ಸೋನುಗೆ ಕೈಕೊಟ್ಟ ರಾಕೇಶ್! ಅಮೂಲ್ಯ ಜೊತೆಗೆ ಲವ್ ಡೇ’ಟಿಂಗ್ ಶುರು?… ನೋಡಿ

Entertainment

ಕನ್ನಡದ ಬಿಗ್ ಬಾಸ್ ಸೀಸನ್ 9 ಇದೀಗ ಬಹಳ ಅದ್ದೂರಿಯಾಗಿ ಮುಕ್ತಾಯಗೊಂಡಿದೆ. ನಟ ರೂಪೇಶ್ ಶೆಟ್ಟಿ ಈ ಬಾರಿ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ರಾಕೇಶ್ ಅಡಿಗ ಇದ್ದಾರೆ. ಬಿಗ್ ಬಾಸ್ ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗ ರಾಕೇಶ್ ಅಡಿಗ ಹಾಗೂ ಅಮೂಲ್ಯ ಇಬ್ಬರೂ ಸಹ ಲವ್ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇನ್ನು ಇದೀಗ ರಾಕೇಶ್ ಹಾಗೂ ಅಮೂಲ್ಯ ಅವರ ಸ್ನೇಹ ಬಿಗ್ ಬಾಸ್ ಮುಗಿದ ನಂತರ ಸಹ ಮುಂದುವರೆದಿದೆ.

ಹೌದು ಬಿಗ್ ಬಾಸ್ ಸೀಸನ್ ಮುಗಿದ ನಂತರ ರಾಕೇಶ್ ಹಾಗೂ ಅಮೂಲ್ಯ ಅವರು ಇದೀಗ ಭೇಟಿ ಮಾಡಿದ್ದಾರೆ. ಇನ್ನು ಇದೀಗ ಇವರಿಬ್ಬರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬಗ್ಗೆ ಇದೀಗ ವಿಧವಿಧವಾದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಇರುವಾಗ ರಾಕೇಶ್ ಹಾಗೂ ಸೋನು ಶ್ರೀನಿವಾಸ್ ಇಬ್ಬರೂ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇನ್ನು ರಾಕೇಶ್ ಟಿ ವಿ ಬಿಗ್ ಬಾಸ್ ಗೆ ಸೆಲೆಕ್ಟ್ ಆದ ನಂತರ ಸೋನು ಅವರು ಬಹಳ ಸಂತೋಷ ಪಟ್ಟಿದ್ದರು. ಇನ್ನು ಸೋನು ಅವರು ಮನೆಯ ಹೊರಗೆ ರಾಕೇಶ್ ಅವರಿಗೆ ಬಹಳ ಬೆಂಬಲ ಸಹ ನೀಡಿದ್ದರು.

ಇನ್ನು ಇದೀಗ ರಾಕೇಶ್ ಅಡಿಗ ಅವರು ಸೋನು ಅವರನ್ನು ಅಮೂಲ್ಯ ಅವರು ಬಂದ ಮೇಲೆ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ ಎಂದು ಕಾಣುತ್ತದೆ. ಬಿಗ್ ಬಾಸ್ ಶೋನಲ್ಲಿ ಅಮೂಲ್ಯ ಹಾಗೂ ರಾಕೇಶ್ ಇಬ್ಬರೂ ಜೊತೆಗಿರುವುದನ್ನು ಕಂಡು ಕೆಲವರು ಕೆಲವು ಮಾತುಗಳನ್ನು ಹೇಳಿದ್ದರು. ಆದರೆ ಇದಕ್ಕೆ ಇಬ್ಬರೂ ಸಹ ತಾವು ಕೇವಲ ಸ್ನೇಹಿತರು ಎಂದು ಉತ್ತರಿಸಿದ್ದರು.

ಇನ್ನು ಇದೀಗ ಬಿಗ್ ಬಾಸ್ ಮುಗಿದ ನಂತರ ರಾಕೇಶ್ ಹಾಗೂ ಅಮೂಲ್ಯ ಇಬ್ಬರೂ ಸಹ ಭೇಟಿಯಾಗಿದ್ದಾರೆ. ಈ ಫೋಟೋಗಳನ್ನು ಸ್ವತಃ ನಟಿ ಅಮೂಲ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಫೋಟೋ ನೋಡಿ ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಈ ಇಬ್ಬರೂ ಯಾವುದಾದರೂ ಸಿಹಿ ಸುದ್ದಿಯನ್ನು ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *