನು ಕೇಳಿ ನರೇಂದ್ರ ಮೋದಿ ಅವರು ಮನ ಸೋತಿದ್ದಾರೆ.
ಕಳೆದ ವರ್ಷ ಜೂನ್ 21 ರಂದು ಮೋದಿ ಅವರು ಅಂತಾರಾಷ್ಟ್ರೀಯ ಯೋಗಾ ದಿನದ ಪ್ರಯುಕ್ತ ಅವರು ಮೈಸೂರಿಗೆ ಆಗಮಿಸಿದ್ದರು. ಇನ್ನು ಈ ವೇಳೆ ನಡೆದ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ಮೋದಿ ಅವರನ್ನು ಹೊಗಳಿ ಮಾತನಾಡಿದ್ದಾರೆ.
ಮೋದಿ ಅವರ ಬಗ್ಗೆ ಎಷ್ಟು ಹೇಳಿದರೂ ಸಹ ಕಡಿಮೆ ಆಗುತ್ತದೆ. ಮೋದಿ ಅವರು ನಮ್ಮ ದೇಶದ ಪ್ರಧಾನಿ ಆಗಿರುವುದು ನಿಜಕ್ಕೂ ನಮ್ಮ ಹೆಮ್ಮೆ. ಮೋದಿ ಅವರ ಸದಾ ನಮ್ಮ ದೇಶದ ಅಭಿವೃದ್ಧಿ ಹಾಗೂ ಏಳಿಗೆಯ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿ ನಮ್ಮ ಭಾರತದ ಪ್ರಧಾನಿ ಆಗಿರುವುದು ನಿಜಕ್ಕೂ ನಮ್ಮ ಪುಣ್ಯ.
ಇನ್ನು ಮೋದಿ ಅವರು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳ ಜೊತೆಗೆ ಸಹ ಉತ್ತಮ ಸ್ನೇಹ ಹೊಂದಿದ್ದಾರೆ. ಮೋದಿ ಅವರು ಅದೆಷ್ಟೋ ಜನರ ಮನಸ್ಸಿನಲ್ಲಿ ತಮ್ಮ ಆದರ್ಶಗಳ ಮೂಲಕ ಮನೆ ಮಾಡಿದ್ದಾರೆ. ಇನ್ನು ಇಂತಹ ವ್ಯಕ್ತಿ ನಮ್ಮ ಭಾರತಕ್ಕೆ ನಿಜಕ್ಕೂ ಬೇಕು ಎಂದು ಮೋದಿ ಅವರನ್ನು ಸಿದ್ದೇಶ್ವರ ಸ್ವಾಮೀಜಿಗಳು ಹಾಡಿ ಹೊಗಳಿದ್ದಾರೆ. ಈ ಸಂಧರ್ಭದಲ್ಲಿ ಮೋದಿಜೀ ಅವರು ತಲೆಬಾಗಿ ನಮ್ಕರಿಸಿದ್ದು ಯಾಕೆಂದರೆ ಇವರ ಸರಳ ಸಜ್ಜನಿಕೆ ಸ್ವಭಾವ , ತತ್ವಜ್ಞಾನ, ಹಾಗೂ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಕಂಡು ಮೋದಿಜಿ ಅವರು ಅಚ್ಚರಿಗೊಂಡು ತಲೆಬಾಗಿಸಿ ಬಿಟ್ಟರು.
ಇನ್ನು ಸಿದ್ದೇಶ್ವರ ಸ್ವಾಮೀಜಿ ಅವರು ಬರೆದಿದ್ದ ಪತಂಜಲಿ ಯೋಗ ಸೂತ್ರ ಪುಸ್ತಕವನ್ನು ಅಂದು ಸ್ವತಃ ಮೋದಿ ಅವರೇ ಬಿಡುಗಡೆ ಸಹ ಮಾಡಿದ್ದರು. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…