ತಂಜಾವೂರಿನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಹಾಗೂ ಸುಶೀಲ ಎಂಬುವವರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಗಣೇಶ್ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸಂಸಾರ ನಡೆಸುವ ಸಂಬಳ ಅವನಿಗೆ ಸಿಗುತ್ತಿತ್ತು. ಇನ್ನು ಗಣೇಶ್ ತುಂಬಾ ಜಿಪುಣನಾಗಿದ್ದ ಎಷ್ಟು ಬೇಕೋ ಅಷ್ಟು ಮಾತ್ರ ಹಣವನ್ನು ಖರ್ಚು ಮಾಡುತ್ತಿದ್ದ,
ಆದರೆ ಆತನ ಹೆಂಡತಿ ಸುಶೀಲ ಮಾತ್ರ ಹಣವನ್ನು ನೀರಿನಲ್ಲಿ ಖರ್ಚು ಮಾಡುತ್ತಿದ್ದಳು. ಗಣೇಶ್ ಹಾಗೂ ಸುಶೀಲ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಸಹ ಇತ್ತು. ಇನ್ನು ಗಣೇಶ್ ತನಗೆ ಬರುವ ಸಂಬಳದಲ್ಲಿ ಬಜೆಟ್ ಹಾಕಿಕೊಂಡು ಸರಿಯಾದ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತ ಸಂಸಾರ ನಡೆಸಲು ಯೋಜಿಸುತ್ತಿದ್ದರೆ,
ಸುಶೀಲ ಹಣವನ್ನು ಹೇಗೆ ಬೇಕೋ ಹಾಗೆ ಖರ್ಚು ಮಾಡುತ್ತಿದ್ದಳು. ಇನ್ನು ಹೆಂಡತಿ ಕೈಗೆ ಹಣವನ್ನು ಪಡೆದ ಗಣೇಶ್ ಆಕೆಗೆ ಬೇಕಾದಾಗ ಮಾತ್ರ ಎಷ್ಟು ಹಣ ಬೇಕು ಅಷ್ಟನ ಮಾತ್ರ ಕೊಟ್ಟು ಹಣವನ್ನು ಉಳಿಸಲು ಪ್ರಯತ್ನಿಸುತ್ತಿದ್ದ. ಇನ್ನು ಹಣವನ್ನು ತನ್ನ ಹೆಂಡತಿಗೆ ಕಾಣದಂತೆ ಮಕ್ಕಳ ಪುಸ್ತಕಗಳಲ್ಲಿ ಗಣೇಶ್ ಬಚ್ಚಿದುತ್ತಿದ್ದ.
ಇನ್ನೂ ಒಂದು ದಿನ ಗಣೇಶ್ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮಕ್ಕಳು ಸಹ ಶಾಲೆಗೆ ಹೋಗಿದ್ದರು ಮನೆಯಲ್ಲಿ ಒಬ್ಬಳೇ ಇದ್ದ ಸುಶೀಲ ಮನೆಯ ಬಳಿ ಸತೀಶ್ ಎನ್ನುವ ಗುಜರಿ ವ್ಯಾಪಾರಿ ಹಳೆ ಪಾತ್ರೆ ಪುಸ್ತಕಗಳನ್ನು ಕೊಳ್ಳಲು ಬಂದಿದ್ದ. ಆತನ ಶಬ್ದ ಕೇಳಿ ಸುಶೀಲ ಮನೆಯಲ್ಲಿರುವ ಹಳೆ ಪುಸ್ತಕಗಳು ಹಾಗೂ ನ್ಯೂಸ್ ಪೇಪರ್ ಗಳನ್ನು ಆತನಿಗೆ ಕೊಟ್ಟು,
