ತಮ್ಮ ಅಂತಿಮ ದಿನಗಳಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ಮಾಡಿದ ಕೆಲಸ ಏನು ಗೊತ್ತಾ ಏಲ್ಲರೂ ಒಮ್ಮೆ ಈ ವಿಡಿಯೋ ನೋಡಿ?…

curious

ಎಲ್ಲರೂ ತಮಗಾಗಿ ತಮ್ಮವರಿಗಾಗಿ ಬಾಳುತ್ತಾರೆ, ಆದರೆ ಎಲ್ಲರೂ ನಮ್ಮವರೇ ಎಂದು ಬೇರೆಯವರಿಗಾಗಿ ಬಾಳುವವರು ತುಂಬಾ ಕಡಿಮೆ. ಇನ್ನು ತಮ್ಮ ಆಧ್ಯಾತ್ಮಿಕ ಯೋಗಶಾಲೆಯ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಜೀವನ ಕಟ್ಟಿಕೊಳ್ಳುವಲ್ಲಿ ಸಹಾಯ ಮಾಡಿರುವ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಕೂಡ ಒಬ್ಬರು.

ಹೌದು ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಅನುಭವಿಸಿ ಎಲ್ಲವನ್ನೂ ಕಳೆದುಕೊಂಡೆ ಎನ್ನುವ ಭಾವನೆಯಲ್ಲಿ ಬಂದ ಅದೆಷ್ಟೋ ಜನರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನಗಳನ್ನು ಕೇಳಿ, ಮಂ-ತ್ರಮುಗ್ದರಾಗಿ ಹೋಗಿದ್ದಾರೆ. ಇನ್ನು ಸಿದ್ದೇಶ್ವರ ಅವರ ಮಾತುಗಳನ್ನು ಕೇಳಲು ಕೂತರೆ, ನಮ್ಮ ಎಲ್ಲಾ ನೋವು ಹಾಗೆ ಎಲ್ಲಾ ದುಃಖಗಳು ನಿಮಿಷದಲ್ಲೇ

ಮಾಯವಾಗುತ್ತದೆ. ಏಕೆಂದರೆ ಅಷ್ಟರ ಮಟ್ಟಿಗೆ ಅವರ ಮಾತುಗಳು ಅವರ ಪ್ರವಚನಗಳು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಸಿದ್ದೇಶ್ವರ ಅವರ ಪ್ರವಚನಗಳನ್ನು ಕೇಳಲು ಸಾವಿರಗಳಲ್ಲಿ ಅಲ್ಲ ಲಕ್ಷಗಳಲ್ಲಿ ಜನರು ಬರುತ್ತಿದ್ದರು. ಅವರನ್ನು ನಡೆದಾಡುವ ದೇವರು ಎಂದೇ ಜನರು ಗುರುತಿಸುತ್ತಿದ್ದರು.

ಸಿದ್ದೇಶ್ವರ ಸ್ವಾಮೀಜಿಗಳ ಕೆಲಸಗಳನ್ನು ಮೆಚ್ಚಿ ಕರ್ನಾಟಕ ಸರ್ಕಾರ ಅವರಿಗೆ ಸಾಕಷ್ಟು ಅಂದರೆ, ಅತ್ಯುತ್ತಮ ನಾಗರೀಕ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಹಾಗೆ ಡಾಕ್ಟರೇಟ್ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿತ್ತು. ಆದರೆ ಸಿದ್ದೇಶ್ವರ ಸ್ವಾಮೀಜಿಗಳು ಅವೆಲ್ಲವನ್ನೂ ಸರ್ಕಾರಕ್ಕೆ ಅಷ್ಟೇ ಗೌರವದಿಂದ ಇಂತುರಿಗಿಸಿದ್ದರು. ಇನ್ನು ತಾನೊಬ್ಬ ಸಾಮಾನ್ಯ, ತನಗೆ ಈ ಪ್ರಶಸ್ತಿಗಳ,

ಅವಶ್ಯಕತೆ ಇಲ್ಲ ಎಂದಿದ್ದರು. ಇನ್ನು ಸಿದ್ದೇಶ್ವರ ಸ್ವಾಮೀಜಿಗಳು ಇಂದು ನಮ್ಮ ಜೊತೆಗಿಲ್ಲ ಎಂದರೆ ಅದು ನಿಜಕ್ಕೂ ಬೇಸರದ ಸಂಗತಿ. ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಆಶ್ರಮದ ಮೂಲಕ ಅದೆಷ್ಟೋ ಮಕ್ಕಳಿಗೆ ವಸತಿ ಊಟದ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಅಲ್ಲದೆ ಅದೆಷ್ಟೋ ಮಕ್ಕಳಿಗೆ ವಿದ್ಯಾದಾನ ಸಹ ಮಾಡುತ್ತಿದ್ದಾರೆ.

ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಕೊನೆಯ ದಿನಗಳ ವೀಡಿಯೋ ಒಂದು ವೈರಲ್ ಆಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಆಸ್ಪತ್ರೆಯಲ್ಲಿ ಚಿ-ಕಿತ್ಸೆ ಪಡೆಯುತ್ತರುವ ಸಮಯದಲ್ಲಿ ಸಹ ಅವರು ತಮ್ಮ ಆಶ್ರಮದ ಮಕ್ಕಳು ಹಾಗೂ ಶಾಲೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನು ಅಲ್ಲಿನ ಸಿಬ್ಬಂದಿಯೊಬ್ಬರು, ಶಾಲೆಯ ಕೆಲವು

ಫೋಟೋಗಳನ್ನು, ಸಿದ್ದೇಶ್ವರ ಸ್ವಾಮೀಜಿ ಅವರಿಗೆ ತೋರಿಸುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಇನ್ನು ಇಂತಹ ಸರಳ ಸ್ವಭಾವದ ಹಾಗೂ ಉತ್ತಮ ಗುಣಗಳ ವ್ಯಕ್ತಿ ಇಂದು ನಮ್ಮ ಜೊತೆಗಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

 

Leave a Reply

Your email address will not be published. Required fields are marked *