ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಪ್ರೈರ್ ಎಂದೇ ಗುರುತಿಸಿಕೊಂಡಿದ್ದ ನಟಿ ರಕ್ಷಿತಾ ಹಾಗೂ ದರ್ಶನ್ ಅವರ ಜೋಡಿಯ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಹಳಷ್ಟು ಜನರಿಗೆ ಬಹಳ ಇಷ್ಟ ಇತ್ತು. ಇನ್ನು ಈ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಬಹಳ ಕಾತುರರಾಗೀ ಕಾಯುತ್ತಿದ್ದಾರೆ. ಆದರೆ ನಟಿ ರಕ್ಷಿತಾ ಅವರು ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದು ಬಿಟ್ಟಿದ್ದಾರೆ.
ಇನ್ನು ಇದೀಗ ಎಲ್ಲೆಡೆ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇತ್ತೀಚಿಗೆ ದರ್ಶನವರ ಕ್ರಾಂತಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಇದೀಗ ಟ್ರೈಲರ್ ನೋಡಿದ ನಟಿ ರಕ್ಷಿತಾ ಪ್ರೇಮ್ ಅವರು ನಟ ದರ್ಶನ್ ಅವರನ್ನು ನೋಡಲು ಬಂದಿದ್ದು, ಕ್ರಾಂತಿ ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಡಿ ಬಾಸ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇದೆ ಜನವರಿ 26ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಿರುವಾಗಲೇ ಕ್ರಾಂತಿ ಚಿತ್ರತಂಡ ಸಿನಿಮಾ ಬಿಡುಗಡೆಗು ಮುನ್ನ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿತ್ತು. ಇನ್ನು ಈ ಪಾರ್ಟಿಯಲ್ಲಿ ದರ್ಶನ್ ಸ್ನೇಹಿತೆ ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ನಟಿ ರಕ್ಷಿತಾ ಹಾಗೂ ಅವರ ಸಹೋದರ ರಾಣಾ ಅವರು ಭಾಗಿಯಾಗಿದ್ದಾರೆ.
ದರ್ಶನ ಅವರ ಕ್ರಾಂತಿ ಸಿನಿಮಾ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡ ಜೋಡಿ ದರ್ಶನ್ ಹಾಗೂ ರಕ್ಷಿತಾ ನಂತರ ಸೆಲ್ಫಿ ಕ್ಲಿಕಿಸಿಕೊಂಡು ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಇನ್ನು ಈ ಪಾರ್ಟಿಯ ಕೆಲವು ಸರಣಿ ಫೋಟೋಗಳನ್ನು ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಕ್ರಾಂತಿ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಇದೀಗ ನಟಿ ರಕ್ಷಿತಾ ಪ್ರೇಮ್ ಅವರು ಸಿನಿಮಾದ ಟ್ರೈಲರ್ ನೋಡಿ ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ನಟಿ ರಕ್ಷಿತಾ ಪ್ರೇಮ್, ಕ್ರಾಂತಿ ಸಿನಿಮಾದ ಟ್ರೈಲರ್ ನೋಡಿ ಮೈ ಜುಮ್ ಎನ್ನುತ್ತದೆ. ಕ್ರಾಂತಿ ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದೆ.
ದರ್ಶನ್ ಸಿನಿಮಾಗಳಲ್ಲಿ ಕ್ರಾಂತಿ ಸಿನಿಮಾ ಹೈಲೈಟ್ ಆಗಲಿದೆ ಎಂದು ಹೇಳಬಹುದು. ಇನ್ನು ದರ್ಶನ್ ಅವರು ಈ ಸಿನಿಮಾಗಾಗಿ ಬಹಳ ಅದ್ಬುತವಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಒಳ್ಳೆಯ ಸಂದೇಶವನ್ನು ಒಳಗೊಂಡಿದೆ. ಇನ್ನು ಈ ಸಿನಿಮಾ ಶಿಕ್ಷಣದ ಕ್ರಾಂತಿಯನ್ನು ಇನ್ನಷ್ಟು ಹೆಚ್ಚಿಸಲಿ. ಇಡೀ ಕ್ರಾಂತಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ.
ನಾನು ಮತ್ತು ನನ್ನ ಕುಟುಂಬದವರು ಕ್ರಾಂತಿ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇವೆ. ನೀವು ಸಹ ಕ್ರಾಂತಿ ಸಿನಿಮಾವನ್ನು ತಪ್ಪದೆ ನೋಡಿ ಎಂದು ಕ್ರಾಂತಿ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ ನಟಿ ರಕ್ಷಿತಾ ಪ್ರೇಮ್. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…