ಸದ್ಯ ಕನ್ನಡ ಸಿನಿಮಾರಂಗದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ನಟ ಯಶ್ ಎಂದರೆ ತಪ್ಪಾಗುವುದಿಲ್ಲ. ಪ್ರಶಾಂತ್ ನೀಲ್ ನಿರ್ದೇಶನ ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳ ಮೂಲಕ ನಟ ಯಶ್ ಇದೀಗ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಸಹ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ನಟ ಯಶ್ ಅವರು ಇದೀಗ ಪ್ಯನ್ ಇಂಡಿಯಾ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಇದೀಗ ಅವರ ಅಭಿಮಾನಿಗಳಲ್ಲಿ ಮೂಡಿದ್ದು, ಅವರ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಯಾವುದಾದರೂ ಅಪ್ಡೇಟ್,
ಸಿಗುತ್ತದೆಯ ಎಂದು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನು ಇದೀಗ ಯಶ್ ಅವರ ಹುಟ್ಟುಹಬ್ಬ ಸಮೀಪಕ್ಕೆ ಬರುತಿದ್ದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅವರ ಮನೆಯ ಮುಂದೆ ಹೋಗಿ ಕೇಕ್ ಕತ್ತರಿಸಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಇನ್ನು ಅದೇ ರೀತಿ ನಟ ಯಶ್ ಅವರ ಹುಟ್ಟುಹಬ್ಬವನ್ನು ಸಹ ಆಚರಿಸಲು ಅವರ ಅಭಿಮಾನಿಗಳು ಪ್ಲಾನ್ ಮಾಡಿದ್ದರು. ಆದರ ಈ ವರ್ಷ ನಟ ಯಶ್ ಅವರ ತಮ್ಮ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಕಾರಣದಿಂದ ಅವರ ಅಭಿಮಾನಿಗಳು ಈಗಲೇ ಯಶ್ ಅವರ ಮನೆಯ ಮುಂದೆ ಹೋಗಿ ಯಶ್ ಅವರಿಗೆ ಶುಭಾಶಯಗಳನ್ನು ತಿಳಿಸಿ ಬಂದಿದ್ದಾರೆ.
ಇನ್ನು ನಟಿ ರಾಧಿಕಾ ಪಂಡಿತ್ ಅವರು ಈ ಬಾರಿ ಯಶ್ ಅವರ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಬೇಕು ಎಂದು ಪ್ಲಾನ್ ಮಾಡಿದ್ದಾರೆ. ಇನ್ನು ಈ ಕಾರಣದಿಂದ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಮಕ್ಕಳಾದ ಐರಾ ಮತ್ತು ಯಾಥರ್ವ ಸೇರಿದಂತೆ ಅವರ ಇಡೀ ಕುಟುಂಬ ಇದೀಗ ದುಬೈಗೆ ತೆರಳಿದೆ.
ಇನ್ನು ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಈ ಬಾರಿ ವಿಶೇಷ ಉಡುಗೊರೆಯನ್ನು ನೀಡಲು ಅವರ ಮನೆಯವರೆಲ್ಲ ನಿರ್ಧರಿಸಿದ್ದಾರೆ. ಇನ್ನು ಯಶ್ ಅವರ ಮುದ್ದು ಮಗಳಾದ ಐರಾ ಯಶ್ ಅವರು ಸಹ ಯಶ್ ಅವರಿಗೆ ಹುಟ್ಟುಹಬ್ಬದ ದಿನ ವಿಶೇಷ ಉಡುಗೊರೆಯನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಹೌದು ಐರಾ ಯಶ್ ತಮ್ಮ ತಂದೆ ಯಶ್ ಅವರ ಹುಟ್ಟುಹಬ್ಬಕ್ಕೆ ತಮ್ಮ ಕೈಯಾರೆ ಬಿಡಿಸಿದ ಚಿತ್ರವನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….