ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಇದೇ ಜನವರಿ 26ರಂದು ಬಹಳ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇನ್ನು ದರ್ಶನ್ ಅವರು ಸದ್ಯ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತುಂಬಾ ಬಿಸಿಯಾಗಿದ್ದಾರೆ. ಇನ್ನು ಇತ್ತೀಚಿಗೆ ಕ್ರಾಂತಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.
ಇನ್ನು ಟ್ರೇಲರ್ ಕುರಿತು ಕೆಲವರಿಗೆ ಕೆಲವು ಪ್ರಶ್ನೆಗಳು ಕಾಡಿತ್ತು. ದರ್ಶನ್ ಅವರು ಪ್ರಚಾರ ಕೆಲಸಗಳಲ್ಲಿ ಬಿಸಿಯಾಗಿದ್ದು, ಪ್ರಚಾರ ಸಮಯದಲ್ಲಿ ಮಾಧ್ಯಮದವರು ದರ್ಶನವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ನಟ ದರ್ಶನ್ ಅವರು ಕೊಟ್ಟ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ದರ್ಶನ್ ಅವರಿಗೆ ಇತ್ತೀಚೆಗೆ ಕ್ರಾಂತಿ ಚಿತ್ರತಂಡದ ಜೊತೆಗೆ ಪ್ರಚಾರ ಹೋದಾಗ ಅವರಿಗೆ ಈ ವೇಳೆ ಕ್ರಾಂತಿ ಸಿನಿಮಾದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಟ ದರ್ಶನ್ ಅವರಿಗೆ ಅಲ್ಲಿದ್ದ ಮಾಧ್ಯಮದವರು ಮತ್ತೊಂದು ಶಾಕಿಂಗ್ ಪ್ರಶ್ನೆ ಕೇಳಿದರು. ಇನ್ನು ಇದೀಗ ಈ ಪ್ರಶ್ನೆಗೆ ನಟ ದರ್ಶನ್ ಅವರು ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ಅವರಿಗೆ ನಿಮ್ಮ ಕ್ರಾಂತಿ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ, ಟ್ರೇಲರ್ ನೋಡಿದ ನಂತರ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದೆ. ಅಲ್ಲದೆ ಸಿನಿಮಾದಲ್ಲಿ ಶಿಕ್ಷಣದ ಕುರಿತು ಕೆಲವು ವಿಚಾರಗಳನ್ನು ತೋರಿಸಲಾಗಿದೆ. ಇದರಿಂದ ಸಮಾಜದಲ್ಲಿ ಸುಧಾರಣೆ ಬರುತ್ತದೆ ಎನ್ನುವ ಆಸೆ ಎಲ್ಲರಲ್ಲೂ ಇದೆ.
ಇದರ ಜೊತೆಗೆ ಸಿನಿಮಾದ ಟ್ರೇಲರ್ ನಲಿ ಮತ್ತೊಂದು ವಿಷಯ ಹೈಲೈಟ್ ಆಗಿದೆ, ಇನ್ನು ಇತ್ತೀಚೆಗೆ ನಡೆದ ಘಟನೆಗೂ ಹಾಗೂ ಈ ವಿಷಯಕ್ಕೂ ಏನಾದರೂ ಸಂಬಂಧ ಇದೆಯಾ ಎನ್ನುವ ಪ್ರಶ್ನೆಯನ್ನು ದರ್ಶನ್ ಅವರಿಗೆ ಕೇಳಲಾಗಿತ್ತು. ಇನ್ನು ಇದಕ್ಕೆ ಉತ್ತರಿಸಿದ ದರ್ಶನ್ನವರು ಈ ಸಿನಿಮಾ ತೆಗೆದು ಸುಮಾರು ಆರು ಏಳು ತಿಂಗಳು ಕಳೆದಿದೆ.
ಅದಕ್ಕೂ ಇದಕ್ಕೂ ಸಂಬಂಧ ಇರಲು ಹೇಗೆ ಸಾಧ್ಯ. ಇನ್ನು ನೀವು ಈ ಬಗ್ಗೆ ನಿರ್ದೇಶಕ ಹರಿಕೃಷ್ಣ ಅವರನ್ನು ಕೇಳಬೇಕು ಎಂದಿದ್ದಾರೆ. ಇನ್ನು ಪಕ್ಕದಲ್ಲೇ ಕುಳಿತಿದ್ದ ಹರಿಕೃಷ್ಣ ಅವರು ಸಿನಿಮಾ ತೆಗೆದು ತುಂಬಾ ತಿಂಗಳುಗಳು ಕಳೆದು ಹೋಗಿದೆ, ಇನ್ನು ಅಭಿಷೇಕು ಸಿನಿಮಾದಲ್ಲಿರುವ ದೃಶ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಇದು ಆಕಸ್ಮಿಕ ಅಷ್ಟೇ ಎಂದಿದ್ದಾರೆ ಹರಿಕೃಷ್ಣ. ನಿನ್ನ ಮಾತು ಮುಂದುವರಿಸಿದ ದರ್ಶನ್ ಅವರು ಮುಂದೆ ಇದೇ ರೀತಿ ನಡೆಯುತ್ತದೆ ಎಂದು ನಮಗೆ ತಿಳಿದಿದ್ದರೆ. ನಾನು ಕ್ರಾಂತಿ ಸಿನಿಮಾದ ಕಲೆಕ್ಷನ್ ಎಷ್ಟಾಗುತ್ತದೆ ಎನ್ನುವುದನ್ನು ಸಹ ಮುಂದೆ ಯೋಚಿಸುತ್ತಿದ್ದೆ ಎಂದಿದ್ದಾರೆ. ಸದ್ಯ ದರ್ಶನವರ ಈ ಹಾಸ್ಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.