ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಬೇರೆ ಭಾಷೆಗಳಲ್ಲಿ ಏಷ್ಟು ಪ್ರೀತಿಸುತ್ತಾರೆ, ಅಷ್ಟೇ ನಮ್ಮ ಕನ್ನಡದವರು ಆಕೆಯನ್ನು ದ್ವೇಷಿಸುತ್ತಾರೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಭಾಷೆಯ ವಿರುದ್ದ ತೋರುವ ಆಸಡ್ಡೆ ವ್ಯವಹಾರ ಕಾರಣ.
ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ವಿಚಾರ ಎಲ್ಲರಿಗೂ ಸಹ ಗೊತ್ತೇ ಇದೆ. ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬಾಯ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕೇಳಿಕೊಳ್ಳುವಷ್ಟು ಸದ್ದು ಮಾಡಿರಲಿಲ್ಲ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ,
ಸಿದ್ದಾರ್ಥ್ ಮಲ್ಹೋತ್ರ ಅವರ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸದ್ಯ ಎಲ್ಲೆಡೆ ಬಹಳ ಸದ್ದು ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಸಹ ಪಾಕಿಸ್ತಾನಿ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಮೊದಲು ದುಲ್ಕರ್ ಸಲ್ಮಾನ್ ಹಾಗೂ ಮೃಣಲ್ ಠಾಕೂರ್ ಅಭಿನಯದ ಸೀತಾರಾಮ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಪಾಕಿಸ್ತಾನಿ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಇನ್ನು ಇದೀಗ ಮತ್ತೊಮ್ಮೆ ನಟಿ ರಶ್ಮಿಕಾ ಮಂದಣ್ಣ ಪಾಕ್ ಹುಡುಗಿಯ ಗೆಟಪ್ ನಲ್ಲಿ ಮಿಷನ್ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆಯಾಗುವುದು ಸದ್ಯ ತಡವಾಯಿತು. ಈ ನಂತರ ನಡೆಸಿದ್ದ ಗುಡ್ ಬೈ ಸಿನಿಮಾ ತೆರೆ ಮೇಲೆ ಮಿಷನ್ ಮಜ್ನು ಸಿನಿಮಾಗೆಂತ ಮೊದಲು ಬಿಡುಗಡೆಯಾಯಿತು.
ಆದರೆ ರಶ್ಮಿಕಾ ನಟನೆಯ ಗುಡ್ ಬಾಯ್ ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಇನ್ನು ಇದೀಗ ನಟ ಸಿದ್ದಾರ್ಥ್ ಮಲೋತ್ರ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ ಮಿಷನ್ ಮಜ್ನು ಸಿನಿಮಾ ಇದೇ ಜನವರಿ 20 ರಿಂದ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಒಂದು ವೇಳೆ ಈ ಸಿನಿಮಾ ಹಿಟ್ಟಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಬಾಲಿವುಡ್ ನಲ್ಲಿ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯ ಈ ಜೋಡಿಯನ್ನು ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…