ಕನ್ನಡ ಚಿತ್ರರಂಗದ ಕುಚಿಕು ಗೆಳೆಯರು ಎಂದೆ ಒಂದು ಕಾಲದಲ್ಲಿ ಕರೆಸಿಕೊಳ್ಳುತ್ತಿದ್ದ ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ನಡುವೆ ಒಂದು ಸಣ್ಣ ಮನಸ್ತಾಪ ಮೂಡಿ ಈ ಇಬ್ಬರ ನಡುವಿನ ಸ್ನೇಹ ಮುರಿದು ಬಿತ್ತು. ಇನ್ನು ಅಂದಿನಿಂದ ಇಂದಿನವರೆಗೂ ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಈ ಇಬ್ಬರೂ ಯಾವಾಗ ಒಂದಾಗುತ್ತಾರೆ ಎಂದು ಕಾದು ಕುಳಿತಿದ್ದಾರೆ.
ಇನ್ನು ಈ ಇಬ್ಬರೂ ಮತ್ತೆ ಒಂದಾಗಲಿ ಎಂದು ಅವರ ಅಭಿಮಾನಿಗಳು ದಿನಾಲೂ ಆ ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ. ಇನ್ನು ಇದೀಗ ಕೊನೆಗೂ ಈ ಇಬ್ಬರೂ ಒಂದಾಗಿಯೆ ಬಿಟ್ಟರು. ಹೌದು ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಖ್ಯಾತ ನಟನ ಮಾತಿಗೆ ಬೆಲೆ ಕೊಟ್ಟು ಇದೀಗ ಒಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹಾಗಾದರೆ ಆ ನಟ ಯಾರು? ಅಷ್ಟಕ್ಕೂ ಆ ಖ್ಯಾತ ನಟ ಮಾಡಿದದ್ದಾದರೂ ಏನು? ಈ ಇಬ್ಬರೂ ಅಂದರೆ ನಟ ಕಿಚ್ಚ ಸುದೀಪ್ ಹಾಗೇ ನಟ ದರ್ಶನ್ ಅವರು ನಿಜಕ್ಕೂ ಒಂದಾಗಿದ್ದಾರಾ? ಎನ್ನುವ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿರಬಹುದು. ಇನ್ನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಅವರು ಒಂದಾಗಲಿ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಸುಮಾರು ಐದು ವರ್ಷಗಳ ನಂತರ ಸಿಹಿ ಸುದ್ದಿ ದೊರಕಿದೆ. ಹೌದು ಇತ್ತೀಚೆಗೆ ನಟ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ನಡೆದ ಘಟನೆ ಕುರಿತು ನಟ ಕಿಚ್ಚ ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದರು.
ನಟ ದರ್ಶನ್ ಅವರ ಅಭಿಮಾನಿಗಳು ಈ ಟ್ವೀಟ್ ನೋಡಿ ಬಹಳ ಸಂತಸ ಪಟ್ಟಿದ್ದರು. ಇನ್ನು ನಟ ಕಿಚ್ಚ ಸುದೀಪ್ ಅವರ ಟ್ವೀಟ್ ಗೆ ನಟ ದರ್ಶನ್ ಅವರು ಸಹ ಪ್ರತಿಕ್ರಿಯೆ ನೀಡಿದ್ದರು. ಇನ್ನು ಇದೀಗ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಒಂದಾಗಿದ್ದಾರೆ ಎನ್ನುವ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು ನಟ ದರ್ಶನ್ ನಟ ಕಿಚ್ಚ ಸುದೀಪ್ ಹಾಗೂ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಮೂರು ಜನ ಒಟ್ಟಾಗಿ ಇರುವ ಫೋಟೋ ನೋಡಿದ ಅಭಿಮಾನಿಗಳು ರವಿಚಂದ್ರನ್ ಅವರ ಮನೆಯಲ್ಲಿ ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಒಂದಾಗಿದ್ದಾರೆ ಎಂದು ನಂಬಿದ್ದರು.
ಆದರೆ ಈ ಫೋಟೋದ ಹಿಂದಿನ ಅಸಲಿ ಸತ್ಯ ಬೇರೇನೇ ಇದೆ. ಹೌದು ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಹಾಗೂ ನಟ ರವಿಚಂದ್ರನ್ ಅವರು ಜೊತೆಗೆ ಇರುವ ಈ ಫೋಟೋ ಅಸಲಿ ಅಲ್ಲ ಬದಲಿಗೆ ಈ ಫೋಟೋವನ್ನು ಯಾರೋ ಅಭಿಮಾನಿ ಈ ರೀತಿ ಎಡಿಟ್ ಮಾಡಿದ್ದಾರೆ. ಆದರೂ ಸಹ ಅವರ ಫ್ಯಾನ್ಸ್ ಕೂಡ ಆದಷ್ಟು ಬೇಗ ಈ ಫೋಟೋ ನಿಜವಾಗಲಿ ಎಂದು ಕೇಳಿ ಕೊಳ್ಳುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…