ಹಣ ತೆಗೆದುಕೊಳ್ಳಲು ನಿರ್ಧರಿಸಿ ಅದನ್ನು ಮಾರಿದ್ದಾಳೆ. ಇನ್ನು ಸಂಜೆ ಮನೆಗೆ ಬಂದಾಗ ಗಣೇಶ ತನ್ನ ಖರ್ಚಿಗೆ ಹಣ ತೆಗೆದುಕೊಳ್ಳಲು ಮನೆಯಲ್ಲಿ ಪುಸ್ತಕಗಳನ್ನು ಹುಡುಕಿದ್ದಾನೆ ಆದರೆ ತನ್ನ ಕೈಗೆ ಯಾವುದೇ ಪುಸ್ತಕಗಳು ಸಿಗದ ಕಾರಣ ಹೆಂಡತಿ ಸುಶೀಲ ಬಳಿ ಕೇಳಿದಾಗ ನಡೆದಿದ್ದನ್ನು ಸುಶೀಲ ವಿವರಿಸಿದ್ದಾಳೆ. ಆಗ ಗಣೇಶ್ ನೀನು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀಯಾ ಎಂದು ನಾನು ನಮ್ಮ ಮಕ್ಕಳ ಪುಸ್ತಕಗಳಲ್ಲಿ ಹಣವನ್ನು ಸೇರಿಸಿಟ್ಟಿದ್ದೆ ,
ಆದರೆ ನೀನು ಇದೀಗ ಆ ಪುಸ್ತಕಗಳನ್ನು ಮಾರಿ ಹಣವನ್ನು ಹಾಗೂ ಜರಿ ವ್ಯಾಪಾರಿಗೆ ಕಟ್ಟಿದ್ದೀಯ ಎಂದು ಜಗಳ ಮಾಡುತ್ತಾರೆ. ನಂತರ ಮರುದಿನ ಬೆಳಗ್ಗೆ ಗಣೇಶ್ ಅದೇ ಬೇಸರದಲ್ಲಿ ಆಫೀಸಿಗೆ ಹೋಗುತ್ತಾನೆ. ಇನ್ನು ತನ್ನ ಕೆಲಸ ಮುಗಿಸಿ ಮನೆಯಲ್ಲಿ ಮಲಗಿದ್ದ ಸುಶೀಲ ಮನೆಗೆ ಅದೇ ಗುಜರಿ ವ್ಯಾಪಾರಿ ಬಂದು ತನಗೆ ಪುಸ್ತಕಗಳಲ್ಲಿ ಇಪ್ಪತೈದು ಸಾವಿರ ರೂಪಾಯಿ ಹಣ ದೊರಕಿತು ಎಂದು ಅದನ್ನು ಹಿಂತಿರುಗಿಸುತ್ತಾನೆ.
ಇನ್ನು ಈ ಹಣ ನೀವೇ ಇಟ್ಟು ಕೊಳ್ಳಬಹುದಿತ್ತು ಅಲ್ವಾ ಇದನ್ನು ಯಾಕೆ ತಂದುಕೊಟ್ಟರಿ ಎಂದು ಸುಶೀಲ ಕೇಳಿದ್ದಕ್ಕೆ, ನಾಗು ಜರಿ ವ್ಯಾಪಾರಿ, ನಾನೊಬ್ಬ ಪ್ರಾಮಾಣಿಕ ಮನುಷ್ಯ, ನಾನು ಕಷ್ಟಪಟ್ಟು ದುಡಿದು ತಿನ್ನಲು ಬಯಸುತ್ತೇನೆ ಬೇರೆಯವರ ಹಣ ನನಗೆ ಬೇಡ ಮೇಡಂ ಎಂದಿದ್ದಾರೆ. ಆತನ ಸ್ವಭಾವ ಕಂಡು ಸುಶೀಲ ಕೂಡ ಸಂತೋಷಪಟ್ಟಿದ್ದಾರೆ. ನೀನು ಸಂಜೆ ಮನೆಗೆ ಬಂದ ಪತಿ ಗಣೇಶ್ ನಿಗೆ ಹಣಕೊಟ್ಟು ನಡೆದಿದ್ದನ್ನು ಸುಶೀಲ ಹೇಳಿದ್ದಾಳೆ.